ಕರ್ನಾಟಕ

karnataka

ETV Bharat / bharat

ಏಪ್ರಿಲ್ 19ಕ್ಕೆ ಕೋವಿಡ್ ಪರಿಸ್ಥಿತಿ ಅವಲೋಕನ: ಲೋಕಸಭಾ ಸ್ಪೀಕರ್ ವರ್ಚುಯಲ್ ಸಭೆ

ದೇಶದಲ್ಲಿ ಕೋವಿಡ್ ಪ್ರಕರಣಗಳು ತೀವ್ರವಾಗಿ ಹೆಚ್ಚಳವಾಗಿರುವ ಹಿನ್ನೆಲೆ ಲೋಕಸಭಾ ಸ್ಪೀಕರ್ ಜನ ಪ್ರತಿನಿಧಿಗಳು ಮತ್ತು ಪ್ರಮುಖ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

Lok Sabha Speaker to chair virtual meet on COVID-19 situation on April 19
ಲೋಕಸಭಾ ಸ್ಪೀಕರ್ ವರ್ಚುವಲ್ ಸಭೆ

By

Published : Apr 15, 2021, 10:54 PM IST

ನವದೆಹಲಿ: ಕೋವಿಡ್-19 ನಿಯಂತ್ರಣದಲ್ಲಿ ಜನ ಪ್ರತಿನಿಧಿಗಳ ಪಾತ್ರ ಮತ್ತು ಜವಾಬ್ದಾರಿ ಕುರಿತು ಏಪ್ರಿಲ್ 19 ರಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸಂಸದೀಯ ಪಕ್ಷಗಳ ಪ್ರಮುಖರೊಂದಿಗೆ​ ವರ್ಚುಯಲ್ ಸಭೆ ನಡೆಸಲಿದ್ದಾರೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಪ್ರತಿಪಕ್ಷಗಳ ನಾಯಕರು, ಸಂಸತ್​ನ ಪ್ರಮುಖ ಅಧಿಕಾರಿಗಳು, ವಿಧಾನಸಭೆಗಳ ಆಡಳಿತ ಮತ್ತು ಪ್ರತಿಪಕ್ಷ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಓದಿ : ಶುಕ್ರವಾರ,ಶನಿವಾರ 2.5 ಲಕ್ಷ ಕೊರೊನಾ ಟೆಸ್ಟ್​ಗೆ ಕೇರಳ ಸರ್ಕಾರದ ನಿರ್ಧಾರ ​

ದೇಶದಲ್ಲಿ ಬುಧವಾರ ಎರಡು ಲಕ್ಷಕ್ಕೂ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 2,00,739 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗುವ ಮೂಲಕ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1,40,74,564 ಆಗಿದೆ. ಈ ಪೈಕಿ 14,71,877 ಸಕ್ರಿಯ ಪ್ರಕರಣಗಳಿವೆ.

ABOUT THE AUTHOR

...view details