ನವದೆಹಲಿ: ಉಲ್ಬಣಗೊಂಡಿದ್ದ ಕೊರೊನಾ ನಿಯಂತ್ರಿಸಲು ರಾಷ್ಟ್ರ ರಾಜಧಾನಿಯಲ್ಲಿ ಹೇರಲಾಗಿದ್ದ ಲಾಕ್‌ಡೌನ್ ಅನ್ನು ಮತ್ತೆ ಒಂದು ವಾರದ ಅವಧಿಗೆ ವಿಸ್ತರಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆದೇಶ ಹೊರಡಿಸಿದ್ದಾರೆ.
"ಲಾಕ್‌ಡೌನ್ ನಂತರ ನಾವು ಉತ್ತಮ ಚೇತರಿಕೆಗೆ ಸಾಕ್ಷಿಯಾಗಿದ್ದೇವೆ. ಹಾಗಂತ ಕಳೆದ ಕೆಲವು ದಿನಗಳಲ್ಲಿ ಗಳಿಸಿದ ಲಾಭವನ್ನು ನಾವು ಕಳೆದುಕೊಳ್ಳಲು ಇಷ್ಟಪಡಲ್ಲ. ಪಾಸಿಟಿವ್ ರೇಟ್ ಶೇ.11ಕ್ಕೆ ಇಳಿಕೆ ಕಂಡಿದೆಯಾದರೂ ಇದು ಶೇ.5ಕ್ಕೆ ಇಳಿಯಬೇಕಾಗಿದೆ. ಹೀಗಾಗಿ ಮುಂದಿನ ಸೋಮವಾರದ ವರೆಗೆ ವಿಸ್ತರಿಸಲಾಗಿದೆ" ಎಂದು ಸಿಎಂ ಕೇಜ್ರಿವಾಲ್ ಹೇಳಿದ್ದಾರೆ.