ಚಿರತೆಗಳು ಮಿಂಚಿನಂತೆ ಓಡಬಲ್ಲವು. ಚಂಗನೆ ಹಾರಿ ತನ್ನ ಬಲಿ ಪಡೆಯುವುದನ್ನು ನೋಡಿದರೆ ಮೈ ಜುಮ್ಮೆನ್ನುವ ಅನುಭವವಾಗುತ್ತದೆ. ಇಲ್ಲೊಂದು ವಿಡಿಯೋ ವೈರಲ್ ಆಗಿದೆ. ಇದನ್ನು ನೀವು ನೋಡಲೇಬೇಕು.
ನಾವು ಸಾಮಾನ್ಯವಾಗಿ ಚಿರತೆ ಮರ ಹತ್ತುವುದನ್ನು ನೋಡಿದ್ದೇವೆ. ಅದು ಚಿರತೆಗಳಿಗಿರುವ ವಿಶೇಷ ಗುಣವೂ ಹೌದು. ಹಾಗಂತ ಅವುಗಳು ತೆಂಗಿನ ಮರ ಹತ್ತುವುದನ್ನು ನೀವು ಎಂದಾದರೂ ನೋಡಿದ್ದೀರಾ? ಬಹುಶ: ಇಲ್ಲ. ಇನ್ನು ಅವುಗಳ ಓಟವೂ ಹಾಗೆಯೇ. ಗುರಿಯತ್ತ ಮಿಂಚಿನಂತೆ ಸಾಗಿ ತನ್ನ ಆಹಾರವನ್ನು ಪಡೆದು ಭಂಜಿಸಬಲ್ಲದು. ಇನ್ನು ಕೋಪದ ವಿಚಾರ ಕೇಳಬೇಕೆ? ತನ್ನ ಎದುರಾಳಿ ತನ್ನದೇ ವರ್ಗಕ್ಕೆ ಸೇರಿದರೂ, ತನ್ನಷ್ಟೇ ಬಲಶಾಲಿಯಾಗಿದ್ದರೂ ಪಟ್ಟು ಹಿಡಿದು ಕಾಡದೆ ಬಿಡದು. ಇದಕ್ಕೆ ಸ್ಪಷ್ಟ ನಿದರ್ಶನ ಈ ವಿಡಿಯೋ.
ಒಂದು ಚಿರತೆ ತೆಂಗಿನ ಮರ ಹತ್ತಿ ತುದಿ ತಲುಪಿದೆ. ಮೊದಲು ವಿಡಿಯೋ ನೋಡಿದಾಗ ಯಾವುದೇ ಮಂಗ ಮರ ಹತ್ತಿ ಎಳನೀರು ಕೀಳುತ್ತಿದೆಯೇನೋ ಎಂಬಂತೆ ಭಾಸವಾಗುತ್ತದೆ. ಆದ್ರೆ ನಿಧಾನಕ್ಕೆ ಅದು ಮಂಗ ಅಲ್ಲ ಚಿರತೆ ಎಂದು ಗೊತ್ತಾಗುತ್ತದೆ. ತನ್ನ ಶಕ್ತಿಶಾಲಿ ಕೈ ಕಾಲುಗಳು, ದಷ್ಟ-ಪುಷ್ಟ ದೇಹ ಹೊತ್ತು ನಿಧಾನಕ್ಕೆ ತೆಂಗಿನ ಮರದಿಂದ ಕೆಳಗಿಳಿಯುತ್ತದೆ. ಇನ್ನೇನು ಇಳಿದೇ ಬಿಟ್ಟಿತು ಎನ್ನುವಷ್ಟವರಲ್ಲಿ ಸ್ಟೋರಿಯಲ್ಲಿ ಕ್ರೈಮಾಕ್ಸ್! ಹೌದು, ಇನ್ನೊಂದು ಚಿರತೆ ಮರದ ಬುಡದಲ್ಲೇ ಕಾಯುತ್ತಿತ್ತು. ಇದನ್ನು ಕಂಡು ತೆಂಗಿನ ಮರದಿಂದ ಇಳಿಯುತ್ತಿದ್ದ ಚಿರತೆ ಶರವೇಗದಲ್ಲಿ ಮತ್ತೆ ಮರ ಹತ್ತುತ್ತದೆ. ಎರಡೂ ಚಿರತೆಗಳು ಮಿಂಚಿನಂತೆ ತೆಂಗಿನ ಮರ ಹತ್ತುವ ದೃಶ್ಯವಂತೂ ಮೈ ನವಿರೇಳಿಸುವಂತಿದೆ. ನಂತರ ತೆಂಗಿನ ಮರದ ತುದಿಯಲ್ಲಿ ಕೆಲಕಾಲ ಭಯಾನಕ ಕಾಳಗ ನಡೆದು ಒಂದು ಚಿರತೆ ಕೆಳಗಿಳಿದು ಓಡಿ ಹೋಗುತ್ತದೆ.
ಇದನ್ನು ಅತ್ಯಂತ ಕುತೂಹಲದ ಕಣ್ಣುಗಳಿಂದಲೇ ನೋಡುತ್ತಾ, ಸಮೀಪದಲ್ಲಿದ್ದ ಯುವಕರು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಅವರ ಮಾತುಗಳನ್ನೂ ನೀವು ವಿಡಿಯೋದಲ್ಲಿ ಕೇಳಬಹುದು.
ವಿಡಿಯೋ ಎಲ್ಲಿಯದ್ದು?:ಸಾಮಾಜಿಕ ಜಾಲತಾಣಗಳ ಮಾಹಿತಿಯಂತೆ, ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯಲ್ಲಿ ಕಂಡುಬಂದಿದೆ. ಆದ್ರೆ, ಈ ಮಾಹಿತಿ ನಿಖರವಾಗಿಲ್ಲ. ಈ ವಿಡಿಯೋ ತುಣುಕನ್ನು ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.