ವಿಜಯವಾಡ, ಆಂಧ್ರಪ್ರದೇಶ: ತನ್ನ ಮಗಳ ವಯಸ್ಸಿನ ಹುಡುಗಿಯ ಮೇಲೆ ಪ್ರತಿದಿನ ಲೈಂಗಿಕ ದೌರ್ಜನ್ಯ ನಡೆಸಿ ಆತ್ಮಹತ್ಯೆಗೆ ಕಾರಣನಾದ ವ್ಯಕ್ತಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಎರಡು ತಿಂಗಳಿಂದ ಪ್ರತಿದಿನ ಅವಾಚ್ಯ ಶಬ್ಧಗಳಿಂದ ಕಿರುಕುಳ ನೀಡುತ್ತಿದ್ದುದನ್ನು ತಾಳಲಾರದೇ ಅಪಾರ್ಟ್ಮೆಂಟ್ ಮೇಲಿಂದ ಹಾರಿ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಿ ವಿನೋದ್ ಕುಮಾರ್ ಜೈನ್ (49)ಗೆ ಜೀವಾವಧಿ ಶಿಕ್ಷೆ ಹಾಗೂ ಮೂರು ಲಕ್ಷ ರೂಪಾಯಿ ದಂಡ ವಿಧಿಸಿ ವಿಜಯವಾಡ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶೆ ಎಸ್.ರಜಿನಿ ಬುಧವಾರ ತೀರ್ಪು ನೀಡಿದ್ದಾರೆ.
ವಿವಿಧ ಕಲಂಗಳಡಿ ಪ್ರಕರಣ ದಾಖಲು:ಕಳೆದ ವರ್ಷ ಜ.29ರಂದು ನಡೆದ ಈ ಘಟನೆ ಕುರಿತು ಅಪ್ರಾಪ್ತ ಬಾಲಕಿಯ ಅಜ್ಜ ನೀಡಿದ ದೂರಿನ ಮೇರೆಗೆ ಅದೇ ದಿನ ಭವಾನಿಪುರಂ ಪೊಲೀಸರು ಕಲಂ 306, 354ಎ, 354, 509, 354ಡಿ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿತ್ತು. POCSO ಕಾಯಿದೆಯ 506, 8 ಮತ್ತು 10 ಅಡಿ ತನಿಖೆ ನಡೆಸಲಾಯಿತು. ಭವಾನಿಪುರಂ ಪಿಎಸ್‌ಐ ಪ್ರಸಾದ್ ಪ್ರಕರಣದ ತನಿಖೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗುಜ್ಜಲ ನಾಗಿರೆಡ್ಡಿ ಮತ್ತು ಜಿ.ವಿ.ನಾರಾಯಣ ರೆಡ್ಡಿ ಅವರು 20 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿ ಅವರ ಹೇಳಿಕೆಗಳನ್ನು ನ್ಯಾಯಾಲಯದಲ್ಲಿ ದಾಖಲಿಸಿಕೊಂಡರು. ಈ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ. ಆರೋಪಿ ಕಳೆದ ವರ್ಷ ಫೆಬ್ರವರಿ 1 ರಿಂದ ಬಂಧಿಸಲಾಗಿತ್ತು.
ಅಮಾನುಷ ಅಪರಾಧಕ್ಕೆ ತೀರ್ಪು:ಐಪಿಸಿ ಸೆಕ್ಷನ್ 305 ರ ಅಡಿಯಲ್ಲಿ ಜೀವಾವಧಿ ಶಿಕ್ಷೆ, ರೂ. 1 ಲಕ್ಷ ದಂಡ, ಪೋಕ್ಸೋ ಸೆಕ್ಷನ್ 9(ಎಲ್), 10ರ ಅಡಿ ಏಳು ವರ್ಷಗಳ ಕಠಿಣ ಸೆರೆವಾಸ, ರೂ. 50,000 ದಂಡ, ಪೋಕ್ಸೋ ಕಾಯ್ದೆಯ ಸೆಕ್ಷನ್ 12 ರ ಅಡಿ ಮೂರು ವರ್ಷ, ದಂಡ 50,000, ಐಪಿಸಿ ಸೆಕ್ಷನ್ 354 ಐಪಿಸಿ ಸೆಕ್ಷನ್ 509 ಅಡಿ ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದಾರೆ.
ಈ ಎಲ್ಲ ಶಿಕ್ಷೆಯನ್ನು ಏಕಕಾಲದಲ್ಲಿ ಜಾರಿಗೊಳಿಸಿ, ಸಂತ್ರಸ್ತ ಕುಟುಂಬಕ್ಕೆ 3 ಲಕ್ಷ ಮತ್ತು 2.4 ಲಕ್ಷ ರೂಪಾಯಿ ದಂಡ ಪಾವತಿಸಬೇಕು ಎಂದು ಕೋರ್ಟ್ ಆದೇಶಿಸಿದೆ. ಈ ಪ್ರಕರಣವನ್ನು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆಕೆಯ ಸಾವಿಗೆ ಕಾರಣವಾದ ಮತ್ತು ಆಕೆಯ ಪೋಷಕರನ್ನು ಭಾವನಾತ್ಮಕವಾಗಿ ಸಂಕಷ್ಟಕ್ಕೆ ಸಿಲುಕಿಸುವ ಘೋರ ಅಪರಾಧ ಎಂದು ಪರಿಗಣಿಸಬೇಕು ಅಂತಾ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.