ಸೂರತ್: ಕೊರೊನಾದ ಮತ್ತೊಂದು ಹಂತ ಮಾರ್ಚ್ ತಿಂಗಳಲ್ಲಿ ಪ್ರಾರಂಭವಾಗಿತ್ತು. ಅಂದಿನಿಂದ, 411ಕ್ಕೂ ಹೆಚ್ಚು ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ. ಅವರಲ್ಲಿ ಆಗ ತಾನೇ ಹುಟ್ಟಿದ ಮಗುವಿನಿಂದ ಹಿಡಿದು 12 ವರ್ಷದ ಮಕ್ಕಳೂ ಸೇರಿದ್ದಾರೆ.
ಈ ಮಕ್ಕಳಿಗೆ ಸೋಂಕು ತಗುಲಿದ ವೇಳೆ ಕೆಲವರ ಸ್ಥಿತಿ ತುಂಬಾ ಗಂಭೀರವಾಗಿದ್ದು, ವೆಂಟಿಲೇಟರ್‌ನಲ್ಲಿ ಹಾಕಬೇಕಾಗಿತ್ತು. ಆದರೆ, ಅನೇಕ ಮಕ್ಕಳು ಈ ಮಾರಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಿ ಬದುಕುಳಿದರು.
ಮಗುವಿಗೆ ಎದೆಹಾಲು ನೀಡಲಿಲ್ಲ:ಸೂರತ್‌ನಲ್ಲಿ 25 ದಿನಗಳ ಮಗು ಕೊರೊನಾವನ್ನು ಸೋಲಿಸಿದೆ. ಈ ಮಗುವಿನ ತಂದೆ ಮೊದಲು ಸೋಂಕಿಗೆ ತುತ್ತಾದರು, ಎರಡು ದಿನಗಳ ನಂತರ ಅವರ ತಾಯಿ ಮತ್ತು ಹೆಂಡತಿಗೂ ಸೋಂಕು ತಗುಲಿತು.
ನಮ್ಮ ಮಗುವಿಗೆ ಸೋಂಕು ತಗುಲಿದಾಗ ನಾವು ನಾಮಕರಣ ಮಾಡಿರಲಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ, ನನ್ನ ಮಗುವಿಗೆ ತಾಯಿಹಾಲನ್ನ ಕೂಡ ನೀಡಲಿಲ್ಲ. ಆದರೆ, ಈಗ ಮಗು ಗುಣಮುಖವಾಗಿ ಸುರಕ್ಷಿತ ಮತ್ತು ಆರೋಗ್ಯಕರವಾಗಿದೆ.
ನನ್ನ ಮಗ ನನ್ನ ಹೋರಾಟಗಾರ :ಶಿವನ್ ಶಾಗೆ ಮೂರುವರೆ ವರ್ಷ. ಅವನ ಜೊತೆಗೆ ಅವನ ತಾಯಿಗೂ ಸೋಂಕು ತಗುಲಿತ್ತು. ಮಗುವಿಗೆ ಸೋಂಕು ಇದೆ ಎಂದು ತಿಳಿದಾಗ ಕುಟುಂಬದ ಪ್ರತಿಯೊಬ್ಬರೂ ಆತಂಕಕ್ಕೆ ಒಳಗಾದರು. ಆದರೆ, ಇಬ್ಬರೂ ಚಿಕಿತ್ಸೆ ಪಡೆದು ವೇಗವಾಗಿ ಚೇತರಿಸಿಕೊಂಡರು. ಹೀಗಾಗಿ, ನನ್ನ ಮಗ ಹೋರಾಟಗಾರ ಅಂತಾರೆ ಶಿವನ್ ತಂದೆ.
ಎರಡು ವರ್ಷದ ಜಾಸ್ಮಿನ್ ಗುಣಮುಖ :ಎರಡು ವರ್ಷದ ಜಾಸ್ಮಿನ್‌ಳ ತಂದೆ ಸಾಗರ್ಗೆ ಕೊರೊನಾ ಪಾಸಿಟಿವ್ ಬಂದ ಕಾರಣ ಮಗಳಿಗೂ ಸೋಂಕು ತಗುಲಿತ್ತು. ಆದರೆ, ವೈದ್ಯರ ಬಳಿಗೆ ಕೊಂಡ್ಯೊಯ್ದ ಮೇಲೆ ಅವಳು ಚೇತರಿಸಿಕೊಂಡಳು ಅಂತಾರೆ ತಂದೆ.