ಮುಂಬೈ: 1993ರ ಮುಂಬೈ ಬ್ಲಾಸ್ಟ್ ಅಪರಾಧಿ ಯಾಕೂಬ್ ಮೆಮನ್ ಸಮಾಧಿಯ ಕುರಿತಾಗಿ ಹೊಸ ವಿವಾದ ಶುರುವಾಗಿದೆ. ಸಮಾಧಿಯನ್ನು ಶೃಂಗರಿಸಿ ಸುಂದರಗೊಳಿಸುವ ಕೆಲವರ ಕೆಲಸ ಪ್ರಶ್ನೆ ಹುಟ್ಟು ಹಾಕಿದೆ. ನೂರಾರು ಜನರ ಸಾವಿಗೆ ಕಾರಣನಾದ ಅಪರಾಧಿಯೊಬ್ಬನ ಸಮಾಧಿಗೆ ಏಕೆ ಶೃಂಗಾರ ಎಂದು ಭಾರತೀಯ ಜನತಾ ಪಕ್ಷ ಪ್ರಶ್ನಿಸಿದೆ.
ಇತ್ತೀಚಿನ ಮಾಹಿತಿಯ ಪ್ರಕಾರ, ಯಾಕೂಬ್ ಮೆಮನ್ ಸಮಾಧಿಯ ಮೇಲಿನ ಅಳವಡಿಸಲಾಗಿದ್ದ ಲೈಟಿಂಗ್ ಅನ್ನು ಈಗ ತೆಗೆದುಹಾಕಲಾಗಿದೆ. ಹೆಚ್ಚುತ್ತಿರುವ ವಿವಾದದ ಹಿನ್ನೆಲೆಯಲ್ಲಿ ದೀಪಗಳನ್ನು ತೆಗೆದುಹಾಕಲಾಗಿದೆ.
ಈ ಸಮಾಧಿ ಯಾವುದೇ ಪೀರ್‌ಬಾಬಾನದ್ದಲ್ಲ. ಇದು 1993ರ ಮುಂಬೈ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್‌ನ ಸಮಾಧಿ. ಅಪರಾಧಿಯ ಸಮಾಧಿಯನ್ನು ಬಿಳಿ ಅಮೃತಶಿಲೆಯಿಂದ ಮಜಾರ್ ಮಾಡಲಾಗಿದೆ. ಸ್ಫೋಟದ ದುಷ್ಕರ್ಮಿಯ ಸಮಾಧಿಗೆ ಏಕೆ ಇಷ್ಟೊಂದು ಅಲಂಕಾರ ಮಾಡಿರುವುದು ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ಬಿಜೆಪಿ ನಾಯಕ ರಾಮ್ ಕದಮ್ ಹೇಳಿದ್ದಾರೆ.
12 ಮಾರ್ಚ್ 1993 ರಂದು ಮುಂಬೈನಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಜ್ಞೆಯ ಮೇರೆಗೆ ಸರಣಿ ಬಾಂಬ್ ಸ್ಫೋಟಗಳನ್ನು ನಡೆಸಲಾಗಿತ್ತು. ಇದರಲ್ಲಿ 257 ಜನರು ಸಾವನ್ನಪ್ಪಿದರು ಮತ್ತು 700 ಜನ ಗಾಯಗೊಂಡಿದ್ದರು.
ಇದನ್ನು ಓದಿ:ಹುಸೇನ್ ಸಾಗರ್ ಅಲ್ಲ, ವಿನಾಯಕ ಸಾಗರ್: ತೆಲಂಗಾಣ ಬಿಜೆಪಿ ಅಧ್ಯಕ್ಷರ ಪ್ರತಿಪಾದನೆ