ನವದೆಹಲಿ: ದೇಶದಲ್ಲಿಯೇ ಜಮ್ಮು ಮತ್ತು ಕಾಶ್ಮೀರಲ್ಲಿ ಅತ್ಯಂತ ಕಡಿಮೆ ಬಾಲ್ಯ ವಿವಾಹಗಳು ನಡೆದಿವೆ ಎಂದು ನ್ಯಾಶನಲ್ ಫ್ಯಾಮಿಲಿ ಹೆಲ್ತ್‌ನ ಹೊಸ ಸಮೀಕ್ಷೆಯಿಂದ ತಿಳಿದು ಬಂದಿದೆ. ಕಡಿಮೆ ಬಾಲ್ಯ ವಿವಾಹ ಪ್ರಕರಣಗಳನ್ನು ವರದಿ ಮಾಡಿದ ಇತರ ರಾಜ್ಯಗಳೆಂದರೆ ಹಿಮಾಚಲ ಪ್ರದೇಶ, ಗೋವಾ ಮತ್ತು ನಾಗಾಲ್ಯಾಂಡ್ ಶೇ.7 ರಷ್ಟು ಮತ್ತು ಕೇರಳ ಹಾಗೂ ಪುದುಚೇರಿಯಲ್ಲಿ ಶೇ. 8 ರಷ್ಟಿದೆ.
ಸಮೀಕ್ಷಾ ವರದಿಯ ಪ್ರಕಾರ, ದೇಶದಲ್ಲಿ ಶೇ.6ರಷ್ಟು ಹುಡುಗಿಯರು 18 ವರ್ಷಕ್ಕಿಂತ ಮುಂಚೆಯೇ ವಿವಾಹವಾಗಿದ್ದಾರೆ. ಆಂಧ್ರಪ್ರದೇಶದಲ್ಲಿ ಶೇ 33, ಅಸ್ಸೋಂನಲ್ಲಿ ಶೇ 32, ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು ಶೇ 28 , ತೆಲಂಗಾಣ ಶೇ 27 , ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ ಶೇ 25 ರಷ್ಟು ಬಾಲ್ಯ ವಿವಾಹಗಳಾಗಿವೆ.