ಸತ್ನಾ, ಮಧ್ಯಪ್ರದೇಶ: ಸಿಡಿಲು ಬಡಿದು ಸತ್ನಾ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಸುಮಾರು ನಾಲ್ವರು ಗಾಯಗೊಂಡಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೊದಲ ಘಟನೆ ಬದೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಧರ್ಮಪುರ ಪುರಾನಿ ಬಸ್ತಿ ಗ್ರಾಮದ ಹನುಮಾನ್ ದೇವಾಲಯದ ಬಳಿ ನಡೆದಿದೆ. ಮಳೆ ಬೀಳುವ ವೇಳೆ ದೇವಾಲಯದ ಬಳಿ ಧಾವಿಸಿದ್ದ ಮೀನುಗಾರರಿಗೆ ಸಿಡಿಲು ಬಡಿದು ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮತ್ತೋರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಮೃತರನ್ನು ಕಾಕ್ರಾ ಗ್ರಾಮದ ಅವಿನಾಶ್ ಕೋಲ್, ಸುರೇಂದ್ರ ಸಾಹು, ಜಿತೇಂದ್ರ ಕೋಲ್ ಮತ್ತು ಭಾರತ್ ಕೋಲ್ ಎಂದು ಗುರುತಿಸಲಾಗಿದೆ. ಇನ್ನು ರಾಜು ಕೋಲ್, ಸಿಪಾಹಿ ಕೋಲ್ ಮತ್ತು ಸಂಪತ್ ಕೋಲ್ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.