ಚಿತ್ತೂರು (ಆಂಧ್ರಪ್ರದೇಶ) :ಕಟ್ಟಿಕೊಂಡ ಹೆಂಡತಿ ಹಾಗೂ ಕುಟುಂಬಸ್ಥರ ಜೊತೆ ಜಗಳ ಮಾಡಿಕೊಂಡು ಮನನೊಂದಿರುವ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ. ಫೇಸ್ಬುಕ್ನಲ್ಲಿ ಲೈವ್ ವಿಡಿಯೋ ಮಾಡುವ ಮೂಲಕ ನೇಣು ಬಿಗಿದುಕೊಂಡಿದ್ದಾನೆ. ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಈ ಘಟನೆ ನಡೆದಿದ್ದು, ಉದಯ್ ಭಾಸ್ಕರ್ ಎಂಬಾತ ನೇಣಿಗೆ ಶರಣಾಗಿದ್ದಾನೆ.
ಕಳೆದ ನಾಲ್ಕು ವರ್ಷಗಳ ಹಿಂದೆ ಸೋನಿ ಎಂಬ ಯುವತಿ ಜೊತೆ ವಿವಾಹವಾಗಿದ್ದ. ಖಾಸಗಿ ಆಸ್ಪತ್ರೆಯಲ್ಲಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದ ಈತ, ಕಳೆದ ಕೆಲ ದಿನಗಳಿಂದ ಹೆಂಡತಿ ಹಾಗೂ ಕುಟುಂಬದೊಂದಿಗೆ ಜಗಳವಾಡಿಕೊಂಡಿದ್ದ. ಹೀಗಾಗಿ, ಹೆಂಡತಿ ಹೆತ್ತವರ ಮನೆ ಸೇರಿದ್ದಳು. ಇದರಿಂದ ಆತ ಮನನೊಂದಿದ್ದ.
ಇದನ್ನೂ ಓದಿರಿ:15ರ ಬಾಲಕಿ ಮೇಲೆ ಗ್ಯಾಂಗ್ರೇಪ್, ಸಿಗರೇಟ್ನಿಂದ ಎದೆ ಸುಟ್ಟು, ಕೊಲೆ ; ಮರಕ್ಕೆ ಮೃತದೇಹ ನೇಣು