ಕರ್ನಾಟಕ

karnataka

By

Published : Oct 12, 2021, 1:39 PM IST

ETV Bharat / bharat

ಇಲ್ಲಿ ಎರಡು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ‘ಎಣ್ಣೆ’ ಖರೀದಿಗೆ ಅವಕಾಶ!

ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿ ಎರಡು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಮದ್ಯ ಖರೀದಿಗೆ ಅವಕಾಶ ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಮದ್ಯ
Liquor

ನಾಮಕ್ಕಲ್(ತಮಿಳುನಾಡು):ಮದ್ಯಪ್ರಿಯರಿಗೆ ಇಲ್ಲಿನ ಜಿಲ್ಲಾಡಳಿತ ಶಾಕ್ ನೀಡಿದೆ. ಎರಡು ಡೋಸ್ ಲಸಿಕೆ ಪಡೆದವರು ಮಾತ್ರ ಇನ್ಮುಂದೆ ಮದ್ಯ ಖರೀದಿಸಬಹುದು ಎಂಬ ಆದೇಶ ಹೊರಡಿಸಿದೆ.

ನಾಮಕ್ಕಲ್​ನಲ್ಲಿರುವ ಎಲ್ಲಾ ಮದ್ಯದಂಗಡಿಗಳ ಮುಂದೆ ‘ಎರಡು ಡೋಸ್ ವ್ಯಾಕ್ಸಿನ್ ಪಡೆದವರಿಗೆ ಮಾತ್ರ ಮದ್ಯ ಖರೀದಿಸಲು ಅವಕಾಶ’ ಎಂಬ ಬೋರ್ಡ್ ಅಳವಡಿಸಲಾಗಿದೆ. ಮದ್ಯ ಖರೀದಿಸಲು ಬಂದವರು, ಬೋರ್ಡ್​ ನೋಡಿ ಗಾಬರಿಯಾಗಿದ್ದಾರೆ. ಅಲ್ಲದೆ, ಮದ್ಯ ಖರೀದಿ ಮಾಡುವವರು ವ್ಯಾಕ್ಸಿನ್ ಹಾಕಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಇದನ್ನೂ ಓದಿ: ಕಳೆದ ವರ್ಷದ ಮಾರ್ಚ್​ನಿಂದ ಇದೇ ಮೊದಲ ಬಾರಿಗೆ ದೇಶದಲ್ಲಿ ಚೇತರಿಕೆ ಪ್ರಮಾಣ ಹೆಚ್ಚಳ

ಜಿಲ್ಲೆಯಲ್ಲಿ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಸಂಪೂರ್ಣ ವ್ಯಾಕ್ಸಿನೇಷನ್ ದೃಷ್ಟಿಯಿಂದ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ.

ABOUT THE AUTHOR

...view details