ಕೋಲ್ಕತ್ತಾ: ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ದೇಶಾದ್ಯಂತ ರೈತರು ಸಿಡಿದೆದ್ದಿದ್ದಾರೆ. ಪಶ್ಚಿಮ ಬಂಗಾಳದಲ್ಲೂ ಪ್ರತಿಭಟನೆ ಜೋರಾಗಿದ್ದು, ಎಡ ಸಂಘಟನೆಗಳು ಧರಣಿ ನಡೆಸಿವೆ.
ಇಲ್ಲಿನ ಬಲ್ಗೇರಿಯಾ ರೈಲು ನಿಲ್ದಾಣದಲ್ಲಿ ಲೆಫ್ಟ್ ಟ್ರೇಡ್ ಯೂನಿಯನ್ (ಎಡ ಕಾರ್ಮಿಕರ ಸಂಘ) ರೈಲು ತಡೆದು ಪ್ರತಿಭಟನೆ ನಡೆಸಿದ್ದಾರೆ. ನೂತನ ಕಾರ್ಮಿಕ ಮಸೂದೆ ಹಾಗೂ ಕೃಷಿ ಮಸೂದೆಗಳ ವಾಪಸ್ ಪಡೆಯುವಂತೆ ಆಗ್ರಹಿಸಿ ಪ್ರತಿಭಟಿಸಿದ್ದಾರೆ.