ಕರ್ನಾಟಕ

karnataka

By

Published : May 1, 2021, 3:40 PM IST

ETV Bharat / bharat

18 ವರ್ಷ ಮೇಲ್ಪಟ್ಟವರಿಗೆ ಇಂದಿನಿಂದ ವ್ಯಾಕ್ಸಿನೇಷನ್.. ಹಲವು ರಾಜ್ಯಗಳಲ್ಲಿ ಸದ್ಯಕ್ಕೆ ವ್ಯಾಕ್ಸಿನೇಷನ್ ಸಾಧ್ಯವಿಲ್ಲ..

ದೇಶದಲ್ಲಿ ಲಸಿಕೆಗಳ ಬೇಡಿಕೆ ಮತ್ತು ಪೂರೈಕೆಯ ನಡುವೆ ಭಾರಿ ಅಂತರವಿದೆ ಮತ್ತು ಮೇ 1 ರಿಂದ 18 ರಿಂದ 44 ವರ್ಷದೊಳಗಿನವರಿಗೆ ಲಸಿಕೆ ನೀಡಲು ಸಾಧ್ಯವಿಲ್ಲ, ಆದ್ದರಿಂದ ಕನಿಷ್ಠ ಆಗಸ್ಟ್ ಅಥವಾ ಸೆಪ್ಟೆಂಬರ್‌ವರೆಗೆ ಕಾಯಬೇಕಾಗುತ್ತದೆ..

vaccine
vaccine

ನವದೆಹಲಿ :ದೇಶದಲ್ಲಿ ಕೋವಿಡ್​ 2ನೇ ಅಲೆ ಅಬ್ಬರಿಸುತ್ತಿರುವ ಹಿನ್ನೆಲೆ ಶನಿವಾರದಿಂದ 18 - 44 ವರ್ಷದ ಎಲ್ಲರಿಗೂ ಕೊರೊನಾ ವ್ಯಾಕ್ಸಿನೇಷನ್​ ನೀಡಲು ಚಾಲನೆ ನೀಡಲಾಗಿದೆ.

ಆದಾಗ್ಯೂ, ಕೆಲವು ರಾಜ್ಯಗಳು ಲಸಿಕೆಗಳ ಕೊರತೆ ಎದುರಿಸುತ್ತಿದ್ದು, ಇಂದಿನಿಂದಲೇ 18 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಲಸಿಕೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿವೆ.

ಏಪ್ರಿಲ್ 19 ರಂದು ಕೇಂದ್ರವು ಮೇ 1 ರಿಂದ ಕೋವಿಡ್​ ಲಸಿಕೆ ಪಡೆಯಲು 18 ವರ್ಷಕ್ಕಿಂತ ಮೇಲ್ಪಟ್ಟವರೆಲ್ಲರೂ ಅರ್ಹರಾಗಿದ್ದಾರೆ. ಇದು ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಆಸ್ಪತ್ರೆಗಳಿಗೆ ಉತ್ಪಾದಕರಿಂದ ಲಸಿಕೆಗಳನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿದೆ.

ಪರಿಷ್ಕೃತ ನಿಯಮಗಳ ಪ್ರಕಾರ, ಕೇಂದ್ರವು 50 ಪ್ರತಿಶತದಷ್ಟು ಲಸಿಕೆಗಳನ್ನು ಪಡೆಯುತ್ತದೆ. ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳು ಉಳಿದ ಪ್ರಮಾಣವನ್ನು ಪಡೆಯುತ್ತವೆ ಎಂದು ಹೇಳಿತ್ತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ವ್ಯಾಕ್ಸಿನೇಷನ್ ಡ್ರೈವ್‌ನ ಮೂರನೇ ಹಂತಕ್ಕಾಗಿ 2.45 ಕೋಟಿಗೂ ಹೆಚ್ಚು ಜನ ಶುಕ್ರವಾರ ರಾತ್ರಿ 9.30 ರವರೆಗೆ ಕೋ-ವಿನ್(Co-WIN) ಪೋರ್ಟಲ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಆದಾಗ್ಯೂ, ಲಸಿಕೆಗಳ ಖರೀದಿಯಲ್ಲಿನ ವಿಳಂಬದಿಂದಾಗಿ, ಹಲವಾರು ರಾಜ್ಯಗಳು ಶನಿವಾರ ಲಸಿಕೆ ನೀಡಿಕೆ ಪ್ರಾರಂಭಿಸಿಲ್ಲ.

ಲಸಿಕೆಗಳನ್ನು ಇನ್ನೂ ಖರೀದಿಸಿದ ಕಾರಣ ಲಸಿಕೆ ಕೇಂದ್ರಗಳಲ್ಲಿ ಕ್ಯೂ ನಿಲ್ಲಬೇಡಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಜಧಾನಿಯ ನಿವಾಸಿಗಳಿಗೆ ಮನವಿ ಮಾಡಿದ್ದಾರೆ. ಲಸಿಕೆಗಳು ಬಂದ ಕೂಡಲೇ ನಾವು ಪ್ರಕಟಣೆಗಳನ್ನು ಹೊರಡಿಸುತ್ತೇವೆ. ಆಗ ಜನರು ಲಸಿಕಾ ಕೇಂದ್ರಗಳಿಗೆ ಬನ್ನಿ ಎಂದು ಕೇಜ್ರಿವಾಲ್​ ತಿಳಿಸಿದ್ದಾರೆ.

ತಮಿಳುನಾಡು ಸರ್ಕಾರವು 18-44 ವರ್ಷ ವಯಸ್ಸಿನವರಿಗೆ ಕೋವಿಡ್​ ಲಸಿಕೆ ಹಾಕುವಿಕೆಯನ್ನು ಮುಂದೂಡಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮಾತನಾಡಿ, ದೇಶದಲ್ಲಿ ಲಸಿಕೆಗಳ ಬೇಡಿಕೆ ಮತ್ತು ಪೂರೈಕೆಯ ನಡುವೆ ಭಾರಿ ಅಂತರವಿದೆ ಮತ್ತು ಮೇ 1 ರಿಂದ 18 ರಿಂದ 44 ವರ್ಷದೊಳಗಿನವರಿಗೆ ಲಸಿಕೆ ನೀಡಲು ಸಾಧ್ಯವಿಲ್ಲ, ಆದ್ದರಿಂದ ಕನಿಷ್ಠ ಆಗಸ್ಟ್ ಅಥವಾ ಸೆಪ್ಟೆಂಬರ್‌ವರೆಗೆ ಕಾಯಬೇಕಾಗುತ್ತದೆ ಎಂದು ಹೇಳಿದ್ದಾರೆ.

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು 18 ರಿಂದ 45 ವಯಸ್ಸಿನ ಜನರನ್ನು ಶನಿವಾರ ಲಸಿಕೆ ಕೇಂದ್ರಗಳಿಗೆ ಭೇಟಿ ನೀಡದಂತೆ ಕೇಳಿಕೊಂಡಿದ್ದು, ರಾಜ್ಯವು ಲಸಿಕೆಯನ್ನು ಸ್ವೀಕರಿಸಿದ ನಂತರ ವ್ಯಾಕ್ಸಿನೇಷನ್​ಗೆ ಬರುವಂತೆ ಜನರಿಗೆ ತಿಳಿಸಲಿದೆ ಎಂದು ಹೇಳಿದ್ದಾರೆ.

ಲಸಿಕೆಗಳು ಲಭ್ಯವಿಲ್ಲದ ಕಾರಣ ಮಧ್ಯಪ್ರದೇಶದಲ್ಲಿ ಮೇ 1 ರಿಂದ 18 ರಿಂದ 45 ವರ್ಷದವರಿಗೆ ವ್ಯಾಕ್ಸಿನೇಷನ್ ಆರಂಭವಾಗುವುದಿಲ್ಲ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಾಹಿತಿ ನೀಡಿದ್ದಾರೆ. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಎರಡರೊಂದಿಗೂ ರಾಜ್ಯ ಸರ್ಕಾರ ಮಾತನಾಡಿದೆ ಮತ್ತು ಅವರಿಗೆ ಲಸಿಕೆ ಪ್ರಮಾಣವನ್ನು ನೀಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿವೆ ಎಂದು ಚೌಹಾಣ್​ ಹೇಳಿದ್ದಾರೆ.

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ನಾವು ಅಗತ್ಯ ಪ್ರಮಾಣದ ಕೋವಿಡ್​ ಲಸಿಕೆಯನ್ನು ಇನ್ನೂ ಸ್ವೀಕರಿಸಿಲ್ಲ, ಹೀಗಾಗಿ ಸದ್ಯ 18- 44 ವಯೋಮಿತಿಯ ಯಾರೂ ಆಸ್ಪತ್ರೆ ಬಳಿ ಕೋವಿಡ್​ ಲಸಿಕೆಗಾಗಿ ಹೋಗಬೇಡಿ ಎಂದು ಕರ್ನಾಟಕದ ಆರೋಗ್ಯ ಸಚಿವ ಡಾ. ಕೆ ಸುಧಾಕರ್​ ಮನವಿ ಮಾಡಿದ್ದಾರೆ.

ಇನ್ನು ಛತ್ತಿಸ್​ಗಢ ರಾಜ್ಯವು ಲಸಿಕೆ ಕೊರತೆಯಿಂದಾಗಿ ಕೇವಲ ಅಂತ್ಯೋದಯ ಪಡಿತರ ಚೀಟಿ ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವ ಬಡ ಜನರಿಗೆ ಮಾತ್ರ ರಾಜ್ಯವು ಲಸಿಕೆ ಪ್ರಾರಂಭಿಸಲಿದೆ ಆರೋಗ್ಯ ಸಚಿವರು ತಿಳಿಸಿದ್ದಾರೆ.

18 ರಿಂದ 44 ವರ್ಷದೊಳಗಿನವರಿಗೆ ಲಸಿಕೆ ಹಾಕುವುದು ಮೇ 1 ರಿಂದ ಕಡ್ಡಾಯವಾಗಿ ಪ್ರಾರಂಭವಾಗಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದಂತೆ ಮೇ 1 ರಂದು ರಾಜ್ಯ ಸರ್ಕಾರ ನಾಮಮಾತ್ರದ ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭಿಸಲಿದೆ ಎಂದು ಅಲ್ಲಿನ ಆರೋಗ್ಯ ಸಚಿವರು ಹೇಳಿದ್ದಾರೆ.

ABOUT THE AUTHOR

...view details