ಕರ್ನಾಟಕ

karnataka

ETV Bharat / bharat

ಆಕಸ್ಮಿಕವಾಗಿ ಗೂಡ್ಸ್ ರೈಲಿನಡಿಗೆ ಬಿದ್ದು ವ್ಯಕ್ತಿ ಸಾವು.. ಲೈವ್ ವಿಡಿಯೋದಲ್ಲಿ ಸೆರೆ - Man accidentally fell under the goods train and died in hyderabad

ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಐಸಾಕ್​ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್​ಗೆ ಕರೆ ಮಾಡಿದರೂ ಬರದ ಕಾರಣ ಖಾಸಗಿ ವಾಹನ ಮೂಲಕ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಅವರನ್ನು ಖಮ್ಮಂ ಆಸ್ಪತ್ರೆಗೆ ರವಾನಿಸಲಾಗಿದೆ.

accidentally
ವಿಡಿಯೋದಲ್ಲಿ ಸೆರೆ

By

Published : Dec 30, 2021, 10:40 PM IST

Updated : Dec 31, 2021, 3:59 PM IST

ಹೈದರಾಬಾದ್:ಅಚಾನಕ್ಕಾಗಿ ಗೂಡ್ಸ್​ ರೈಲಿನಡಿ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಡೆದಿದ್ದು, ಇದನ್ನು ವ್ಯಕ್ತಿಯೊಬ್ಬರು ಮಾಡುತ್ತಿದ್ದ ಲೈವ್​ ವಿಡಿಯೋದಲ್ಲಿ ಸೆರೆಯಾಗಿದೆ. ತೆಲಂಗಾಣದ ಭದ್ರಾದ್ರಿ ಕೊತ್ತಗುಡೆಂನ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಐಸಾಕ್​(50) ಸಾವನ್ನಪ್ಪಿದ ವ್ಯಕ್ತಿ.

ಇವರು ಜಿಲ್ಲೆಯ ಎಲ್ಲನಾಡು ನಗರದ ಜಗದಾಂಬ ನಿವಾಸಿಯಾದ ಐಸಾಕ್​ ಸೈಕಲ್​ ಮೇಲೆ ಹೋಗುತ್ತಿದ್ದರು. ಈ ವೇಳೆ, ಎಲ್ಲ ನಾಡುವಿನಿಂದ ಡೋರ್ನಕಲ್​ಗೆ ಹೋಗುತ್ತಿದ್ದ ಗೂಡ್ಸ್​ ರೈಲಿಗೆ ಸೈಕಲ್​ ಅನ್ನು ಗುದ್ದಿದ್ದಾರೆ. ಕೆಳಗೆ ಬಿದ್ದ ಐಸಾಕ್​ ಅವರ ಎರಡು ಕಾಲುಗಳು ರೈಲಿನಡಿ ಸಿಲುಕಿ ತುಂಡಾಗಿವೆ.

ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಐಸಾಕ್ ಅವ​ರನ್ನು ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್​ಗೆ ಕರೆ ಮಾಡಿದರೂ ಬರದ ಕಾರಣ ಖಾಸಗಿ ವಾಹನ ಮೂಲಕ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಅವರನ್ನು ಖಮ್ಮಂ ಆಸ್ಪತ್ರೆಗೆ ರವಾನಿಸಲಾಗಿದೆ.

ಬಳಿಕ ತೀವ್ರ ರಕ್ತಸ್ರಾವ ಮತ್ತು ನೋವಿನಿಂದ ಐಸಾಕ್​ ಆಸ್ಪತ್ರೆಯಲ್ಲಿಯೇ ಅಸುನೀಗಿದ್ದಾರೆ. ವಿಷಯ ತಿಳಿದ ಪೊಲೀಸರು ಆಸ್ಪತ್ರೆಗೆ ಆಗಮಿಸಿ ವಿಚಾರಣೆ ನಡೆಸಿದರು. ಬಳಿಕ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ಇದೆಂಥಾ ವಿಚಿತ್ರ..! 'ಪ್ಲಾಸ್ಟಿಕ್​ ಮಗು'ವಿಗೆ ಜನ್ಮ ನೀಡಿದ ತಾಯಿ..!!

Last Updated : Dec 31, 2021, 3:59 PM IST

ABOUT THE AUTHOR

...view details