ನವದೆಹಲಿ: ಭಾರತದ ಕೋವಿಡ್ ಲಸಿಕಾಭಿಯಾನವು ದಾಖಲೆಯ 100 ಕೋಟಿ ಡೋಸ್ ವ್ಯಾಕ್ಸಿನ್ ನೀಡುವಲ್ಲಿ ಯಶಸ್ವಿಯಾಗಿದ್ದು, ಈ ಕುರಿತು ಕಾಂಗ್ರೆಸ್ ನಾಯಕ ಶಶಿ ತರೂರ್ 'ರಚನಾತ್ಮಕ ಟೀಕೆ' ವ್ಯಕ್ತಪಡಿಸಿದ್ದಾರೆ.
"ಇದು ಎಲ್ಲ ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ. ಇದಕ್ಕಾಗಿ ನಾವು ಸರ್ಕಾರಕ್ಕೆ ಕ್ರೆಡಿಟ್ ನೀಡೋಣ. ಆದರೆ ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಹಾಗೂ ಲಸಿಕೆ ವಿಚಾರದಲ್ಲಿ ಸರ್ಕಾರದ ಅಸರ್ಮಪಕ ನಿರ್ವಹಣೆಯ ದೋಷದಿಂದ ಇದೀಗ ಭಾಗಶಃ ಮುಕ್ತಿ ದೊರೆತಿದೆ. ಆದರೆ ಈ ಹಿಂದಿನ ವೈಫಲ್ಯಗಳಿಗೆ ಇನ್ನೂ ಸರ್ಕಾರ ಹೊಣೆಯಾಗಿರುತ್ತದೆ" ಎಂದು ತರೂರ್ ಟ್ವೀಟ್ ಮಾಡಿದ್ದಾರೆ.