ಸಿಯೋಲ್: ಅಮೆರಿಕದಲ್ಲಿ ಇತ್ತೀಚೆಗೆ ನಡೆದ ವ್ಯಾಪಾರ ಪ್ರದರ್ಶನದಲ್ಲಿ ವಿಶ್ವದ ಅತಿದೊಡ್ಡ ಆರ್ಗ್ಯಾನಿಕ್ ಎಲ್ಇಡಿ (organic light-emitting diode OLED) ಟಿವಿಯನ್ನು ಕಂಪನಿ ಪ್ರದರ್ಶಿಸಿದೆ ಎಂದು ಎಲ್ಜಿ ಎಲೆಕ್ಟ್ರಾನಿಕ್ಸ್ ಹೇಳಿದೆ. ಉತ್ತರ ಅಮೆರಿಕದ ಪ್ರೀಮಿಯಂ ಟಿವಿ ಮಾರುಕಟ್ಟೆಯನ್ನು ಗುರಿಯಾಗಿಸಿ ಈ ಟಿವಿ ಬಿಡುಗಡೆ ಮಾಡಲಾಗಿದೆ.
ವಿಶ್ವದ ಅತಿದೊಡ್ಡ OLED ಟಿವಿ ಬಿಡುಗಡೆ ಮಾಡಿದ ಎಲ್ಜಿ ಟೆಕ್ಸಾಸ್ನ ಡಲ್ಲಾಸ್ನಲ್ಲಿ ನಡೆದ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಡಿಸೈನ್ ಇನ್‌ಸ್ಟಾಲೇಶನ್ ಅಸೋಸಿಯೇಷನ್ (CEDIA) ಎಕ್ಸ್‌ಪೋ 2022 ನಲ್ಲಿ ಎಲ್ಜಿ ಎಲೆಕ್ಟ್ರಾನಿಕ್ಸ್ ತನ್ನ 97-ಇಂಚಿನ OLED TV ಅಥವಾ OLED evo ಗ್ಯಾಲರಿ ಆವೃತ್ತಿಯ ಟಿವಿಗಳ ಶ್ರೇಣಿಯನ್ನು ಅನಾವರಣಗೊಳಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ದಕ್ಷಿಣ ಕೊರಿಯಾದ ಗ್ರಾಹಕ ಎಲೆಕ್ಟ್ರಾನಿಕ್ಸ್ ಉಪಕರಣ ತಯಾರಕ ಕಂಪನಿ ಎಲ್ಜಿ, ಕಳೆದ ತಿಂಗಳು ಬರ್ಲಿನ್‌ನಲ್ಲಿ ನಡೆದ IFA 2022 ಎಲೆಕ್ಟ್ರಾನಿಕ್ಸ್ ವ್ಯಾಪಾರ ಪ್ರದರ್ಶನದಲ್ಲಿ 97-ಇಂಚಿನ OLED ಟಿವಿಯನ್ನು ಪ್ರಥಮ ಬಾರಿಗೆ ಅನಾವರಣಗೊಳಿಸಿತ್ತು.
ಈಗ CEDIA 2022 ಪ್ರದರ್ಶನದಲ್ಲಿ ಜಗತ್ತಿನ ಪ್ರಥಮ ಮಡಚಬಹುದಾದ OLED ಗೇಮಿಂಗ್ ಮಾನಿಟರ್ ಮತ್ತು ಚಲಿಸಬಹುದಾದ ಎಲ್ಜಿ StanbyME ಸಾಧನಗಳನ್ನು ಕೂಡ ಪ್ರದರ್ಶಿಸಿದೆ. ನವೆಂಬರ್ನಲ್ಲಿ ಬರುವ ಬ್ಲ್ಯಾಕ್ ಫ್ರೈಡೇ ಮತ್ತು ಡಿಸೆಂಬರ್ನ ಕ್ರಿಸ್ಮಸ್ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಅಮೆರಿಕದ ಪ್ರೀಮಿಯಂ ಟಿವಿ ಮಾರುಕಟ್ಟೆಯಲ್ಲಿ ಪ್ರಭುತ್ವ ಸಾಧಿಸಲು ಹೊಸ ಶ್ರೇಣಿಯ ಟಿವಿಗಳನ್ನು ಬಿಡುಗಡೆ ಮಾಡಿರುವುದಾಗಿ ಎಲ್ಜಿ ಎಲೆಕ್ಟ್ರಾನಿಕ್ಸ್ ತಿಳಿಸಿದೆ. ಈ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಎಲ್ಜಿ ಮಾರಿದ ಒಟ್ಟು ಟಿವಿಗಳ ಪೈಕಿ OLED ಟಿವಿಗಳ ಪಾಲು ಶೇ 33.2ರಷ್ಟಿದೆ.
ಇದನ್ನೂ ಓದಿ: ವಿಶ್ವದ ಮೊದಲ ರೋಲಿಂಗ್ ಟಿವಿ ಹೊರತಂದ ಎಲ್ಜಿ.. ಬೆಲೆ ಎಷ್ಟಿದೆ ಗೊತ್ತಾ?