ಮಧ್ಯಪ್ರದೇಶ :ಗ್ವಾಲಿಯರ್ನಲ್ಲಿ ನಿರ್ಮಾಣ ಹಂತದಲ್ಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದ ಪರಿಶೀಲನೆಗೆ ಆಗಮಿಸಿದ್ದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಮೈದಾನದ ಉತ್ಕ್ರಷ್ಟತೆಯನ್ನು ಪರಿಶೀಲಿಸಲು ತಾವೇ ಸ್ವತಃ ಓಡಿದ್ದಾರೆ.
ಈ ವೇಳೆ ಅವರೊಂದಿಗೆ ಪಕ್ಷದ ನಾಯಕರು, ಬೆಂಬಲಿಗರು ಓಡಿದ್ದಾರೆ. ಸಿಂಧಿಯಾ ಅವರಿಗಿಂತಲೂ ಮುಂದೆ ವೇಗವಾಗಿ ಓಡಲು ಹೋದ ಮುಖಂಡನೊಬ್ಬ ಮುಗ್ಗರಿಸಿ ಬಿದ್ದಿದ್ದಾರೆ. ಇದನ್ನು ಜ್ಯೋತಿರಾದಿತ್ಯ ಸಿಂಧಿಯಾ ಕಂಡರೂ ನಿಲ್ಲದೇ ಹಾಗೆಯೇ ಓಡಿದ್ದಾರೆ.