ಚಂದ್ರಪುರ:ಆತಂಕಕಾರಿ ಘಟನೆಯಿಂದ ಮಹಾರಾಷ್ಟ್ರದ ಜನರು ಬೆಚ್ಚಿಬಿದ್ದಿದ್ದಾರೆ. ಚಂದ್ರಪುರ ಜಿಲ್ಲೆಯ ಸೊಯಾಲಿ ವ್ಯಾಪ್ತಿಯಲ್ಲಿ ಚಿರತೆಯೊಂದು 61 ವರ್ಷದ ವೃದ್ಧೆ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ. ಇದು ಜನರ ನಿದ್ದೆಗೆಡಿಸಿದೆ.
ಮನೆ ಹೊರಗೆ ಮಲಗಿದ್ದ ವೃದ್ಧೆ ಕೊಂದುಹಾಕಿತು ಚಿರತೆ!
ಮನೆಯ ಹೊರ ಭಾಗದಲ್ಲಿ ಮಲಗಿದ್ದ ವೃದ್ಧೆಯ ಮೇಲೆ ಈ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ. ಈ ಘಟನೆ ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯ ಸೊಯಾಲಿ ತಹಶೀಲ್ನಲ್ಲಿ ನಡೆದಿದೆ.
ಪ್ರಾಣ ಕಿತ್ತ ಚಿರತೆ
ಸೋಮವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಗಂಗೂಬಾಯಿ ಗೆದಮ್ ಎಂಬುವರು ಮೃತಪಟ್ಟಿದ್ದಾರೆ. ವಯ್ಹಾದ್ ಎಂಬ ಹಳ್ಳಿಯಲ್ಲಿ ಮನೆಯ ಹೊರ ಭಾಗದಲ್ಲಿ ಮಲಗಿದ್ದ ವೃದ್ಧೆಯ ಮೇಲೆ ಈ ಚಿರತೆ ದಾಳಿ ಮಾಡಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆಯಿಂದ ಇಲ್ಲಿನ ಜನ ಭಯಭೀತರಾಗಿದ್ದು, ಚಿರತೆಯನ್ನು ಸೆರೆಹಿಡಿಯುವಂತೆ ಅಧಿಕಾರಿಗಳಲ್ಲಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.