ಕರ್ನಾಟಕ

karnataka

ETV Bharat / bharat

ಸರ್ಕಾರಗಳಿಗೆ ಮಾತ್ರ ಲಸಿಕೆ ಪೂರೈಸಿ, ಖಾಸಗಿ ಆಸ್ಪತ್ರೆಗಳಿಗಲ್ಲ: ಆಂಧ್ರ ಸಿಎಂ

ಅಗತ್ಯ ಪ್ರಮಾಣದಲ್ಲಿ ವ್ಯಾಕ್ಸಿನ್ ಪೂರೈಕೆಯಾಗದೇ​ 45ಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಲಸಿಕೆ ನೀಡಲು ಆಗದ ಪರಿಸ್ಥಿತಿ ಇದೆ. ಮುಂದಿನ ಕೆಲವು ತಿಂಗಳುಗಳವರೆಗೆ 18-44 ವರ್ಷದವರಿಗೆ ಉಚಿತ ವ್ಯಾಕ್ಸಿನೇಷನ್ ಕೈಗೊಳ್ಳುವ ಸಾಧ್ಯತೆ ಸಹ ಇಲ್ಲ. ಇಂಥ ಸಂದರ್ಭದಲ್ಲಿ ಖಾಸಗಿಯವರಿಗೆ ಅನುಮತಿಸುವುದು ಬಹಳ ಅಸಮಂಜಸ..

By

Published : May 22, 2021, 8:27 PM IST

jagan
jagan

ಅಮರಾವತಿ :ಕೋವಿಡ್-19 ಲಸಿಕೆಗಳ ಸಂಪೂರ್ಣ ದಾಸ್ತಾನು ಕೇಂದ್ರ ಮತ್ತು ರಾಜ್ಯಗಳಿಗೆ ಮಾತ್ರ ಲಭ್ಯವಾಗುವಂತೆ ನೋಡಿಕೊಳ್ಳಿ.

ಖಾಸಗಿ ಆಸ್ಪತ್ರೆಗಳಿಗೆ ನೀಡಬೇಡಿ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಸಾಂಕ್ರಾಮಿಕ ರೋಗದ ಹಿನ್ನೆಲೆ ದೇಶಾದ್ಯಂತ ಜನ ಸಂಕಷ್ಟಕ್ಕೆ ಸಿಲುಕಿರುವ ಸಮಯದಲ್ಲಿ ಕೊರೊನಾ ಲಸಿಕೆಗಳನ್ನು ನಾಗರಿಕರಿಗೆ ಉಚಿತವಾಗಿ ಅಥವಾ ಕೈಗೆಟುಕುವ ದರದಲ್ಲಿ ನೀಡಬೇಕು ಎಂದು ಜಗನ್ ಮೋಹನ್ ರೆಡ್ಡಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇತ್ತೀಚೆಗೆ, ಭಾರತ ಸರ್ಕಾರವು ಪ್ರಕಟಿಸಿದ ಉದಾರೀಕೃತ ನೀತಿಯ ಪ್ರಕಾರ, ವ್ಯಾಕ್ಸಿನೇಷನ್ ಸೇವೆಗಳನ್ನು ಒದಗಿಸಲು ಸಿದ್ಧವಿರುವ ಖಾಸಗಿ ಆಸ್ಪತ್ರೆಗಳು ಲಸಿಕೆ ಪ್ರಮಾಣವನ್ನು ನೇರವಾಗಿ ಉತ್ಪಾದಕರಿಂದ ಪಡೆದುಕೊಳ್ಳಬಹುದು ಎಂದಿದೆ.

ಖಾಸಗಿ ಆಸ್ಪತ್ರೆಗಳಿಗೆ ನೇರವಾಗಿ ಲಸಿಕೆಗಳನ್ನು ಖರೀದಿಸಲು ಅವಕಾಶ ನೀಡುವ ಕೇಂದ್ರದ ನೀತಿ ನಿರ್ಧಾರವು ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಅಗತ್ಯ ಪ್ರಮಾಣದಲ್ಲಿ ವ್ಯಾಕ್ಸಿನ್ ಪೂರೈಕೆಯಾಗದೇ​ 45ಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಲಸಿಕೆ ನೀಡಲು ಆಗದ ಪರಿಸ್ಥಿತಿ ಇದೆ. ಮುಂದಿನ ಕೆಲವು ತಿಂಗಳುಗಳವರೆಗೆ 18-44 ವರ್ಷದವರಿಗೆ ಉಚಿತ ವ್ಯಾಕ್ಸಿನೇಷನ್ ಕೈಗೊಳ್ಳುವ ಸಾಧ್ಯತೆ ಸಹ ಇಲ್ಲ. ಇಂಥ ಸಂದರ್ಭದಲ್ಲಿ ಖಾಸಗಿಯವರಿಗೆ ಅನುಮತಿಸುವುದು ಬಹಳ ಅಸಮಂಜಸವೆಂದು ತೋರುತ್ತದೆ.

ಈ ಆಸ್ಪತ್ರೆಗಳು ಎಲ್ಲಾ ವಯಸ್ಸಿನ ಜನರಿಗೆ ಹೆಚ್ಚಿನ ದರದಲ್ಲಿ ಲಸಿಕೆ ನೀಡಲು ಮುಂದಾಗುವುದರಿಂದ ಇದು ಹೆಚ್ಚಿನ ವೆಚ್ಚ ಭರಿಸಲಾಗದ ಸಮಾಜದ ಬಡ ವರ್ಗಗಳಿಗೆ ಅನಾನುಕೂಲವಾಗಿದೆ. ಜೊತೆಗೆ ಇದು ಲಸಿಕೆಯ ಕಾಳಸಂತೆ ಮಾರಾಟಕ್ಕೂ ಕಾರಣವಾಗುತ್ತದೆ ಎಂದು ಆಂಧ್ರ ಸಿಎಂ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details