ಕರ್ನಾಟಕ

karnataka

ETV Bharat / bharat

ಸಾಕ್ಷರ ಗ್ರಾಮ ಮೆಟ್ಲ ತಿಮ್ಮಾಪುರ: ಈ ಗ್ರಾಮದ ವೈಶಿಷ್ಟ್ಯ ಹಲವಾರು - ಗಿರಿಜನರ ಗ್ರಾಮ ಮೆಟ್ಲ ತಿಮ್ಮಾಪುರ

2005 ರಲ್ಲಿ ಗ್ರಾಮವು ಶಿಕ್ಷಣದ ಅಗತ್ಯವನ್ನು ಗುರುತಿಸಿ ಎಲ್ಲರೂ ಅಕ್ಷರ ಕಲಿಯುವಂತೆ ಮಾಡಿದ್ದಕ್ಕಾಗಿ ಭದ್ರಾಚಲಂ ಐಟಿಡಿಎಯ ಅಂದಿನ ಪಿಒ ಅವರಿಂದ ಮೆಚ್ಚುಗೆ ಪಡೆದಿತ್ತು. ಹಿರಿಯರು ಸುಶಿಕ್ಷಿತರಾಗಿರುವ ಕಾರಣದಿಂದ ಅವರು ತಮ್ಮ ಮಕ್ಕಳನ್ನು ಉನ್ನತ ಶಿಕ್ಷಣವಂತರನ್ನಾಗಿ ಮಾಡುತ್ತಿದ್ದಾರೆ. ಮಕ್ಕಳು ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ಸಮೀಪದ ಬುಡಕಟ್ಟು ಗುರುಕುಲ ಶಾಲೆಗಳಿಗೆ ದಾಖಲಾಗುತ್ತಾರೆ.

ಸಾಕ್ಷರ ಗ್ರಾಮ ಮೆಟ್ಲ ತಿಮ್ಮಾಪುರ.. ಈ ಗ್ರಾಮದ ವೈಶಿಷ್ಟ್ಯ ಹಲವಾರು!
Not only in literacy but in all things that village is an example for all

By

Published : Oct 15, 2022, 5:39 PM IST

ಮಹಬೂಬಾಬಾದ್: ಏಳು ದಶಕಗಳ ಇತಿಹಾಸವಿರುವ ಗಿರಿಜನರ ಗ್ರಾಮ ಮೆಟ್ಲ ತಿಮ್ಮಾಪುರ ಎಲ್ಲ ರೀತಿಯಲ್ಲೂ ಆದರ್ಶಪ್ರಾಯವಾಗಿ ನಿಂತಿದೆ. ಇಲ್ಲಿ ಎಲ್ಲರೂ ಅಕ್ಷರಸ್ಥರಾಗಿರುವುದೇ ಅದಕ್ಕೆ ಕಾರಣ. ಈ ಗ್ರಾಮವು ಮಹಬೂಬಾಬಾದ್ ಜಿಲ್ಲೆಯ ಬಯ್ಯಾರಂ ಮಂಡಲ ಕೇಂದ್ರದಿಂದ 15 ಕಿಮೀ ದೂರದಲ್ಲಿದೆ. ಎತ್ತರದ ಬೆಟ್ಟಗಳು ಮತ್ತು ಹಸಿರು ಕಾಡುಗಳ ನಡುವೆ ಈ ಗ್ರಾಮವಿದೆ. 120 ಕುಟುಂಬಗಳನ್ನು ಹೊಂದಿರುವ ಗ್ರಾಮದಲ್ಲಿ 810 ಜನಸಂಖ್ಯೆ ಇದೆ.

ಗ್ರಾಮದ ಮುಖ್ಯಸ್ಥ ಬಿಜ್ಜಾ ರಾಮಯ್ಯ ಅವರು ಮೂರನೇ ತರಗತಿಯವರೆಗೆ ಮಾತ್ರ ಅಧ್ಯಯನ ಮಾಡಿದ್ದರೂ ತೆಲುಗು, ಹಿಂದಿ ಮತ್ತು ಉರ್ದು ಭಾಷೆಗಳನ್ನು ಕರಗತ ಮಾಡಿಕೊಂಡಿದ್ದಾರೆ. ಅವಿದ್ಯಾವಂತರಿಗೆ ಅಕ್ಷರ ಕಲಿಸಲು ಕನಿಗಿರಿ ಶಾಲೆಯನ್ನು 30 ವರ್ಷಗಳ ಹಿಂದೆಯೇ ಆರಂಭಿಸಲಾಗಿದ್ದು, ಎಲ್ಲರೂ ತಮ್ಮ ಹೆಸರು ಬರೆದು ಬಸ್​ಗಳ ಹೆಸರು ತಿಳಿಯುವಂತಾಗಿದೆ. ಕನಿಗಿರಿ ಶಾಲೆ ಮುಚ್ಚಿದ ನಂತರ ರಾತ್ರಿ ಅಕ್ಷರದೀಪ ಕಾರ್ಯಕ್ರಮ ಆರಂಭಿಸಿ 15 ಮಂದಿಯ ತಂಡವನ್ನಾಗಿ ಮಾಡಿ ಪ್ರತಿ ತಂಡಕ್ಕೆ ಒಬ್ಬರನ್ನು ನಿಯೋಜಿಸಿ ಶಿಕ್ಷಣ ನೀಡಲಾಯಿತು.

2005 ರಲ್ಲಿ ಗ್ರಾಮವು ಶಿಕ್ಷಣದ ಅಗತ್ಯವನ್ನು ಗುರುತಿಸಿ ಎಲ್ಲರೂ ಅಕ್ಷರ ಕಲಿಯುವಂತೆ ಮಾಡಿದಕ್ಕಾಗಿ ಭದ್ರಾಚಲಂ ಐಟಿಡಿಎಯ ಅಂದಿನ ಪಿಒ ಅವರಿಂದ ಮೆಚ್ಚುಗೆ ಪಡೆದಿತ್ತು. ಹಿರಿಯರು ಸುಶಿಕ್ಷಿತರಾಗಿರುವ ಕಾರಣದಿಂದ ಅವರು ತಮ್ಮ ಮಕ್ಕಳನ್ನು ಉನ್ನತ ಶಿಕ್ಷಣವಂತರನ್ನಾಗಿ ಮಾಡುತ್ತಿದ್ದಾರೆ. ಮಕ್ಕಳು ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ಸಮೀಪದ ಬುಡಕಟ್ಟು ಗುರುಕುಲ ಶಾಲೆಗಳಿಗೆ ದಾಖಲಾಗುತ್ತಾರೆ. ಅಭಯ ಫೌಂಡೇಶನ್ 100 ಸ್ಮೈಲ್ ಫೌಂಡೇಶನ್ ಸಹಯೋಗದಲ್ಲಿ ಗ್ರಾಮಸ್ಥರಿಗಾಗಿ ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ. ಇದುವರೆಗೆ 60 ಮಂದಿ ಇಂಟರ್ ಶಿಕ್ಷಣ ಮುಗಿಸಿದ್ದು, 30 ಮಂದಿ ಡಿಗ್ರಿ ಹಾಗೂ ಇಂಜಿನಿಯರಿಂಗ್ ಮುಗಿಸಿದ್ದಾರೆ. ಇವರಲ್ಲಿ 20 ಮಂದಿ ಬಿಇಡಿ ಹಾಗೂ 20 ಮಂದಿ ಪಿಜಿ ಮುಗಿಸಿದ್ದಾರೆ. 10 ಪುರುಷರು ಮತ್ತು 10 ಮಹಿಳೆಯರು ಸರ್ಕಾರಿ ಉದ್ಯೋಗ ಪಡೆದುಕೊಂಡಿದ್ದಾರೆ.

63 ವರ್ಷದ ಬಿಜ್ಜಾ ವಿಶ್ವನಾಥಂ ಪ್ರತಿದಿನವೂ ದಿನಪತ್ರಿಕೆ ಓದುತ್ತಾರೆ. ಅವರು ಬಾಲ್ಯದಲ್ಲಿ ಹೆಚ್ಚು ಓದಲಿಲ್ಲ. ಇವರು ರಾಮಯ್ಯ ಎಂಬ ಗ್ರಾಮದ ಮುಖಂಡರಿಂದ ಅಕ್ಷರ ಕಲಿತು, ದನ ಮೇಯಿಸುವಾಗ ತನ್ನೊಂದಿಗೆ ಕೊಂಡೊಯ್ಯುತ್ತಿದ್ದ ಚೀಲದಲ್ಲಿ ಬಾಲಶಿಕ್ಷಣ ಪುಸ್ತಕ ಇಟ್ಟುಕೊಂಡು ಓದುತ್ತಿದ್ದರು. ಓದುವಾಗ ಏನಾದರೂ ಸಂದೇಹ ಬಂದರೆ ರಾಮಯ್ಯನ ಬಳಿ ಕೇಳಿ ತಿಳಿದುಕೊಳ್ಳುತ್ತಿದ್ದರು.

ಪೊಲೀಸ್ ಠಾಣೆಗೆ ಹೋಗಬೇಡಿ:ಗ್ರಾಮಸ್ಥರು ತಮ್ಮ ತಮ್ಮಲ್ಲಿ ವಿವಾದಗಳು ಸೃಷ್ಟಿಯಾಗದಂತೆ ನೋಡಿಕೊಳ್ಳುತ್ತಾರೆ. ಇಲ್ಲಿನ ಯಾರೂ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಲ್ಲ. ಗ್ರಾಮದಲ್ಲಿ ಮದ್ಯ ಮಾರಾಟ ನಡೆಯುತ್ತಿಲ್ಲ. ಏನೇ ಸಮಸ್ಯೆ ಬಂದರೂ ಎಲ್ಲರೂ ಒಟ್ಟಾಗಿ ಚರ್ಚಿಸಿ ಅಲ್ಲಿಯೇ ಬಗೆಹರಿಸಿಕೊಳ್ಳುತ್ತಾರೆ. ಯಾರಿಗಾದರೂ ಸಮಸ್ಯೆಯಿದ್ದರೆ ಪರಸ್ಪರ ಸಹಾಯ ಮಾಡುತ್ತಾರೆ. ಯಾರದೋ ಮನೆಯಲ್ಲಿ ಮದುವೆ ನಡೆದರೆ ಇಡೀ ಊರೇ ಅಲ್ಲಿಗೆ ತಲುಪಿ ಅತಿಥಿಗಳಿಗೆ ಯಾವುದೇ ತೊಂದರೆಯಾಗದಂತೆ ಕೈ ಜೋಡಿಸುತ್ತಾರೆ. ಶೇ 100ರಷ್ಟು ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಂಡು ಸ್ವಚ್ಛತೆಗೆ ಮಾದರಿಯಾಗಿದ್ದಾರೆ. ವಿವಿಧ ಪಕ್ಷಗಳಿಗೆ ಸೇರಿದ ಜನರು ಗ್ರಾಮದಲ್ಲಿ ಎಲ್ಲಿಯೂ ಅವರ ಧ್ವಜ, ಸ್ಮಾರಕ, ಪ್ರತಿಮೆಗಳನ್ನು ಸ್ಥಾಪಿಸಿಲ್ಲ.

ಗ್ರಾಮದ ಮಾದರಿ ವ್ಯವಸ್ಥೆಯ ಬಗ್ಗೆ ಮಾತನಾಡಿದ ಬಯ್ಯಾರಂ ಕಸ್ತೂರಬಾ ಗಾಂಧಿ ಶಾಲೆಯ ವಿಶೇಷ ಅಧಿಕಾರಿ ಕಲ್ಪನಾದೇವಿ, ಗ್ರಾಮದ ಜನರೆಲ್ಲ ಒಗ್ಗಟ್ಟಾಗಿದ್ದೇವೆ. ಎಲ್ಲರಿಗೂ ಅಕ್ಷರ ಜ್ಞಾನವಿದೆ. ಶಿಕ್ಷಣದ ಮಹತ್ವ ತಿಳಿದಿರುವುದರಿಂದಲೇ ಗ್ರಾಮದಲ್ಲಿ ಸರಿಯಾದ ಸೌಲಭ್ಯಗಳಿಲ್ಲದಿದ್ದರೂ ಗುರುಕುಲ ಶಾಲೆಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. ಇಡೀ ಗ್ರಾಮ ಒಂದೇ ಸ್ಥಳದಲ್ಲಿ ಸೇರುವುದನ್ನು ನೋಡಲು ತುಂಬಾ ಸಂತೋಷವಾಗುತ್ತದೆ ಎಂದರು.

ಇದನ್ನೂ ಓದಿ:ಸ್ವಸಹಾಯ ಸಂಘದ ಮೂಲಕ ಪಂಚಾಯತ್​ ಕಸ ನಿರ್ವಹಣೆ.. ಮಹಿಳೆಯರ ಸ್ವಯಿಚ್ಛೆಯಿಂದ ಗ್ರಾಮ ಸ್ವಚ್ಛ

ABOUT THE AUTHOR

...view details