ವೆಲ್ಲೂರು(ಆಂಧ್ರಪ್ರದೇಶ):ಬೇಸಿಗೆಯಾಗಿದ್ದರಿಂದ ಕುಟುಂಬವೊಂದು ಬಾಗಿಲು ತೆರೆದಿಟ್ಟು ನಿದ್ರೆಗೆ ಜಾರಿದ್ದು, ಈ ವೇಳೆ ಮನೆಯೊಳಗೆ ನುಗ್ಗಿರುವ ಚಿರತೆಯೊಂದು ದಾಳಿ ನಡೆಸಿರುವ ಘಟನೆ ನಡೆದಿದೆ.
ಮನೆಯೊಳಗೆ ನುಗ್ಗಿ ದಾಳಿ ನಡೆಸಿದ ಚಿರತೆ ಆಂಧ್ರಪ್ರದೇಶದ ವೆಲ್ಲೂರಿನ ಎರ್ಥಂಗಲ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವೆಲಾಯುಥಂ(40) ಪತ್ನಿ ಪ್ರೇಮಾ(38), ಮಕ್ಕಳಾದ ಮಹಾಲಕ್ಷ್ಮೀ(17) ಹಾಗೂ ಮನೋಹರ್(20) ಮೇಲೆ ದಾಳಿ ನಡೆಸಿದೆ. ಮಧ್ಯರಾತ್ರಿ ನಾಯಿಗಳು ಮನೆ ಹೊರಗೆ ಬೊಗಳುತ್ತಿದ್ದರಿಂದ ಏನಾಯಿತು ಎಂದು ನೋಡಲು ಪ್ರೇಮಾ ಹೊರಗಡೆ ಬಂದಿದ್ದಾಳೆ. ಈ ವೇಳೆ, ಚಿರತೆ ದಾಳಿ ನಡೆಸಿ, ಮನೆಯೊಳಗೆ ನುಗ್ಗಿದೆ. ಈ ವೇಳೆ ವೇಲಾಯುಥಂ, ಮಗ ಮನೋಹರ್ ಹಾಗೂ ಮಗಳು ಮಹಾಲಕ್ಷ್ಮಿ ಮೇಲೂ ದಾಳಿ ನಡೆಸಿದೆ. ಆದರೆ ಮನೆಯೊಳಗೆ ಚಿರತೆ ಲಾಕ್ ಮಾಡಿ ಹೊರಗೆ ಬರುವಲ್ಲಿ ಅವರು ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ತಿರುಪತಿ ಲೋಕಸಭೆ ಉಪಕದನ: ಕ್ಷೇತ್ರ ಉಳಿಸಿಕೊಳ್ಳಲು ವೈಎಸ್ಆರ್ಪಿ ತಂತ್ರ, ಬಿಜೆಪಿಯಿಂದ ಟಫ್ ಫೈಟ್..!
ಚಿರತೆ ಮನೆಯೊಳಗೆ ನುಗ್ಗಿದ್ದರಿಂದ ಕಿರುಚಾಟ ನಡೆಸಿದ್ದು, ನೆರೆಯ ಮನೆಯವರು ಸ್ಥಳಕ್ಕಾಗಮಿಸಿ ಗಾಯಗೊಂಡಿದ್ದ ಎಲ್ಲರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಜತೆಗೆ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಚಿರತೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಸುರಕ್ಷಿತವಾಗಿ ತಮಿಳುನಾಡು - ಆಂಧ್ರಪ್ರದೇಶ ಅಭಯಾರಣ್ಯದಲ್ಲಿ ಬಿಟ್ಟು ಬಂದಿದ್ದಾರೆ. ಆಂಧ್ರಪ್ರದೇಶದಲ್ಲಿ ನಿನ್ನೆ ರಾತ್ರಿ ಭಾರಿ ಮಳೆಯಾಗಿದ್ದರಿಂದ ಚಿರತೆ ಹಳ್ಳಿಯೊಳಗೆ ಪ್ರವೇಶ ಪಡೆದಿರಬಹುದು ಎಂದು ಅರಣ್ಯ ಇಲಾಖೆ ಶಂಕೆ ವ್ಯಕ್ತಪಡಿಸಿದೆ.
ಪೊಲೀಸರ ಸೆರೆಗೆ ಬಿದ್ದ ಚಿರತೆ