ಕರ್ನಾಟಕ

karnataka

ETV Bharat / bharat

ಕೋವಿಡ್‌ 20 ಸಾವಿರದ ಗಡಿ ದಾಟಿದರೆ ಮುಂಬೈನಲ್ಲಿ ಲಾಕ್​ಡೌನ್ ಜಾರಿ​: ಮೇಯರ್​ - ಮುಂಬೈನಲ್ಲಿ ಲಾಕ್​ಡೌನ್​ ಎಚ್ಚರಿಕೆ

ಮುಂಬೈನಲ್ಲಿ ನಿನ್ನೆ ಒಂದೇ ದಿನ ದಾಖಲೆಯ 8 ಸಾವಿರಕ್ಕೂ ಅಧಿಕ ಕೋವಿಡ್‌-19 ಸೋಂಕಿತ ಪ್ರಕರಣ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಇದು 20 ಸಾವಿರದ ಗಡಿ ದಾಟಿದರೆ ಲಾಕ್​ಡೌನ್ ಹೇರಿಕೆ ಮಾಡಬೇಕಾಗುತ್ತದೆ ಎಂದು ಮುಂಬೈ ಮೇಯರ್ ತಿಳಿಸಿದ್ದಾರೆ.

Mumbai Lockdown
Mumbai Lockdown

By

Published : Jan 4, 2022, 3:49 PM IST

ಮುಂಬೈ(ಮಹಾರಾಷ್ಟ್ರ): ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ ಸೋಂಕು ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಪ್ರಮುಖವಾಗಿ, ಮಹಾರಾಷ್ಟ್ರದಲ್ಲಿ ಇದು ವೇಗದ ಗತಿಯಲ್ಲಿದೆ. ಈ ಬಗ್ಗೆ ಮುಂಬೈ ಮೇಯರ್​ ಕಿಶೋರಿ ಪೆಡ್ನೇಕರ್ ಪ್ರತಿಕ್ರಿಯಿಸಿದರು.

ಮುಂಬೈನಲ್ಲಿ ಕೋವಿಡ್ ಸೋಂಕಿತ ಪ್ರಕರಣಗಳ ಸಂಖ್ಯೆ 20 ಸಾವಿರ ಗಡಿ ದಾಟಿದರೆ ಲಾಕ್​ಡೌನ್​ ಹೇರಿಕೆ ಮಾಡಬೇಕಾಗುತ್ತದೆ. ಗೋವಾದಿಂದ ಮುಂಬೈಗೆ ಹಡಗಿನಲ್ಲಿ ಬಂದ ಪ್ರಯಾಣಿಕರಿಗೆ ಆರ್​ಟಿ-ಪಿಸಿಆರ್ ಪರೀಕ್ಷೆ ನಡೆಸಲಾಗುತ್ತಿದ್ದು, ಈಗಾಗಲೇ ಕ್ವಾರಂಟೈನ್ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಲಾಕ್​ಡೌನ್​ ಯಾರೂ ಇಷ್ಟಪಡುವುದಿಲ್ಲ. ಇದು ವ್ಯಾಪಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದರೆ, ಸೋಂಕಿತ ಪ್ರಕರಣ ಹೆಚ್ಚಾದರೆ ಅನಿವಾರ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಮುಂಬೈನಲ್ಲಿ ನಿನ್ನೆ 8 ಸಾವಿರಕ್ಕೂ ಅಧಿಕ ಸೋಂಕು ಪ್ರಕರಣ ಪತ್ತೆಯಾಗಿದೆ. ಬಸ್​, ರೈಲು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಜನರು ಕಡ್ಡಾಯವಾಗಿ ಮಾಸ್ಕ್​ ಬಳಕೆ ಹಾಗು ವ್ಯಾಕ್ಸಿನ್ ಪಡೆದುಕೊಳ್ಳಲು ಮನವಿ ಮಾಡಿರುವ ಮೇಯರ್,​​ ಸಾಧ್ಯವಾದರೆ ಮೂರು​ ಲೇಯರ್ ಇರುವ​ ಮಾಸ್ಕ್​ ಧರಿಸಿಕೊಳ್ಳಲು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:ಗಸ್ತು ಕರ್ತವ್ಯದಲ್ಲಿದ್ದ ಪೊಲೀಸ್​​ ವಾಹನಕ್ಕೆ ಟ್ರಕ್​ ಡಿಕ್ಕಿ.. ಸ್ಥಳದಲ್ಲೇ ಮೂವರು ಪೊಲೀಸರ ದುರ್ಮರಣ

ಮಹಾರಾಷ್ಟ್ರದಲ್ಲಿ ಈಗಾಗಲೇ ಸೆಕ್ಷನ್​​ 144 ಜಾರಿಗೊಳಿಸಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ 10 ಸಚಿವರು ಹಾಗೂ 20 ಶಾಸಕರಲ್ಲಿ ಸೋಂಕು ದೃಢಗೊಂಡಿತ್ತು.

ABOUT THE AUTHOR

...view details