ಕರ್ನಾಟಕ

karnataka

ETV Bharat / bharat

ಉಲ್ಫಾದ ನಿಜವಾದ ಅಧ್ಯಕ್ಷರು ಯಾರು?: ಲಂಡನ್​ ಕೋರ್ಟ್​​ನಲ್ಲಿ ನಡೆಯುತ್ತಿದೆ ಮಹತ್ವದ ವಿಚಾರಣೆ - ಲಂಡನ್​ ಕೋರ್ಟ್​​ನಲ್ಲಿ ನಡೆಯುತ್ತಿದೆ ಮಹತ್ವದ ವಿಚಾರಣೆ

ಗುವಾಹಟಿ ವೈದ್ಯಕೀಯ ಕಾಲೇಜಿನಿಂದ ವೈದ್ಯಕೀಯ ಪದವೀಧರರಾಗಿರುವ ಡಾ. ಹಜಾರಿಕಾ ಅವರು ಬ್ರಿಟಿಷ್ ಪಾಸ್‌ಪೋರ್ಟ್ ಹೊಂದಿದ್ದಾರೆ. 2004 ರಿಂದ ಪೂರ್ವ ಲಂಡನ್‌ನ ಆಲ್ಟನ್‌ನಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಮಂಗಳವಾರ, ಹಜಾರಿಕಾ ಅವರ ವಕೀಲ ಬೆನ್ ಕೂಪರ್ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್‌ಗೆ ತಮ್ಮ ಕಕ್ಷಿದಾರರು ಅಸ್ಸೋಂನ ಪ್ರತ್ಯೇಕತಾವಾದಿ ಸಂಘಟನೆಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.

London court starts hearing to ascertain who is Ulfa chairman
ಉಲ್ಫಾದ ನಿಜವಾದ ಅಧ್ಯಕ್ಷರು ಯಾರು

By

Published : May 17, 2022, 9:19 PM IST

ನ್ಯೂಸ್​ ಡೆಸ್ಕ್​(ಹೈದರಾಬಾದ್​):75 ವರ್ಷದ ಲಂಡನ್ ಮೂಲದ ವೈದ್ಯ ಡಾ. ಅವಿಜಿತ್ ಅಸ್ಸೋಂ, ಉಲ್ಫಾ ಬಣದ ಅಧ್ಯಕ್ಷ ಎಂದು ಭಾರತ ಸರ್ಕಾರ ಹೇಳಿಕೊಂಡಿದೆ. ಉಲ್ಫಾ (I) ನಿಷೇಧಿತ ಸಂಘಟನೆಯ ಅಧ್ಯಕ್ಷರು ಹಾಗೂ ಅದರ ಕಮಾಂಡರ್-ಇನ್-ಚೀಫ್ ಪರೇಶ್ ಬರುವಾ ಅವರು ಕೆಲವು ತಿಂಗಳ ಹಿಂದೆ ಡಾ ಅವಿಜಿತ್ ಅಸ್ಸೋಂ ಹೆಸರಿನಿಂದ ವಿವಾದ ಸೃಷ್ಟಿಸಿದರು. ಈ ವಿವಾದ ಈಗ ನಿಜವಾದ ನಾಯಕ ಯಾರು ಎಂಬ ಬಗ್ಗೆ ಲಂಡನ್​​ ಕೋರ್ಟ್​ ಮೆಟ್ಟಿಲೇರಿದೆ.

ಗುವಾಹಟಿ ವೈದ್ಯಕೀಯ ಕಾಲೇಜಿನಿಂದ ವೈದ್ಯಕೀಯ ಪದವೀಧರರಾಗಿರುವ ಡಾ. ಹಜಾರಿಕಾ ಅವರು ಬ್ರಿಟಿಷ್ ಪಾಸ್‌ಪೋರ್ಟ್ ಹೊಂದಿದ್ದಾರೆ. 2004 ರಿಂದ ಪೂರ್ವ ಲಂಡನ್‌ನ ಆಲ್ಟನ್‌ನಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಮಂಗಳವಾರ, ಹಜಾರಿಕಾ ಅವರ ಪರ ವಕೀಲ ಬೆನ್ ಕೂಪರ್ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್‌ಗೆ ತಮ್ಮ ಕಕ್ಷಿದಾರರು ಅಸ್ಸೋಂನ ಪ್ರತ್ಯೇಕತಾವಾದಿ ಸಂಘಟನೆಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ವಾದಿಸಿದ್ದಾರೆ.

ಕೂಪರ್ ಅವರು ತಮ್ಮ ಕಕ್ಷಿದಾರರಾದ ಡಾ. ಮುಕುಲ್ ಹಜಾರಿಕಾ ಭಾರತ ಸರ್ಕಾರ ಹೇಳಿಕೊಂಡಂತೆ ಡಾ. ಅವಿಜಿತ್ ಅಸೋಮ್ ಅಲ್ಲ. ತಮ್ಮ ಕಕ್ಷಿದಾರರು ತಮ್ಮ ವೈದ್ಯಕೀಯ ವೃತ್ತಿಯನ್ನು ಹೊರತುಪಡಿಸಿ ಮಾನವೀಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಲಂಡನ್​ನ ನ್ಯಾಯಾಲಯದ ಮುಂದೆ ವಾದಿಸಿದ್ದಾರೆ.

ಆದರೆ, ಭಾರತ ಸರ್ಕಾರದ ಪರ ವಾದ ಮಂಡನೆ ಮಾಡುತ್ತಿರುವ ವಕೀಲರು ಡಾ. ಹಜಾರಿಕಾ ಅವರು ಉಲ್ಫಾ (I) ನ ಅಧ್ಯಕ್ಷರಾಗಿದ್ದಾರೆ ಎಂದು ವಾದಿಸಿದ್ದಾರೆ. ಹಜಾರಿಕಾ ಅವರ ನಿಷೇಧಿತ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗೂ 2016 ರಿಂದ ಆ ಸಂಘಟನೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ. 2019 ರ ನಡುವೆ ಮ್ಯಾನ್ಮಾರ್‌ನಲ್ಲಿ ಉಲ್ಫಾ (I) ಶಿಬಿರಗಳಲ್ಲಿ ಸಾಕಷ್ಟು ಬಾರಿ ಡಾ. ಅವಿಜಿತ್ ಅಸ್ಸೋಂ ಎಂಬುವವರೇ ಡಾ. ಮುಕುಲ್ ಹಜಾರಿಕಾ ಆಗಿದ್ದು, ಅದು ಅವರ ಗುಪ್ತನಾಮವಾಗಿದೆ ಎಂದು ಕೋರ್ಟ್​​ ಗಮನಕ್ಕೆ ತಂದಿದ್ದಾರೆ.

ಅಸ್ಸೋಂ ಯುವ ಪೀಳಿಗೆ ಸಂಘಟನೆಗೆ ಸೇರಲು ಮತ್ತು ರಾಜ್ಯದ ವಿರುದ್ಧ ಯುದ್ಧ ಮಾಡಲು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಭಾರತದ ಪರ ವಕೀಲರು ಲಂಡನ್​ನ ವೆಸ್ಟ್​ ಮಿನ್​​ಸ್ಟರ್​ ಕೋರ್ಟ್​ ಎದುರು ವಾದಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಡಾ ಹಜಾರಿಕಾ ಅವರನ್ನು ಕಳೆದ ವರ್ಷ ಲಂಡನ್‌ನಲ್ಲಿ ಬಂಧಿಸಲಾಗಿತ್ತು. ಆದರೆ, ನಂತರ ಅವರನ್ನ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ಇದನ್ನು ಓದಿ:ಕಟ್ಟಿಕೊಂಡ ಹೆಂಡತಿ ಕೊಲೆ ಮಾಡಿ, ಪೊಲೀಸ್ ಠಾಣೆಗೆ ಹೋಗಿ ಶರಣಾದ ನಿವೃತ್ತ ಯೋಧ

ABOUT THE AUTHOR

...view details