ಮುಂಬೈ (ಮಹಾರಾಷ್ಟ್ರ) :ತಂತ್ರಜ್ಞಾನದ ದುರ್ಬಳಕೆ ಮಾಡಿಕೊಂಡು ಆ್ಯಪ್ ಮೂಲಕ ಲೈವ್ ಸೆಕ್ಸ್ ವಿಡಿಯೋ ಮಾಡುತ್ತಿದ್ದ ಗ್ಯಾಂಗ್ ಅನ್ನು ಮುಂಬೈ ಪೊಲೀಸರು ಸೋಮವಾರ ಭೇದಿಸಿದ್ದಾರೆ. ಇಬ್ಬರು ಯುವತಿಯರು ಸೇರಿದಂತೆ ಮೂವರನ್ನು ಅಂಧೇರಿಯ ವಸತಿ ಫ್ಲಾಟ್‌ನಲ್ಲಿ ಬಂಧಿಸಲಾಗಿದೆ. ಬಳಿಕ ಅವರನ್ನು ಕೋರ್ಟ್ಗೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ತನಿಶಾ ರಾಜೇಶ್ ಕನೋಜಿಯಾ, ರುದ್ರ ನಾರಾಯಣ ರಾವುತ್ ಮತ್ತು ತಮನ್ನಾ ಆರಿಫ್ ಖಾನ್ ಬಂಧಿತ ಆರೋಪಿಗಳು.
ಏನಿದು ಲೈವ್ ಸೆಕ್ಸ್ ಆ್ಯಪ್:ಅಶ್ಲೀಲ ವಿಡಿಯೋಗಳನ್ನು ಹರಿಬಿಡಲು ಮತ್ತು ಲೈಂಗಿಕತೆಯಲ್ಲಿ ತೊಡಗಿದ್ದನ್ನು ನೇರ ಪ್ರಸಾರ(ಲೈವ್) ಮಾಡಿ ತೋರಿಸಲು ಆ್ಯಪ್ ಅನ್ನು ರಚಿಸಲಾಗಿದೆ. 1 ಸಾವಿರ ರೂಪಾಯಿ ನೀಡಿ ಚಂದಾದಾರಿಕೆ ಪಡೆದವರು ಲೈವ್ ಆಗಿ ಆ್ಯಪ್ನಲ್ಲಿ ಸೆಕ್ಸ್ ವಿಡಿಯೋಗಳನ್ನು ನೋಡಬಹುದಾಗಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ. ಕಾರ್ಯಾಚರಣೆಗಿಳಿದ ಪೊಲೀಸರು, ಅಂಧೇರಿಯ ವಸತಿ ಸಮುಚ್ಛಯದ ಮನೆಯೊಂದರಲ್ಲಿ ಅಕ್ರಮವಾಗಿ ಚಟುವಟಿಕೆ ನಡೆಸುತ್ತಿದ್ದ ಮೂವರನ್ನು ಬಂಧಿಸಲಾಗಿದೆ.
ದಂಧೆಕೋರರು ಲೈವ್ ಸೆಕ್ಸ್ ವೀಕ್ಷಿಸಲು ಸದಸ್ಯತ್ವ ಶುಲ್ಕವಾಗಿ 1000 ರೂ.ಗಳನ್ನು ವಸೂಲಿ ಮಾಡುತ್ತಿದ್ದರು. ಅಂಧೇರಿಯ ಫ್ಲಾಟ್‌ನಲ್ಲಿ ಇದರ ಚಟುವಟಿಕೆಗಳು ನಡೆಯುತ್ತಿವೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ಮೂವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಗಣೇಶ್ ಪವಾರ್ ತಿಳಿಸಿದರು.