ಕರ್ನಾಟಕ

karnataka

5 ಆರ್ಥಿಕ ವರ್ಷಗಳಲ್ಲಿ 10 ಲಕ್ಷ ಕೋಟಿ ಸಾಲ ರೈಟ್ ಆಫ್.. ಸಚಿವೆ ನಿರ್ಮಲಾ ಸೀತಾರಾಮನ್

By

Published : Dec 19, 2022, 5:55 PM IST

ರೈಟ್ ಆಫ್ ಸಾಲಗಳ ಸಾಲ ಬಾಕಿದಾರರು ಮರುಪಾವತಿ ಮಾಡಲು ಜವಾಬ್ದಾರರಾಗಿರುತ್ತಾರೆ ಮತ್ತು ರೈಟ್ ಆಫ್ ಸಾಲದ ಖಾತೆಗಳ ಸಾಲಗಾರರಿಂದ ಬಾಕಿ ವಸೂಲಿ ಮಾಡುವ ಪ್ರಕ್ರಿಯೆಯು ಮುಂದುವರಿಯುತ್ತದೆ. ಲಭ್ಯವಿರುವ ಸಾಲ ವಸೂಲಾತಿ ಕಾರ್ಯವಿಧಾನಗಳ ಮೂಲಕ ಬ್ಯಾಂಕ್‌ಗಳು ರೈಟ್ ಆಫ್ ಖಾತೆಗಳಲ್ಲಿ ಸಾಲ ವಸೂಲಾತಿ ಕ್ರಮಗಳನ್ನು ಮುಂದುವರಿಸುತ್ತವೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

5 ಆರ್ಥಿಕ ವರ್ಷಗಳಲ್ಲಿ 10 ಲಕ್ಷ ಕೋಟಿ ಸಾಲ ರೈಟ್ ಆಫ್: ಸಚಿವೆ ನಿರ್ಮಲಾ ಸೀತಾರಾಮನ್
loans-worth-rs-1009-511-written-off-in-last-five-financial-years-sitharaman

ಹೊಸದಿಲ್ಲಿ: ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್‌ಗಳು ಕಳೆದ ಐದು ಹಣಕಾಸು ವರ್ಷಗಳಲ್ಲಿ 10,09,511 ಕೋಟಿ ರೂ.ಗಳ ಸಾಲ ಮನ್ನಾ ಮಾಡಿದ್ದು, ಸಾಲಗಾರರಿಂದ ಬಾಕಿ ವಸೂಲಾತಿ ಪ್ರಕ್ರಿಯೆ ಮುಂದುವರಿದಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ರೈಟ್ ಆಫ್ ಸಾಲಗಳು ಸೇರಿದಂತೆ ಎನ್‌ಪಿಎ (ಅನುತ್ಪಾದಕ ಆಸ್ತಿ) ಖಾತೆಗಳ ಬಾಕಿ ವಸೂಲಿಯು ನಿರಂತರ ಪ್ರಕ್ರಿಯೆಯಾಗಿದೆ ಎಂದು ಸೀತಾರಾಮನ್ ಹೇಳಿದರು.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಂಕಿಅಂಶಗಳ ಪ್ರಕಾರ, ಕಳೆದ ಐದು ಹಣಕಾಸು ವರ್ಷಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳು 1,03,045 ಕೋಟಿ ರೂ. ಸಾಲ ಸೇರಿದಂತೆ ರೈಟ್ ಆಫ್ ಸಾಲದಿಂದ 4,80,111 ಕೋಟಿ ರೂ.ಗಳನ್ನು ವಸೂಲಿ ಮಾಡಿವೆ. ಆರ್‌ಬಿಐ ಮಾಹಿತಿ ಪ್ರಕಾರ, ಕಳೆದ ಐದು ಹಣಕಾಸು ವರ್ಷಗಳಲ್ಲಿ ಶೆಡ್ಯೂಲ್ಡ್​ ವಾಣಿಜ್ಯ ಬ್ಯಾಂಕುಗಳು 10,09,511 ಕೋಟಿ ರೂ. ಸಾಲ ರೈಟ್ ಆಫ್ ಮಾಡಿವೆ ಎಂದು ಅವರು ವಿವರಿಸಿದರು.

ರೈಟ್ ಆಫ್ ಸಾಲಗಳ ಸಾಲ ಬಾಕಿದಾರರು ಮರುಪಾವತಿ ಮಾಡಲು ಜವಾಬ್ದಾರರಾಗಿರುತ್ತಾರೆ ಮತ್ತು ರೈಟ್ ಆಫ್ ಸಾಲದ ಖಾತೆಗಳ ಸಾಲಗಾರರಿಂದ ಬಾಕಿ ವಸೂಲಿ ಮಾಡುವ ಪ್ರಕ್ರಿಯೆಯು ಮುಂದುವರಿಯುತ್ತದೆ. ಲಭ್ಯವಿರುವ ಸಾಲ ವಸೂಲಾತಿ ಕಾರ್ಯವಿಧಾನಗಳ ಮೂಲಕ ಬ್ಯಾಂಕ್‌ಗಳು ರೈಟ್ ಆಫ್ ಖಾತೆಗಳಲ್ಲಿ ಸಾಲ ವಸೂಲಾತಿ ಕ್ರಮಗಳನ್ನು ಮುಂದುವರಿಸುತ್ತವೆ ಎಂದು ಅವರು ತಿಳಿಸಿದರು.

ಸಾಲ ವಸೂಲಾತಿ ಕಾರ್ಯವಿಧಾನಗಳು ಸಿವಿಲ್ ನ್ಯಾಯಾಲಯಗಳಲ್ಲಿ ಅಥವಾ ಸಾಲ ವಸೂಲಾತಿ ನ್ಯಾಯಮಂಡಳಿಗಳಲ್ಲಿ ಮೊಕದ್ದಮೆ ಹೂಡುವುದು, ಹಣಕಾಸು ಆಸ್ತಿಗಳ ಸೆಕ್ಯುರಿಟೈಸೇಶನ್ ಮತ್ತು ಪುನರ್ನಿರ್ಮಾಣ ಮತ್ತು ಭದ್ರತಾ ಹಿತಾಸಕ್ತಿ ಕಾಯ್ದೆ 2002 ರ ಜಾರಿ, 2016ರ ದಿವಾಳಿತನ ಕೋಡ್ ಅಡಿಯಲ್ಲಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯಲ್ಲಿ ಪ್ರಕರಣಗಳನ್ನು ದಾಖಲಿಸುವುದು, ಸಂಧಾನದ ಮೂಲಕ ಇತ್ಯರ್ಥ ಮತ್ತು ರಾಜಿ ಮತ್ತು ಎನ್​ಪಿಎಗಳ ಮಾರಾಟಗಳನ್ನು ಒಳಗೊಂಡಿವೆ. ಹೀಗಾಗಿ ಸಾಲಗಾರರಿಗೆ ರೈಟ್​ ಆಫ್​ನಿಂದ ಯಾವುದೇ ಪ್ರಯೋಜನ ಸಿಗುವುದಿಲ್ಲ ಎಂದು ಹಣಕಾಸು ಸಚಿವರು ಮಾಹಿತಿ ನೀಡಿದರು.

ಇದನ್ನೂ ಓದಿ: ಏಷ್ಯಾದ ಕರೆನ್ಸಿಗಳಿಗಿಂತ ರೂಪಾಯಿ ಉತ್ತಮ ಸಾಧನೆ ಮಾಡಿದೆ: ಸಂಸತ್​​ನಲ್ಲಿ ಸೀತಾರಾಮನ್ ಸಮರ್ಥನೆ

ABOUT THE AUTHOR

...view details