ಕೋಲ್ಕತ್ತಾ: ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಒಂದೇ ಕುಟುಂಬದ ಮೂವರು ಸದಸ್ಯರು ಫೇಸ್‌ಬುಕ್‌ನಲ್ಲಿ ಲೈವ್ಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂಟಿತನ ಮತ್ತು ಏಕಾಂತವು ಮೂಲತಃ ಜನರನ್ನು ಪ್ರೇರೇಪಿಸಲು ಕಾರಣ ಎಂದು ಮನೋವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.
ಇಂತಹ ಕ್ರಮಗಳನ್ನು ಆಯ್ಕೆ ಮಾಡಲು ಈ ಹಿಂದೆ ಜನರು ಡೆತ್ ನೋಟ್ಗಳನ್ನು ಬರೆಯುತ್ತಿದ್ದರು. ಆದರೆ, ಸಾಮಾಜಿಕ ಜಾಲತಾಣಗಳು ಈಗ ಜೀವನದ ಅವಿಭಾಜ್ಯ ಅಂಗವಾಗಿರುವುದರಿಂದ ಟ್ರೆಂಡ್ ಬದಲಾಗುತ್ತಿದೆ.
ಜೀವನದ ಪ್ರತಿಯೊಂದು ಹಂತದಲ್ಲೂ ಸಮಾಜದಿಂದ ತಾನು ವಂಚಿತನಾಗಿದ್ದೇನೆ ಎಂಬ ಭಾವನೆಯು ವ್ಯಕ್ತಿಯಲ್ಲಿ ಮೂಡಿದಾಗ ಅವನು ತನ್ನ ಸಂಕಟವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಲು ಬಯಸುತ್ತಾನೆ. ಹೀಗಾಗಿ ಆ ಸಮಯದಲ್ಲಿ ವ್ಯಕ್ತಿ ಸಾಮಾಜಿಕ ಜಾಲಾತಾಣಗಳನ್ನು ಆಶ್ರಯಿಸುತ್ತಾನೆ. ಮುಖ್ಯವಾಗಿ ಫೇಸ್‌ಬುಕ್‌ನಂತಹ ಮಾಧ್ಯಮಗಳ ಮೂಲಕ ಲೈವ್ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದು ಮನೋವೈದ್ಯರು ಹೇಳಿದ್ದಾರೆ.
ಇದೊಂದು ಆಘಾತಕಾರಿ ಬೆಳವಣಿಗೆ:ಈ ವಿಷಯದ ಕುರಿತು 'ಈಟಿವಿ ಭಾರತ'ದೊಂದಿಗೆ ಕೆಲವು ಮನೋವೈದ್ಯರು ಮಾತನಾಡಿದ್ದಾರೆ. ಕೋಲ್ಕತ್ತಾ ಮೂಲದ ಕೆಪಿಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಧ್ಯಾಪಕರಾದ ಡಾ.ತೀರ್ಥಂಕರ ಗುಹಾ ಇದು ಒಂದು ರೀತಿಯ ಆಘಾತಕಾರಿ ಸಂಸ್ಕೃತಿ ಎಂದು ಹೇಳಿದ್ದಾರೆ. ಮನುಷ್ಯನು ಸಾಮಾನ್ಯವಾಗಿ ತನ್ನ ವೈಫಲ್ಯ ಮತ್ತು ಮಾನಸಿಕ ಖಿನ್ನತೆಗೆ ಸಮಾಜವನ್ನು ಹೊಣೆಗಾರನಾಗಿಸುತ್ತಾನೆ.
ಆ ಸಮಯದಲ್ಲಿ ಆ ವ್ಯಕ್ತಿಯು ಸಮಾಜದ ವಿರುದ್ಧ ಸಾರ್ವಜನಿಕ ಅಭಿಪ್ರಾಯವನ್ನು ಸೃಷ್ಟಿಸಲು ಪ್ರಯತ್ನಿಸುತ್ತಾನೆ. ಅದಕ್ಕಾಗಿಯೇ ಆ ವ್ಯಕ್ತಿಯು ಸಾಮಾಜಿಕ ಮಾಧ್ಯಮದಲ್ಲಿ ಲೈವ್ ಆಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸಾಮಾಜಿಕ ಸಂಪರ್ಕಗಳ ಮುಖ್ಯ ಮಾಧ್ಯಮವೆಂದರೆ ಮಾಧ್ಯಮಗಳು. ಸಾಮಾನ್ಯವಾಗಿ ಮೌಖಿಕ ಸಂವಹನಗಳು ಜನರು ತಮ್ಮ ಉದ್ವೇಗ, ಆತಂಕ ಅಥವಾ ನೋವು ತಿಳಿಸಲು ಸಹಾಯ ಮಾಡುತ್ತವೆ. ಆದರೆ, ಮೌಖಿಕ ಸಂವಹನದ ವ್ಯಾಪ್ತಿಯು ಸೀಮಿತವಾದಾಗ, ಜನರು ಆಗಾಗ್ಗೆ ಇಂತಹ ವಿಲಕ್ಷಣ ಕ್ರಮಗಳನ್ನು ಆಶ್ರಯಿಸುತ್ತಾರೆ ಎಂದು ಅವರು ಹೇಳಿದರು.
ನಗರದ ಮೂಲದ ಮತ್ತೊಬ್ಬ ಮನೋವೈದ್ಯ ಓಂ ಪ್ರಕಾಶ್ ಸಿಂಗ್ ಮಾತನಾಡಿ, ಇದರ ಹಿಂದಿನ ಕಾರಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತವೆ. ಆದರೆ, ಮೂಲ ಕಾರಣ ಒಂಟಿತನವಾಗಿದೆ. ಒಂಟಿತನದ ಭಾವನೆಯು ವಿಪರೀತ ಹಂತವನ್ನು ತಲುಪಿದಾಗ ಹೇಳಲಾಗದ ಅನೇಕ ಭಾವನೆಗಳು ಆ ವ್ಯಕ್ತಿಯು ಸಾಮಾಜಿಕ ರಚನೆಯನ್ನು ದೂಷಿಸಲು ಪ್ರಾರಂಭಿಸುತ್ತಾನೆ. ಆದಾಗ್ಯೂ, ಆ ಖಿನ್ನತೆಯಿಂದ ಜನರನ್ನು ಹೊರತರುವ ಮನೋವೈದ್ಯಕೀಯ ಮತ್ತು ಮಾನಸಿಕ ಚಿಕಿತ್ಸೆಗಳಿವೆ ಎಂದು ಅವರು ಹೇಳಿದರು.