ಕೋಲ್ಕತ್ತಾ: ಟಿಎಂಸಿ ಸಂಸದೆ ನುಸ್ರತ್ ಜಹಾನ್ ಅವರ ವೈವಾಹಿಕ ಜೀವನ ಕುರಿತು ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಅವರು ವೈವಾಹಿಕ ಜೀವನ ಕುರಿತು ಸುಳ್ಳು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತನಿಖೆಯಾಗಲಿ ಎಂದು ಬಿಜೆಪಿ ಸಂಸದೆ ಸಂಘಮಿತ್ರಾ ಮೌರ್ಯ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.
2019ರಲ್ಲಿ ನುಸ್ರತ್ ಮದುವೆಯಾಗಿರುವುದಾಗಿ ತಿಳಿಸಿದ್ದರು. ಅಲ್ಲದೇ ನಿಖಿಲ್ ಜೈನ್ ಎಂಬಾತನನ್ನು ವರಿಸಿದ್ದು, ವಿವಾಹ ಸಿಂಧುವಾಗಿಲ್ಲ ಎಂದು ತಾವೇ ಹೇಳಿಕೆ ನೀಡಿದ್ದರು. ನಮ್ಮ ವಿವಾಹವು ಟರ್ಕಿಶ್ ಕಾನೂನಿನ ಉಲ್ಲಂಘನೆಯಾಗಿದೆ. ಇದು ಭಾರತದಲ್ಲಿ ಮಾನ್ಯವಾಗಿಲ್ಲ. ನಾವಿಬ್ಬರೂ ಬಹಳ ಹಿಂದೆಯೇ ದೂರಾಗಿದ್ದೇವೆ ಎಂದಿದ್ದರು.