ಮುಂಬೈ(ಮಹಾರಾಷ್ಟ್ರ):ಇಲ್ಲಿನ ಹೊಸ ಸಂಸತ್ ಭವನದ ಮಹಾದ್ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿಯನ್ನು ಪ್ರದರ್ಶಿಸಬೇಕು ಎಂದು ಶಿವಸೇನೆ (ಯುಬಿಟಿ) ಸೋಮವಾರ ಒತ್ತಾಯಿಸಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಸೇನಾ (ಯುಬಿಟಿ) ಸಂಸದ ಮತ್ತು ಮುಖ್ಯ ವಕ್ತಾರ ಸಂಜಯ್ ರಾವುತ್ , ''ಜನರ ಮನಸ್ಸಿನಲ್ಲಿ ಅನುಮಾನಗಳನ್ನು ಸೃಷ್ಟಿಸುವ ಮೂಲಕ ಪ್ರಧಾನಿ ಅವರು ಪದವಿ ಬಗ್ಗೆ ರಹಸ್ಯವನ್ನು ಏಕೆ ಕಾಪಾಡಲಾಗುತ್ತಿದೆ'' ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದರು.
ಜನರ ಅನುಮಾನಗಳನ್ನು ದೂರ ಮಾಡಿ - ರಾವತ್:"ಕೆಲವರು ಪ್ರಧಾನಿ ಪದವಿಯನ್ನು ನಕಲಿ ಎಂದು ಕರೆಯುತ್ತಿದ್ದಾರೆ. ಸಂಪೂರ್ಣ ರಾಜ್ಯಶಾಸ್ತ್ರ ಪದವಿ ಐತಿಹಾಸಿಕ ಮತ್ತು ಕ್ರಾಂತಿಕಾರಿ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ. ಆದ್ದರಿಂದ ನಮ್ಮ ಹೊಸ ಸಂಸತ್ತಿನ ಮಹಾದ್ವಾರದಲ್ಲಿ ಅದನ್ನು ಪ್ರದರ್ಶಿಸಬೇಕು. ಇದರಿಂದ ಜನರ ಅನುಮಾನಗಳು ದೂರವಾಗಲು ಸಾಧ್ಯವಾಗುತ್ತದೆ" ಎಂದು ರಾವುತ್ ಹೇಳಿದರು.
ಪ್ರಧಾನಿ ಪದವಿ ಕೇಳುವಾಗ, ಮರೆಮಾಚುವುದೇಕೆ?- ರಾವತ್:''ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನ ಮಂತ್ರಿ ಪದವಿಯ ಬಗ್ಗೆ ವಿವರಗಳನ್ನು ಕೇಳಿದಾಗ, ಅವರು ಅದನ್ನು ನಿರಾಕರಿಸಿದರು. ಜೊತೆಗೆ 25,000 ರೂಪಾಯಿಗಳ ದಂಡವನ್ನು ಸಹ ವಿಧಿಸಿದರು'' ಎಂದು ಹೇಳಿದ ರಾವುತ್, "ಪ್ರಧಾನಿ ಪದವಿ ಕೇಳುವಾಗ, ಮರೆಮಾಚುವುದೇಕೆ, ಅದರಲ್ಲಿ ಏನಿದೆ? ಈಗ ಮೋದಿ ಅವರೇ ಮುಂದೆ ಬಂದು ಅವರ ಶೈಕ್ಷಣಿಕ ಪದವಿಯ ಬಗ್ಗೆ ಗೊಂದಲವನ್ನು ತೆರವುಗೊಳಿಸಬೇಕು ಎಂದು ನಾವು ಭಾವಿಸುತ್ತೇವೆ" ಎಂದು ರಾವತ್ ಒತ್ತಾಯಿಸಿದರು.
'ಸಾಮ್ನಾ'ದಲ್ಲಿ ನರೇಂದ್ರ ಮೋದಿ ತರಾಟೆ:ಪ್ರಧಾನಮಂತ್ರಿ ಪದವಿ ನಕಲಿ ಎಂದು ಪ್ರತಿಪಾದಿಸಿರುವ ಪಕ್ಷದ ಪತ್ರಿಕೆಗಳು, 'ಸಾಮ್ನಾ' ಮತ್ತು 'ದೋಪಹರ್ ಕಾ ಸಾಮ್ನಾ' ಸಂಪಾದಕೀಯದಲ್ಲಿ ನರೇಂದ್ರ ಮೋದಿಯನ್ನು ತರಾಟೆ ತೆಗೆದುಕೊಳ್ಳಲಾಗಿದೆ. ಪದವಿ ವಿಷಯ ಮತ್ತೊಮ್ಮೆ ರಾಜಕೀಯ ವಲಯದಲ್ಲಿ ಪ್ರಸ್ತಾಪವಾಗುತ್ತಿದೆ. ಏತನ್ಮಧ್ಯೆ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಇತ್ತೀಚಿನ ಕೋಮು ಹಿಂಸಾಚಾರವನ್ನು ಆಡಳಿತಾರೂಢ ಬಿಜೆಪಿಯ ಸಂಯೋಜಿತವಾಗಿದೆ'' ಎಂದು ರಾವುತ್ ಗಂಭೀರವಾಗಿ ಆರೋಪಿಸಿದ್ದಾರೆ.
"ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾಚಾರವು ಬಿಜೆಪಿಯಿಂದ ಯೋಜಿತವಾಗಿದೆ, ಪ್ರಾಯೋಜಿತವಾಗಿದೆ. ಎಲ್ಲೆಲ್ಲಿ ಚುನಾವಣೆಗಳು ಸಮೀಪಿಸುತ್ತಿವೆ ಮತ್ತು ಬಿಜೆಪಿಗೆ ತಮ್ಮ ನಷ್ಟದ ಭಯವಿದೆ, ಅಥವಾ ಬಿಜೆಪಿ ಸರ್ಕಾರ ದುರ್ಬಲವಾಗಿದ್ದರೆ, ಅಲ್ಲಿ ಗಲಭೆಗಳು ನಡೆಯುತ್ತವೆ" ಎಂದು ರಾವತ್ ತೀವ್ರ ವಾಗ್ದಾಳಿ ನಡೆಸಿದರು.
ಮಾಜಿ ಸಿಎಂ ಉದ್ಧವ್ ಠಾಕ್ರೆಯಿಂದ ಟೀಕಾಸ್ತ್ರ:ಭಾನುವಾರ ರಾತ್ರಿ, ಶಿವಸೇನಾ (ಯುಬಿಟಿ) ಅಧ್ಯಕ್ಷ ಮತ್ತು ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರು ಛತ್ರಪತಿ ಸಂಭಾಜಿನಗರದ ಮಹಾ ವಿಕಾಸ್ ಅಘಾಡಿಯಲ್ಲಿ (ಎಂವಿಎ) ಕಾರ್ಯಕ್ರಮದಲ್ಲಿ ಗುಡುಗಿದರು. ರಾಜ್ಯ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಇತ್ತೀಚೆಗೆ ನೀಡಲಾದ ಡಾಕ್ಟರೇಟ್ ಪದವಿ ವಿರುದ್ಧವೂ ಠಾಕ್ರೆ ಹರಿಹಾಯ್ದರು.
"ಕೆಲವರು ತಮ್ಮ ಪದವಿಗಳನ್ನು ಪಡೆಯುತ್ತಾರೆ. ಇತರರು ಅದನ್ನು ಗಳಿಸುತ್ತಾರೆ. ಈಗ ಪಿಎಚ್‌ಡಿಗಳು ಸಹ ಮಾರಾಟಕ್ಕೆ ಬಂದಿವೆ ಎಂದು ತೋರುತ್ತದೆ. ಒಬ್ಬರು ಅದನ್ನು ತೋರಿಸುತ್ತಾರೆ ಮತ್ತು ಇನ್ನೊಬ್ಬರು ಅದನ್ನು ಮರೆಮಾಚುತ್ತಾರೆ. ಅದರಲ್ಲಿ ಮರೆಮಾಚಲು ಏನಿದೆ? ಕಾಲೇಜು ಪ್ರಶಸ್ತಿ ನೀಡುತ್ತದೆ. ಪದವಿಯನ್ನು ತಮ್ಮ ಪ್ರತಿಷ್ಠಿತ ಹಳೆಯ ವಿದ್ಯಾರ್ಥಿಯ ಬಗ್ಗೆ ಹೆಮ್ಮೆ ಪಡಬೇಕು. ಅದರ ಬದಲಿಗೆ ಪ್ರಶ್ನಿಸುವವರಿಗೆ (ಪ್ರಧಾನಿ ಪದವಿ) ಮತ್ತು ಅದನ್ನು ನೋಡಲು ಕೇಳುವವರಿಗೆ ದಂಡ ವಿಧಿಸಲಾಗುತ್ತದೆ" ಎಂದು ಠಾಕ್ರೆ ಗರಂ ಆದರು.
ರಾವುತ್ ಇನ್ನೂ ಒಂದು ಹಂತ ಮುಂದು ಹೋಗಿ, ಎಷ್ಟು ಭಾರತೀಯ ಜನತಾ ಪಕ್ಷದ ನಾಯಕರು ಇಂತಹ ಸಂಶಯಾಸ್ಪದ ಪದವಿಗಳನ್ನು ಪಡೆದುಕೊಂಡಿದ್ದಾರೆ ಎಂದು ಪ್ರಶ್ನಿಸಿದರು. ಇದು ದೇಶದ ಗಂಭೀರದ ವಿಷಯ ಎಂದೂ ಅವರು ಕಳವಳ ವ್ಯಕ್ತಪಡಿಸಿದರು.
ಅರವಿಂದ್ ಕೇಜ್ರಿವಾಲ್ ಹೇಳಿದ್ದೇನು?:ಪ್ರಧಾನಿ ನರೇಂದ್ರ ಮೋದಿ ಅವರ ಎಂಎ ಪದವಿಯ ವಿವರಗಳನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ನೀಡುವಂತೆ ಗುಜರಾತ್ ವಿಶ್ವವಿದ್ಯಾಲಯಕ್ಕೆ ನಿರ್ದೇಶಿಸಿದ ಕೇಂದ್ರ ಮಾಹಿತಿ ಆಯೋಗದ (ಸಿಐಸಿ) 2016ರ ಆದೇಶವನ್ನು ಶುಕ್ರವಾರ ಗುಜರಾತ್ ಹೈಕೋರ್ಟ್ ರದ್ದುಗೊಳಿಸಿತ್ತು. ಈ ಮೊಕದ್ದಮೆಗೆ ಸಂಬಂಧಿಸಿದಂತೆ ನ್ಯಾಯಾಲಯವು ವಿಧಿಸಿದ್ದ 25,000 ರೂ. ದಂಡಕ್ಕೆ ಪ್ರತಿಕ್ರಿಯಿಸಿದ್ದ ಕೇಜ್ರಿವಾಲ್, ''ಪ್ರಧಾನಿ ತಮ್ಮ ಪದವಿ ತೋರಿಸದಿರುವುದಕ್ಕೆ ಎರಡು ಕಾರಣಗಳಿರಬಹುದು'' ಎಂದು ಆರೋಪಿಸಿದರು. “ಅವರ ಅಹಂಕಾರದಿಂದಾಗಿ ಅದನ್ನು ಯಾರಿಗೂ ತೋರಿಸಬೇಕಾದ ಅಗತ್ಯವಿಲ್ಲ ಎಂದು ಅವರು ಭಾವಿಸುತ್ತಾರೆ. ಆದರೆ, ಈ ರೀತಿಯ ನಡವಳಿಕೆಯು ಪ್ರಜಾಪ್ರಭುತ್ವದಲ್ಲಿ ಮಾನ್ಯವಾಗಿಲ್ಲ. ಈ ಪದವಿ ನಕಲಿಯಾಗಿರಬಹುದು ಎಂಬುದು ಇನ್ನೊಂದು ಪ್ರಶ್ನೆಯಾಗಿದೆ'' ಎಂದು ದೆಹಲಿ ಸಿಎಂ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ಸಂಜಯ್ ಸಿಂಗ್ ಶುಕ್ರವಾರವೂ ಪ್ರಧಾನಿಯನ್ನು ಗುರಿಯಾಗಿಸಿದ್ದರು. ಪತ್ರಿಕಾಗೋಷ್ಠಿಯಲ್ಲಿ ಸಂಜಯ್ ಸಿಂಗ್ ಅವರು, ಮೋದಿ ಬಗ್ಗೆ ಟೀಕಿಸಿದ್ದರು. ''ಅವರಿಗೆ ವಿಜ್ಞಾನ, ಇತಿಹಾಸ, ಭೂಗೋಳದ ಬಗ್ಗೆ ಸ್ವಲ್ಪವೂ ಜ್ಞಾನವಿಲ್ಲ'' ಎಂದು ಅವರು ಹೇಳಿದ್ದರು.
ಇದನ್ನೂ ಓದಿ:ಹೋಮ್ ಥಿಯೇಟರ್ ಸ್ಫೋಟ.. ನವವಿವಾಹಿತ ಸಾವು - ಆರು ಜನರಿಗೆ ಗಾಯ