ಕರ್ನಾಟಕ

karnataka

ETV Bharat / bharat

ವರ್ಗಾವಣೆಗೆ ಜೆಇ 'ವಿಕೃತ' ಬೇಡಿಕೆ!: ಬೆಂಕಿ ಹಚ್ಚಿಕೊಂಡು ಲೈನ್​ಮ್ಯಾನ್ ಆತ್ಮಹತ್ಯೆ - ಉತ್ತರ ಪ್ರದೇಶದ ಲಖೀಂಪುರ ಖೇರಿ

ವರ್ಗಾವಣೆ ಮಾಡಲು ಜೆಇ ಅತ್ಯಂತ ಅಮಾನವೀಯ ಬೇಡಿಕೆ ಇಟ್ಟಿರುವುದರಿಂದ ತೀವ್ರ ಮನನೊಂದು ಲೈನ್​ಮ್ಯಾನ್​ ಒಬ್ಬರು ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ತಕ್ಷಣವೇ ಆರೋಪಿ ಜೆಇಯನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.

ಪೆಟ್ರೋಲ್​ನಿಂದ ಬೆಂಕಿ ಹಚ್ಚಿಕೊಂಡು ಲೈನ್​ಮ್ಯಾನ್ ಆತ್ಮಹತ್ಯೆ
ಪೆಟ್ರೋಲ್​ನಿಂದ ಬೆಂಕಿ ಹಚ್ಚಿಕೊಂಡು ಲೈನ್​ಮ್ಯಾನ್ ಆತ್ಮಹತ್ಯೆ

By

Published : Apr 11, 2022, 3:48 PM IST

ಲಖೀಂಪುರ ಖೇರಿ (ಉತ್ತರ ಪ್ರದೇಶ): 'ವರ್ಗಾವಣೆಗಾಗಿ ಒಂದು ಲಕ್ಷ ರೂ. ಲಂಚ ಮತ್ತು ಒಂದು ರಾತ್ರಿಗೆ ನಿನ್ನ ಪತ್ನಿಯನ್ನು ನನ್ನೊಂದಿಗೆ ಕಳುಹಿಸಬೇಕು..' ದುಷ್ಟ ಕಿರಿಯ ಇಂಜಿನಿಯರ್​​ (ಜೆಇ) ಒಬ್ಬನ ಈ ರೀತಿಯ ಕಿರುಕುಳದಿಂದಾಗಿ ತೀವ್ರವಾಗಿ ಮನನೊಂದ ಲೈನ್​ಮ್ಯಾನ್​ವೋರ್ವರು ಮೈಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಲಖೀಂಪುರ ಖೇರಿ ಜಿಲ್ಲೆಯಲ್ಲಿ ನಡೆದಿದೆ. ಶನಿವಾರ ರಾತ್ರಿ ಜೆಇ ಮನೆ ಮುಂದೆಯೇ ಅವರು ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

45 ವರ್ಷದ ಗೋಕುಲ್​ ಪ್ರಸಾದ್​ ಮೃತ ಲೈನ್​ಮ್ಯಾನ್. ಇವರು ಕಳೆದ 22 ವರ್ಷಗಳಿಂದ ಇಂಧನ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮೊದಲು ಪಾಲಿಯಾ ವಿದ್ಯುತ್​ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ನಂತರ ಅಲಿಗಂಜ್​ಗೆ ವರ್ಗಾಯಿಸಲಾಗಿತ್ತು. ಆದರೆ, ಪಾಲಿಯಾದಲ್ಲಿ ಇಡೀ ಕುಟುಂಬ ನೆಲೆಸಿದ್ದರಿಂದ ಮರಳಿ ಪಾಲಿಯಾಗೆ ವರ್ಗಾವಣೆ ಮಾಡುವಂತೆ ಗೋಕುಲ್​​ ಮನವಿ ಮಾಡಿದ್ದರಂತೆ. ಆದರೆ, ಜೆಇ ನಾಗೇಂದ್ರ ಶರ್ಮಾ ವಿಕೃತವಾದ ಬೇಡಿಕೆ ಇಟ್ಟಿದ್ದನಂತೆ.

ಜೆಇ ಕಿರುಕುಳದಿಂದಾಗಿಯೇ ಗೋಕುಲ್​ ಮಾನಸಿಕವಾಗಿ ನೊಂದಿದ್ದರು. ಈ ಸಂಬಂಧ ಪೊಲೀಸ್​ ಠಾಣೆಯಲ್ಲಿ ದೂರು ಸಹ ದಾಖಲಿಸಲಾಗಿತ್ತು. ಆದರೂ, ಪೊಲೀಸರು ಆರೋಪಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಮೃತನ ಪತ್ನಿ ಮನನೊಂದು ಹೇಳಿದ್ದಾರೆ. ಗೋಕುಲ್​ಗೆ ನಾಲ್ವರು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ.

ಸಾವಿಗೂ ಮುನ್ನ ವಿಡಿಯೋ ಹೇಳಿಕೆ:ಜೆಇಯ ಅಮಾನವೀಯ ಬೇಡಿಕೆಯಿಂದ ಬೇಸತ್ತಿದ್ದ ಲೈನ್​ಮ್ಯಾನ್​ ಗೋಕುಲ್​ 59 ಸೆಕೆಂಡ್​ಗಳ ವಿಡಿಯೋ ಮಾಡಿದ್ದು, ಜೆಇ ವಿರುದ್ಧ ಹೇಳಿಕೆ ದಾಖಲಿಸಿದ್ದಾರೆ. ನಂತರ ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ತೀವ್ರ ಸುಟ್ಟ ಗಾಯಗಳಿಂದ ನರಳುತ್ತಿದ್ದ ಆತನನ್ನು ಲಖನೌ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೆಇ ಅಮಾನತು:ಲೈನ್​ಮ್ಯಾನ್​ ಆತ್ಮಹತ್ಯೆ ನಂತರ ಇಂಧನ ಇಲಾಖೆಯಲ್ಲಿ ನೌಕರರ ಆಕ್ರೋಶ ಭುಗಿಲೆದ್ದಿದೆ. ಅಲ್ಲದೇ, ಸ್ವತಃ ಗೋಕುಲ್​ ಮೇಲಾಧಿಕಾರಿ ವಿರುದ್ಧ ವಿಡಿಯೋ ಮಾಡಿ ಸಾವನ್ನಪ್ಪಿರುವುದಿಂದ ಇಲಾಖೆ ಕೊನೆಗೂ ಎಚ್ಚೆತ್ತುಕೊಂಡಿದೆ. ಹೀಗಾಗಿ ತಕ್ಷಣವೇ ಆರೋಪಿ ಜೆಇ ನಾಗೇಂದ್ರ ಶರ್ಮಾನನ್ನು ಅಮಾನತು ಮಾಡಲಾಗಿದೆ. ಜತೆಗೆ ಮತ್ತೊಬ್ಬ ಲೈನ್​ಮ್ಯಾನ್​ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ ಎಂದು ಅಧೀಕ್ಷಕ ಇಂಜಿನಿಯರ್​ ರಾಮ್​ ತಿಳಿಸಿದ್ದಾರೆ.

ಇದನ್ನೂ ಓದಿ:ಸೆಕ್ಷನ್ 144 ಉಲ್ಲಂಘನೆ ಪ್ರಕರಣ : ಕೋರ್ಟ್​ಗೆ ಶರಣಾಗಿ ಜಾಮೀನು ಪಡೆದ ಕೇಂದ್ರ ಸಚಿವ

ABOUT THE AUTHOR

...view details