ಕರ್ನಾಟಕ

karnataka

ETV Bharat / bharat

ಭಾರತ-ಚೀನಾ ನಡುವೆ 14ನೇ ಸುತ್ತಿನ ಮಿಲಿಟರಿ ಮಾತುಕತೆ : ಲಡಾಖ್ ಬಿಕ್ಕಟ್ಟು ಸುಧಾರಿಸಿದೆ ಎಂದ ಸೇನಾ ಮುಖ್ಯಸ್ಥ - ಪೂರ್ವ ಲಡಾಖ್ ಗಡಿ ವಿವಾದ

ಸುಮಾರು 300-400 ಉಗ್ರರು ಭಾರತದಲ್ಲಿ ನುಸುಳಲು ಕಾಯುತ್ತಿದ್ದಾರೆ. ನಮ್ಮ ಸೈನಿಕರು ಕಾರ್ಯಾಚರಣೆ ನಡೆಸಿ ಒಟ್ಟು 144 ಭಯೋತ್ಪಾದಕರನ್ನು ಹತ್ಯೆಗೈದಿದ್ದಾರೆ ಎಂದು ಸೇನಾ ಮುಖ್ಯಸ್ಥ ಎಂ.ಎಂ ನರವಣೆ ತಿಳಿಸಿದರು..

ಜನರಲ್ ಮನೋಜ್ ಮುಕುಂದ್ ನರವಣೆ
ಜನರಲ್ ಮನೋಜ್ ಮುಕುಂದ್ ನರವಣೆ

By

Published : Jan 15, 2022, 12:34 PM IST

ನವದೆಹಲಿ: ಭಾರತ ಮತ್ತು ಚೀನಾದೊಂದಿಗಿನ ಗಡಿ ಸಂಬಂಧ ಸುಧಾರಿಸಿದೆ. ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಇತ್ತೀಚೆಗೆ ಎರಡು ದೇಶಗಳ ನಡುವೆ 14ನೇ ಸುತ್ತಿನ ಮಿಲಿಟರಿ ಮಾತುಕತೆ ನಡೆದಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಹೇಳಿದರು.

ಭಾರತೀಯ ಸೇನಾ ದಿನದ ಪ್ರಯುಕ್ತ ದೆಹಲಿಯ ಕ್ಯಾಂಟ್‌ನಲ್ಲಿರುವ ಪರೇಡ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯೋಧರಿಗೆ ಸೇನಾ ಪದಕವನ್ನು ಪ್ರದಾನ ಮಾಡಿದರು. ನಂತರ ಮಾತನಾಡಿದ ಅವರು, ಚೀನಾದ ಉದ್ವಿಗ್ನತೆಯಿಂದಾಗಿ ಕಳೆದ ವರ್ಷ ಸೇನೆಗೆ ಸವಾಲಾಗಿತ್ತು. ಪರಿಸ್ಥಿತಿ ಹತೋಟಿಯಲ್ಲಿಡಲು ಇತ್ತೀಚೆಗೆ 14ನೇ ಸಭೆ ನಡೆಯಿತು. ಜಂಟಿ ಮಾತುಕತೆ ನಡೆಸಿದ ಬಳಿಕ ಇದೀಗ ಗಡಿ ರೇಖೆ ಬಳಿ ಸಹಜ ಸ್ಥಿತಿ ಇದೆ ಎಂದರು.

ಗಡಿ ಭಾಗದಲ್ಲಿ ಕಳೆದ ವರ್ಷಕ್ಕಿಂತ ಪರಿಸ್ಥಿತಿ ಉತ್ತಮವಾಗಿದೆ. ಆದರೆ, ಪಾಕಿಸ್ತಾನ ಇನ್ನೂ ಗಡಿಯ ಭಾಗದಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ.

ಸುಮಾರು 300-400 ಉಗ್ರರು ಭಾರತದಲ್ಲಿ ನುಸುಳಲು ಕಾಯುತ್ತಿದ್ದಾರೆ. ನಮ್ಮ ಸೈನಿಕರು ಕಾರ್ಯಾಚರಣೆ ನಡೆಸಿ ಒಟ್ಟು 144 ಭಯೋತ್ಪಾದಕರನ್ನು ಹತ್ಯೆಗೈದಿದ್ದಾರೆ ಎಂದು ಸೇನಾ ಮುಖ್ಯಸ್ಥ ಎಂ.ಎಂ ನರವಣೆ ತಿಳಿಸಿದರು.

ಲಡಾಖ್ ಗಡಿಯಲ್ಲಿ ಚೀನಾದೊಂದಿಗಿನ ಸಂಬಂಧ ಕೊಂಚ ಸುಧಾರಿಸುತ್ತಿದೆ ಎನ್ನುವಾಗಲೇ, ಚೀನಾ ಪಡೆಗಳು ಪೂರ್ವ ಲಡಾಖ್ ಗಡಿ ಭಾಗದಲ್ಲಿ ಮತ್ತೆ ತನ್ನ ಸೇನೆಯನ್ನು ಜಮಾವಣೆ ಮಾಡಿದ್ದವು. ಹೀಗಾಗಿ, ಲಡಾಖ್ ಬಿಕ್ಕಟ್ಟಿನ ಕುರಿತು ಚೀನಾ ಮತ್ತು ಭಾರತ 14ನೇ ಸುತ್ತಿನ ಮಾತುಕತೆ ನಡೆಸಿದೆ. ಇದೀಗ ಪರಿಸ್ಥಿತಿ ಹತೋಟಿಗೆ ತರಲಾಗಿದೆ.

ಓದಿ:ಭಾರತೀಯ ಸೇನಾ ದಿನ: ಶುಭ ಕೋರಿದ ಮೋದಿ, ಕೋವಿಂದ್.. ವೀರ ಯೋಧರಿಗೆ 3 ಪಡೆಗಳ ಮುಖ್ಯಸ್ಥರಿಂದ ನಮನ

ABOUT THE AUTHOR

...view details