ಕರ್ನಾಟಕ

karnataka

ETV Bharat / bharat

ಕರೆ, ಡೇಟಾ ದರ ಹೆಚ್ಚಿಸಿದ ಟೆಲಿಕಾಂ ಸಂಸ್ಥೆಗಳು: ಹೀಗಿದೆ ಹೊಸ ದರಪಟ್ಟಿ..

ಎಲ್ಲಾ ಟೆಲಿಕಾಂ ಕಂಪನಿಗಳು ಪ್ರಚಲಿತ ಯೋಜನೆಗಳ ದರವನ್ನು ಸಾಮೂಹಿಕವಾಗಿ ಹೆಚ್ಚಿಸಿವೆ. ಡೇಟಾ ಬಳಕೆಗೆ ಒಗ್ಗಿಕೊಂಡಿರುವ ಬಳಕೆದಾರರು ಹೆಚ್ಚು ಹಣ ಪಾವತಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

list-of-revised-tariff-plans-offered-by-jio-airtel-and-vodafone-idea
ಪೈಪೋಟಿಗೆ ಬಿದ್ದು ದರ ಹೆಚ್ಚಿಸಿದ ಟೆಲಿಕಾಂ ಸಂಸ್ಥೆಗಳು

By

Published : Nov 29, 2021, 10:05 PM IST

ಟೆಲಿಕಾಂ ಸಂಸ್ಥೆಗಳು ಒಂದರ ಹಿಂದೊಂದರಂತೆ ದರ ಏರಿಕೆ ಮಾಡಿವೆ. ಏರ್​​ಟೆಲ್, ರಿಲಯನ್ಸ್ ಜಿಯೋ, ವೊಡಾಫೋನ್‌ ಐಡಿಯಾ ಸಂಸ್ಥೆಗಳು ಏಕಾಏಕಿ ದರ ಏರಿಕೆ ನಿರ್ಧಾರ ಪ್ರಕಟಿಸಿ ಗ್ರಾಹಕರಿಗೆ ಆಘಾತ ನೀಡಿವೆ.

ಪ್ರಸ್ತುತ, ಪ್ರಿಪೇಯ್ಡ್ ಯೋಜನೆಗಳು, ಅನಿಯಮಿತ ವಾಯ್ಸ್​ ಕಾಲಿಂಗ್​​ ಪ್ಯಾಕ್‌ಗಳು ಮತ್ತು ಮೊಬೈಲ್ ಡೇಟಾ ರೀಚಾರ್ಜ್ ಬೆಲೆಗಳನ್ನು ಶೇ.20-25 ರಷ್ಟು ಹೆಚ್ಚಿಸಲಾಗಿದೆ.

ಏರ್​​​ಟೆಲ್​ ಆರಂಭದಲ್ಲಿ ಪ್ರಿಪೇಯ್ಡ್ ರೀಚಾರ್ಜ್ ಬೆಲೆಗಳನ್ನು ಏರಿಸುವುದಾಗಿ ಘೋಷಿಸಿತ್ತು. ಈ ಬೆಲೆಗಳು ನವೆಂಬರ್ 26 ರಿಂದ ಜಾರಿಗೆ ಬಂದಿವೆ. ಅದರ ನಂತರ ವೊಡಾಫೋನ್ ಐಡಿಯಾ ಕೂಡ ರೀಚಾರ್ಜ್ ದರ ಹೆಚ್ಚಿಸಿತು. ಈ ನಡುವೆ ಈ ಮೂರು ಟೆಲಿಕಾಂ ಸಂಸ್ಥೆಗಳಲ್ಲಿ ಗ್ರಾಹಕರು ಉತ್ತಮ ಯೋಜನೆಗಳ ಹುಡುಕಾಟದಲ್ಲಿದ್ದಾರೆ. ಸದ್ಯ ಈ ಎಲ್ಲಾ ಸಂಸ್ಥೆಯ ರೀಚಾರ್ಜ್​ ದರಗಳು ತುಟ್ಟಿಯಾಗಿವೆ.




ABOUT THE AUTHOR

...view details