ಮುಂಬೈ: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ಕೊರೊನಾ ಪಾಸಿಟಿವ್ ತಗುಲಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಐಸಿಯುಗೆ ದಾಖಲಿಸಲಾಗಿದೆ.
ಖ್ಯಾತ ಗಾಯಕಿ ಲತಾ ಮಂಗೇಶ್ಕರ್ಗೆ ಕೊರೊನಾ; ಐಸಿಯುಗೆ ದಾಖಲು - ಐಸಿಯುಗೆ ದಾಖಲಾದ ಲತಾ ಮಂಗೇಶ್ಕರ್
ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿರುವ ಹಿನ್ನೆಲೆ ಹಾಗೂ ವಯಸ್ಸಿನ ಆಧಾರದ ಮೇಲೆ ಅವರನ್ನು ಮುಂಬೈನ ಬೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಖ್ಯಾತ ಗಾಯಕಿ ಲತಾ ಮಂಗೇಶ್ಕರ್ಗೆ ಕೊರೊನಾ
ಅವರು ಚೆನ್ನಾಗಿಯೇ ಇದ್ದಾರೆ. ಅವರ ವಯಸ್ಸನ್ನು ಪರಿಗಣಿಸಿ ಮುನ್ನೆಚ್ಚರಿಕೆ ಕಾರಣಗಳಿಗಾಗಿ ಮಾತ್ರ ಐಸಿಯುನಲ್ಲಿ ಇರಿಸಲಾಗಿದೆ. ದಯವಿಟ್ಟು ನಮ್ಮ ಗೌಪ್ಯತೆಯನ್ನು ಗೌರವಿಸಿ ಮತ್ತು ನಿಮ್ಮ ಪ್ರಾರ್ಥನೆಯಲ್ಲಿ ದೀದಿಯನ್ನು ಇರಿಸಿಕೊಳ್ಳಿ ಎಂದು ಗಾಯಕಿ ಲತಾ ಮಂಗೇಶ್ಕರ್ ಅವರ ಸೊಸೆ ರಚನಾ ಮನವಿ ಮಾಡಿದ್ದಾರೆ.
ಪ್ರಸಿದ್ಧ ಗಾಯಕಿಗೆ ಮುಂಬೈನ ಪ್ರತಿಷ್ಠಿತ ಬೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.