ಇತಾವಾ (ಉತ್ತರ ಪ್ರದೇಶ):ಕೊರೊನಾ ಲಸಿಕೆ ಒಂದೇ ಕೋವಿಡ್ ಗೆಲ್ಲುವ ಮಾರ್ಗ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಕೋವಿಡ್ ವ್ಯಾಕ್ಸಿನ್ ಪಡೆಯಲು ಒಂದಷ್ಟು ಜನ ಹಿಂಜರಿಯುತ್ತಿದ್ದಾರೆ. ಅದಕ್ಕಾಗಿ ಉತ್ತರಪ್ರದೇಶ ಈ ಗ್ರಾಮದಲ್ಲಿ ಭರ್ಜರಿ ಪ್ಲ್ಯಾನ್ ನಡೆದಿದೆ.
ವ್ಯಾಕ್ಸಿನೇಶನ್ ಕರಾನೇವಾಲೋಂಕೋ ಹಿ ಮದಿರಾ ಬಿಕ್ರ್ ಕಿ ಜಾಯೇಗಿ (ವ್ಯಾಕ್ಸಿನೇಷನ್ ಮಾಡಿಕೊಂಡವರಿಗೆ ಮಾತ್ರ ಮದಿರೆ ಸಿಗುವುದು) ಮದ್ಯಪಾನದಲ್ಲೇ ಸ್ವರ್ಗ ಕಾಣುವ ಗುಂಡು ಪ್ರಿಯರಿಗೆ ಈ ಬಾರ್ ಮಾಲೀಕ ಕಂಡೀಷನ್ ಒಂದನ್ನು ಹಾಕಿದ್ದಾನೆ. ಇತಾವಾ ಗ್ರಾಮದ ಮದ್ಯದಂಗಡಿಯ ಮುಂದೆ ‘ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಮದೀರಾ’ ಎಂಬ ಬೋರ್ಡ್ ಹಾಕಿದ್ದಾರೆ.
‘ಎಣ್ಣೆ ಖರೀದಿಸುವುದಕ್ಕೆ ಕೊರೊನಾವೈರಸ್ ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ. ಲಸಿಕೆ ಹಾಕಿದ ಪ್ರಮಾಣಪತ್ರ ತೋರಿಸಿದ ಜನರಿಗೆ ಮಾತ್ರ ಮದ್ಯ ನೀಡಲಾಗುವುದು. ಗ್ರಾಹಕರ ಕೋವಿಡ್ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಪರಿಶೀಲಿಸಿದ ನಂತರವೇ ನಾವು ಮದ್ಯವನ್ನು ಮಾರಾಟ ಮಾಡುತ್ತಿದ್ದೇವೆ’ ಎಂದು ಅಂಗಡಿ ಮಾಲೀಕ ಹೇಳುತ್ತಾರೆ.
ಈ ಬಗ್ಗೆ ಅಂಗಡಿಗಳಿಗೆ ಸೂಚನೆ ನೀಡಿರುವ ಬಗ್ಗೆ ಜಿಲ್ಲಾ ಅಬಕಾರಿ ಅಧಿಕಾರಿ ಕಮಲ್ ಕುಮಾರ್ ಶುಕ್ಲಾ ‘ಅಂತಹ ಯಾವುದೇ ಆದೇಶವನ್ನು ಸರ್ಕಾರ ಹೊರಡಿಸಿಲ್ಲ. ಲಸಿಕೆ ಹಾಕಲು ಜನರನ್ನು ಪ್ರೇರೇಪಿಸುವಂತೆ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಮದ್ಯ ಮಾರಾಟಗಾರರನ್ನು ಕೇಳಿರಬಹುದು ಅಷ್ಟೇ’ ಎಂದು ಹೇಳಿದರು.