ಕರ್ನಾಟಕ

karnataka

ETV Bharat / bharat

ಗುಜರಾತ್ : ಮಣ್ಣುರಹಿತ ತಂತ್ರಜ್ಞಾನ ಬಳಸಿ ತರಕಾರಿ ಬೆಳೆದ ಸ್ಥಳೀಯ - ರಾಜ್‌ಕೋಟ್‌ನಲ್ಲಿ ಸ್ಥಳೀಯ ವ್ಯಕ್ತಿ

ರಾಜ್‌ಕೋಟ್‌ನಲ್ಲಿ ಸ್ಥಳೀಯರೊಬ್ಬರು ತಮ್ಮ ಟೆರೇಸ್‌ ಮೇಲೆ ಮಣ್ಣನ್ನು ಬಳಸದೇ ಹೈಡ್ರೋಫೋನಿಕ್ ತಂತ್ರಜ್ಞಾನವನ್ನು ಬಳಸಿಕೊಂಡು ತರಕಾರಿಗಳನ್ನು ಬೆಳೆದಿದ್ದಾರೆ.

ಮಣ್ಣುರಹಿತ ತಂತ್ರಜ್ಞಾನ ಬಳಸಿ ತರಕಾರಿ ಬೆಳೆದ ಸ್ಥಳೀಯ
Locals in Rajkot use soil-free technology

By

Published : Jan 29, 2021, 9:15 AM IST

Updated : Jan 29, 2021, 9:40 AM IST

ಗುಜರಾತ್:ರಾಜ್‌ಕೋಟ್‌ನಲ್ಲಿ ಸ್ಥಳೀಯರೊಬ್ಬರು ತಮ್ಮ ಟೆರೇಸ್‌ ಮೇಲೆ ಮಣ್ಣನ್ನು ಬಳಸದೇ ಹೊಸ ತಂತ್ರಜ್ಞಾವನ್ನು ಬಳಸಿಕೊಂಡು ತರಕಾರಿಗಳನ್ನು ಬೆಳೆದಿದ್ದಾರೆ.

ಮಣ್ಣುರಹಿತ ತಂತ್ರಜ್ಞಾನ ಬಳಸಿ ತರಕಾರಿ ಬೆಳೆದ ಸ್ಥಳೀಯ

ಇಲ್ಲಿನ ಸ್ಥಳೀಯ ಸುರೇಶ್​ ಎಂಬುವವರು ಹೈಡ್ರೋಫೋನಿಕ್ ತಂತ್ರಜ್ಞಾನವನ್ನು ಬಳಸಿಕೊಂಡು ಮಣ್ಣನ್ನು ಬಳಸದೇ ತರಕಾರಿಗಳನ್ನು ಬೆಳೆದಿದ್ದಾರೆ. ಇದಕ್ಕೆ ಕಡಿಮೆ ಪ್ರಮಾಣದ ನೀರು ಬೇಕಾಗುತ್ತದೆ. ಇದರಲ್ಲಿ ಸಸ್ಯಗಳ ಬೆಳವಣಿಗೆಗೆ ಮಣ್ಣಿನ ಅಗತ್ಯ ಇರುವುದಿಲ್ಲ. ಇದು ಸಸ್ಯಗಳನ್ನು ಬ್ಯಾಕ್ಟೀರಿಯಾದ ದಾಳಿಯಿಂದ ರಕ್ಷಿಸಿ ತರಕಾರಿಗಳ ಗುಣಮಟ್ಟ ಸುಧಾರಿಸುತ್ತದೆ.

ಓದಿ: ವಿಷಪೂರಿತ ಮದ್ಯ ಸೇವಿಸಿ ರಾಜಸ್ಥಾನದಲ್ಲಿ ನಾಲ್ವರು ಸಾವು

ಸುರೇಶ್​ ಅವರು ತಮ್ಮ ಮನೆಯ ಮೇಲಿನ ಛಾವಣಿಯಲ್ಲಿ ಬದನೆಕಾಯಿ, ಕೊತ್ತುಂಬರಿ ಸೊಪ್ಪು, ಸ್ಪ್ರಿಂಗ್​ ಆನಿಯನ್​​, ಮೆಣಸಿನಕಾಯಿ ಹೀಗೆ ವಿವಿಧ ತರಕಾರಿ ಬೆಳೆಗಳನ್ನು ಬೆಳೆದಿದ್ದಾರೆ.

ಮಣ್ಣುರಹಿತ ತಂತ್ರಜ್ಞಾನ ಬಳಸಿ ತರಕಾರಿ ಬೆಳೆದ ಸ್ಥಳೀಯ

ಹೈಡ್ರೋಫೋನಿಕ್ ತಂತ್ರಜ್ಞಾನ ಎಂದರೆ:

ಕಡಿಮೆ ನೀರು ಮತ್ತು ಖರ್ಚಿನಿಂದ ತರಕಾರಿ ಬೆಳೆಯುವ ಒಂದು ವಿಧಾನವಾಗಿದೆ. ಉತ್ತಮ ಗುಣಮಟ್ಟದ ತರಕಾರಿ ಬೀಜಗಳನ್ನು ತೆಗೆದುಕೊಂಡು ನೀರಿನಲ್ಲಿ 2-3 ಬಾರಿ ತೊಳೆದ ಬಳಿಕ 24 ಗಂಟೆಗಳ ಕಾಲ ನೆನೆಯಲು ಬಿಡಬೇಕು. ನೆನೆಸಿಟ್ಟಿರುವ ಬೀಜಗಳನ್ನು ನೀರಿನಿಂದ ಹೊರತೆಗೆದು ಪಂಚೆ, ಬೆಡ್‌ಶೀಟ್‌ ಅಥವಾ ಗೋಣಿಚೀಲದಲ್ಲಿ ಸುತ್ತಿ ಬಿದಿರುಬುಟ್ಟಿ ಅಥವಾ ಪಾತ್ರೆಗಳಲ್ಲಿ ಇಡಬೇಕು. ಬೇಸಿಕೆ ಕಾಲದಲ್ಲಿ 24 ಗಂಟೆ, ಚಳಿಗಾಲದಲ್ಲಿ 48 ಗಂಟೆಯಲ್ಲಿ ಮೊಳಕೆಯೊಡೆಯುತ್ತದೆ. ಮೊಳಕೆ ಹೊಡೆದ ಕಾಳನ್ನು ಹೈಡ್ರೋಫೋನಿಕ್‌ ತಂತ್ರಜ್ಞಾನದ ಮೂಲಕ ಸುಲಭವಾಗಿ ಬೆಳೆಯಬಹುದಾಗಿದೆ.

Last Updated : Jan 29, 2021, 9:40 AM IST

ABOUT THE AUTHOR

...view details