ನವದೆಹಲಿ:2019ರಲ್ಲಿ ನಡೆದ ಪುಲ್ವಾಮಾ ದಾಳಿಯ ನಂತರ ಅಂತಾರಾಷ್ಟ್ರೀಯ ಒತ್ತಡದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಜೈಷ್-ಇ-ಮೊಹಮ್ಮದ್ ಸಂಘಟನೆಯು ಲಷ್ಕರ್-ಇ-ಮುಸ್ತಾಫಾ ಹೆಸರಿನಲ್ಲಿ ಹೊಸ ಸಂಘಟನೆಯೊಂದನ್ನು 2020ರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟುಹಾಕಿದ ನಂತರ ಹೊಸ ಹೊಸ ಬೆಳವಣಿಗೆಗಳು ನಡೆದಿವೆ.
ಲಷ್ಕರ್-ಇ-ಮುಸ್ತಾಫಾ ಸಂಘಟನೆಯ ಭಾರತೀಯ ಮುಖ್ಯಸ್ಥನನ್ನಾಗಿ ಹಿದಾಯತ್ ಮಲಿಕ್ ಅಲಿಯಾಸ್ ಹಸ್ನೈನ್ ಎಂಬಾತನನ್ನು ನೇಮಿಸಿದ್ದು, ಆತ ಪಾಕಿಸ್ತಾನದ ಮೊಬೈಲ್ ನಂಬರ್ಗಳ ಮೂಲಕ ಪಾಕ್ನ ಜೈಷ್-ಇ-ಮೊಹಮ್ಮದ್ ಮುಖ್ಯಸ್ಥರೊಂದಿಗೆ ಸಂಪರ್ಕದಲ್ಲಿದ್ದಾನೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಮೋಸ್ಟ್ ವಾಟೆಂಡ್ ಭಯೋತ್ಪಾದಕನಾದ ಮೌಲಾನಾ ಮಸೂದ್ ಅಜರ್ನ ಸಹೋದರ ಮುಫ್ತಿ (ಅಬ್ದುಲ್) ರೌಫ್ (ಅಸ್ಘರ್) ಜೊತೆಗೆ ಕೂಡಾ ಹಿದಾಯತ್ ಮಲಿಕ್ ಅಲಿಯಾಸ್ ಹಸ್ನೈ ನಿರಂತರ ಸಂಪರ್ಕದಲ್ಲಿದ್ದಾನೆ ಎಂದ ತಿಳಿದುಬಂದಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆಗಸ್ಟ್ 4ರಂದು ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಲಷ್ಕರ್ -ಇ- ಮುಸ್ತಾಫಾದ ಹಿದಾಯತ್ ಮಲಿಕ್ ಸೇರಿ ಆರು ಭಯೋತ್ಪಾದಕರ ಹೆಸರನ್ನು ಜಮ್ಮುವಿನ ವಿಶೇಷ ಎನ್‌ಐಎ ನ್ಯಾಯಾಲಯದ ಮುಂದೆ ಬಹಿರಂಗಪಡಿಸಿದೆ.
ಈ ಚಾರ್ಜ್‌ಶೀಟ್‌ನಲ್ಲಿ 'ಜೈಷ್-ಇ-ಮೊಹಮದ್ ಸಂಘಟನೆಯ ಕಮಾಂಡರ್ಗಳು ಲಷ್ಕರ್ -ಇ- ಮುಸ್ತಾಫಾ ಮುಖ್ಯಸ್ಥ ಹಿದಾಯತ್ ಮಲಿಕ್ಗೆ ಜಮ್ಮು ಪ್ರದೇಶ ಸೇರಿದಂತೆ ಜಮ್ಮು ಕಾಶ್ಮೀರ ಭಾಗದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವಂತೆ ನಿರ್ದೇಶನ ನೀಡಲಾಗಿದೆ. ಈ ಅವಧಿಯಲ್ಲಿ ಹಿದಾಯತ್ ಮಲಿಕ್ ಪಾಕಿಸ್ತಾನಿ ಮೊಬೈಲ್ ನಂಬರ್ ಮೂಲಕ ಡಾಕ್ಟರ್ ಎಂದು ಕರೆಸಿಕೊಳ್ಳುತ್ತಿದ್ದ ಅಬು ತಲ್ಹಾನೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಎಂದು ತಿಳಿದುಬಂದಿದೆ.
ಅಬು ತಲ್ಹಾ (92309 10XXX), ಮೌಲಾನಾ ಮಸೂದ್ ಅಜರ್ನ ಸಹೋದರ ಮುಫ್ತಿ ರೌಫ್ (+92336648XXXX), ಜೈಷ್-ಇ-ಮೊಹಮದ್ ಮುಖ್ಯಸ್ಥ ಅಶಾಖ್ ಅಹ್ಮದ್ ನೆಂಗ್ರೂ (+92355809XXXX ಮತ್ತು +92355141XXXX) ಅವರೊಂದಿಗೆ ವಾಟ್ಸಪ್ ಮೂಲಕ ಸಂಪರ್ಕದಲ್ಲಿದ್ದ ಎಂದು ತಿಳಿದುಬಂದಿದೆ.
ಅಜರ್, ಆತನ ಸಹೋದರರು ಮತ್ತು ನೆಂಗ್ರೂನನ್ನು ಈ ಹಿಂದೆ ಪುಲ್ವಾಮಾ ಭಯೋತ್ಪಾದಕ ದಾಳಿ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಎನ್ಐಎ ಹೆಸರಿಸಿದ್ದು, ಈ ಭಯೋತ್ಪಾದಕರು ಜೈಷ್ ಇ ಮೊಹಮದ್ನ ಪಾಕಿಸ್ತಾನದ ಹ್ಯಾಂಡ್ಲರ್ಗಳೊಂದಿಗೆ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ. ಈಗಲೂ ಕೂಡಾ ಲಷ್ಕರ್ -ಇ- ಮುಸ್ತಾಫಾದ ಭಯೋತ್ಪಾದಕರು ಜೈಷ್-ಇ-ಮೊಹಮದ್ನೊಂದಿಗೆ ಸಂಪರ್ಕದಲ್ಲಿದ್ದಾರೆ.
ಇದನ್ನೂ ಓದಿ:COVID Vaccine ಮಿಶ್ರಣದಿಂದ ಉತ್ತಮ ಫಲಿತಾಂಶ: ICMR