ನವದೆಹಲಿ:ಮಧ್ಯಪ್ರದೇಶ, ಮದ್ರಾಸ್, ಒಡಿಶಾ ಮತ್ತು ಆಂಧ್ರಪ್ರದೇಶದ ಹೈಕೋರ್ಟ್ಗಳಿಗೆ 17 ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ರಾಷ್ಟ್ರಪತಿಗಳು ಆದೇಶ ಹೊರಡಿಸಿದ್ದಾರೆ. ಅಲ್ಲದೇ, ಮದ್ರಾಸ್ ಹೈಕೋರ್ಟ್ ಹಂಗಾಮಿ ನ್ಯಾಯಮೂರ್ತಿಗಳಾಗಿದ್ದ ಮುನೀಶ್ವರ್ ನಾಥ್ ಭಂಡಾರಿ ಅವರನ್ನು ಮುಖ್ಯ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲಾಗಿದೆ.
ವಿಧಾನ ಪರಿಷತ್ ರಚನೆಗೆ ಅಸ್ತು
ಇನ್ನು ಅಸ್ಸಾಂ, ರಾಜಸ್ತಾನ, ಪಶ್ಚಿಮಬಂಗಾಳ ವಿಧಾನಸಭೆಗಳು, ಹೊಸದಾಗಿ ವಿಧಾನ ಪರಿಷತ್ ರಚನೆಗೆ ನಿರ್ಣಯ ಅಂಗೀಕರಿಸಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಹಿಂದೆ ಈ ರಾಜ್ಯಗಳ ವಿಧಾನ ಪರಿಷತ್ ರಚನೆಗೆ ವಿಧಾನಸಭೆಯಲ್ಲಿ ಶಾಸಕಾಂಗದ ಅಂಗೀಕಾರ ಪಡೆದುಕೊಳ್ಳಲಾಗಿತ್ತು. ಇದೀಗ ಕೇಂದ್ರ ಕಾನೂನು ಇಲಾಖೆ ಇದಕ್ಕೆ ಅನುಮತಿ ನೀಡಿದೆ.
ಓದಿ:ಪ್ರಧಾನಿ ಮೋದಿ ಒತ್ತಡ ತಂತ್ರಗಳಿಗೆ ನಾನು ಬಗ್ಗಲ್ಲ: ರಾಹುಲ್ ಗಾಂಧಿ ಖಡಕ್ ಉತ್ತರ