ಕರ್ನಾಟಕ

karnataka

ಹೆಚ್ಚುತ್ತಿರುವ ಕೋವಿಡ್​ ಮಧ್ಯೆ ದೆಹಲಿಯಲ್ಲಿ 100ಕ್ಕೂ ಕಡಿಮೆ ಐಸಿಯು ಬೆಡ್ : ಸಿಎಂ ಕೇಜ್ರಿವಾಲ್ ಆತಂಕ

By

Published : Apr 18, 2021, 4:05 PM IST

ಮುಂಬರುವ ದಿನಗಳಲ್ಲಿ ದೆಹಲಿ ಸರ್ಕಾರ 6 ಸಾವಿರ ಅಧಿಕ ಆ್ಯಕ್ಸಿಜನ್ ಪೂರೈಕೆಯ ಬೆಡ್‌ಗಳನ್ನು ಒದಗಿಸಲು ಕ್ರಮ ಕೈಗೊಂಡಿದೆ. ಪರಿಸ್ಥಿತಿಗೆ ತಕ್ಕಂತೆ ಮುಂದಿನ ದಿನಗಳಲ್ಲಿ ಯಮುನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ರಾಧಾ ಸ್ವಾಮಿ ಸತ್ಸಂಗ ಆವರಣ ಕೆಲ ಶಾಲೆಗಳನ್ನು ಕೋವಿಡ್ ಕೇರ್​ ಸೆಂಟರ್​ಗಳಾಗಿ ಮಾರ್ಪಡಿಸಲಾಗುವುದು..

Less than 100 ICU beds left
ಸಿಎಂ ಕೇಜ್ರಿವಾಲ್ ಆತಂಕ

ನವದೆಹಲಿ :ರಾಷ್ಟ್ರ ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಕೊರೊನಾ ಸೋಂಕಿತರಿಗಾಗಿ ಬೆಡ್ ಹಾಗೂ ಆ್ಯಕ್ಸಿಜನ್ ಅಭಾವ ಕೂಡ ಎದುರಾಗಿದೆ. ನಿನ್ನೆ ಸಂಜೆ ಬರೋಬ್ಬರಿ 24,000 ಹೊಸ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿವೆ. ಈ ಮಧ್ಯೆ ದೆಹಲಿಯ ಆಸ್ಪತ್ರೆಗಳಲ್ಲಿ ಬೆಡ್​ಗಳು ಮತ್ತು ಆ್ಯಕ್ಸಿಜನ್ ಪೂರೈಕೆ ಕೊರತೆ ತೀವ್ರವಾಗಿದೆ.

ದೆಹಲಿಯಲ್ಲಿ 100ಕ್ಕೂ ಕಡಿಮೆ ಐಸಿಯು ಬೆಡ್ :ಈ ಸಂಬಂಧ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕಳೆದ 24 ಗಂಟೆಗಳಲ್ಲಿ ಕೊರೊನಾ ಪಾಸಿಟಿವ್​ ಪ್ರಮಾಣ ಶೇ.30ಕ್ಕೆ ಏರಿದೆ.

ಕೇವಲ ಒಂದೇ ದಿನದಲ್ಲಿ ದೆಹಲಿಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಶೇ.24ರಿಂದ ಶೇ.30ಕ್ಕೆ ಏರಿಕೆಯಾಗಿದೆ. ರೋಗಿಗಳು ಹೆಚ್ಚಾಗುತ್ತಿರುವ ಕಾರಣ ಹಾಸಿಗೆಗಳು ಸಹ ಭರ್ತಿಯಾಗುತ್ತಿವೆ. ಪ್ರಸ್ತುತ ದೆಹಲಿಯಲ್ಲಿ 100ಕ್ಕೂ ಕಡಿಮೆ ಐಸಿಯು ಬೆಡ್​ಗಳು ಲಭ್ಯವಿರುವುದು ಆತಂಕ ಮೂಡಿಸಿದೆ. ಇದರ ಜತೆ ಆ್ಯಕ್ಸಿಜನ್ ಕೊರತೆ ಕೂಡ ಎದುರಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಕೊರೊನಾ ಪರಿಣಾಮ: ಜೆಇಇ (ಮುಖ್ಯ‌) ಪರೀಕ್ಷೆ ಮುಂದೂಡಿಕೆ

ಕೇಂದ್ರ ಸರ್ಕಾರದ ನೆರವು ಕೋರಿದ ದೆಹಲಿ ಸಿಎಂ :ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಬಳಿ ಮಾತನಾಡಿರುವೆ. ನಾವು ಕೇಂದ್ರ ಸರ್ಕಾರದ ನೆರವು ಕೇಳಿದ್ದೇವೆ. ಅಗತ್ಯ ನೆರವು ಸಿಗುತ್ತಿದೆ. ದೆಹಲಿಯಲ್ಲಿ ಕೇಂದ್ರ ಸರ್ಕಾರ ಒಟ್ಟು 10,000 ಹಾಸಿಗೆಗಳನ್ನು ಹೊಂದಿದೆ.

ಆದರೆ, ಅದರಲ್ಲಿ ಕೇವಲ 1,800 ಹಾಸಿಗೆಗಳು ಮಾತ್ರ ಕೊರೊನಾ ರೋಗಿಗಳಿಗೆ ಮೀಸಲಿವೆ. ಆದ್ದರಿಂದ ಕನಿಷ್ಟ 7,000 ಬೆಡ್​ಗಳನ್ನ ಕೋವಿಡ್​ ಚಿಕಿತ್ಸೆಗೆ ಮೀಸಲಿಡಬೇಕೆಂದು ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ಆ್ಯಕ್ಸಿಜನ್ ಪೂರೈಕೆ ಕುಂಠಿತ :ಆಸ್ಪತ್ರೆಗಳಲ್ಲಿ ಬೆಡ್​ಗಳು ಬಹಳ ಬೇಗನೆ ಭರ್ತಿಯಾಗುತ್ತಿವೆ. ಐಸಿಯು ಬೆಡ್​ಗಳಿಗೆ ಕೊರತೆಯಿದೆ. ಆ್ಯಕ್ಸಿಜನ್ ಪೂರೈಕೆ ಕೂಡ ಕುಂಠಿತವಾಗುತ್ತಿದೆ ಎಂದರು.

ಇದನ್ನೂ ಓದಿ :ಭೋಪಾಲ್​ನ ಆಸ್ಪತ್ರೆಯಿಂದ 800 ರೆಮ್​​ಡೆಸಿವಿರ್ ಚುಚ್ಚುಮದ್ದು ಕಳವು

ಶಾಲೆಗಳನ್ನು ಕೋವಿಡ್ ಕೇರ್​ ಸೆಂಟರ್ ಆಗಿ ಮಾರ್ಪಾಡು :ಮುಂಬರುವ ದಿನಗಳಲ್ಲಿ ದೆಹಲಿ ಸರ್ಕಾರ 6 ಸಾವಿರ ಅಧಿಕ ಆ್ಯಕ್ಸಿಜನ್ ಪೂರೈಕೆಯ ಬೆಡ್‌ಗಳನ್ನು ಒದಗಿಸಲು ಕ್ರಮ ಕೈಗೊಂಡಿದೆ. ಪರಿಸ್ಥಿತಿಗೆ ತಕ್ಕಂತೆ ಮುಂದಿನ ದಿನಗಳಲ್ಲಿ ಯಮುನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ರಾಧಾ ಸ್ವಾಮಿ ಸತ್ಸಂಗ ಆವರಣ ಕೆಲ ಶಾಲೆಗಳನ್ನು ಕೋವಿಡ್ ಕೇರ್​ ಸೆಂಟರ್​ಗಳಾಗಿ ಮಾರ್ಪಡಿಸಲಾಗುವುದು ಎಂದು ಮಾಹಿತಿ ನೀಡಿದರು.

ABOUT THE AUTHOR

...view details