ಕರ್ನಾಟಕ

karnataka

ETV Bharat / bharat

ಗಾಂಧೀಜಿ, ಶಾಸ್ತ್ರೀಜಿ ಜಯಂತಿ: ಪ್ರಧಾನಿ ಮೋದಿ, ಸೋನಿಯಾ, ರಾಷ್ಟ್ರಪತಿಯಿಂದ ಪುಷ್ಪ ನಮನ

ಇಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು 2ನೇ ಪ್ರಧಾನಿ ಲಾಲ್​ ಬಹದ್ಧೂರ್​ ಶಾಸ್ತ್ರಿ ಅವರ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸೇರಿಂತೆ ವಿವಿಧ ಗಣ್ಯರು ಪುಷ್ಟನಮನ ಸಲ್ಲಿಸಿದರು.

leaders-tribute-to-lal-bahadur-shastri-gandhiji-birth-anniversary
ಗಾಂಧೀಜಿ, ಶಾಸ್ತ್ರೀಜಿ ಜಯಂತಿ

By

Published : Oct 2, 2022, 9:51 AM IST

ನವದೆಹಲಿ:ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಹಲವು ನಾಯಕರು ದೆಹಲಿಯ ರಾಜ್​ಘಾಟ್​ನಲ್ಲಿರುವ ​ಗಾಂಧೀಜಿ, ವಿಜಯ್​ಘಾಟ್​ನಲ್ಲಿರುವ ಶಾಸ್ತ್ರೀಜಿ ಅವರ ಸಮಾಧಿಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು. ಬಳಿಕ ಶಾಸ್ತ್ರಿ ಸಂಗ್ರಹಾಲಯಕ್ಕೂ ಭೇಟಿ ನೀಡಿದರು.

ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಗಾಂಧಿ ಜಯಂತಿ ಹೆಚ್ಚು ವಿಶೇಷವಾಗಿದೆ. ಕಾರಣ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಬಾಪೂಜಿ ಅವರ ಆದರ್ಶಗಳನ್ನು ಅನುಸರಿಸಿ. ಖಾದಿ ಮತ್ತು ಕರಕುಶಲ ವಸ್ತುಗಳನ್ನು ಖರೀದಿಸಿ ಎಂದು ಸಲಹೆ ನೀಡಿದರು.

ಗಾಂಧೀಜಿ, ಶಾಸ್ತ್ರೀಜಿ ಜಯಂತಿ: ಗಣ್ಯರಿಂದ ನಮನ

ಶಾಸ್ತ್ರೀಜಿ ಸರಳತೆ ಮಾದರಿ:ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಸರಳತೆ, ನಿರ್ಣಯಗಳು ದೇಶದಲ್ಲಿ ಮೆಚ್ಚುಗೆ ಪಡೆದಿದೆ. ಅವರ ಸರಳತೆ ನಮಗೆ ಮಾದರಿಯಾಗಿದೆ. ಇತಿಹಾಸದ ಅತ್ಯಂತ ನಿರ್ಣಾಯಕ ಸಮಯದಲ್ಲಿ ಅವರು ದೇಶದ ನಾಯಕತ್ವ ವಹಿಸಿಕೊಂಡಿದ್ದರು ಎಂದು ಸ್ಮರಿಸಿಕೊಂಡರು.

ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿಯಿಂದ ಪುಷ್ಪನಮನ

ಸೋನಿಯಾ, ರಾಷ್ಟ್ರಪತಿಗಳ ಭೇಟಿ:ಕಾಂಗ್ರೆಸ್​ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಜ್​ಘಾಟ್​​ಗೆ ಭೇಟಿ ನೀಡಿ, ಗಾಂಧೀಜಿ ಅವರ ಸಮಾಧಿಗೆ ಪುಷ್ಮನಮನ ಸಲ್ಲಿಸಿದರು. ಈ ವೇಳೆ ಕಾಂಗ್ರೆಸ್​ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ್​ ಖರ್ಗೆ ಸೇರಿದಂತೆ ಹಲವರಿದ್ದರು. ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್​ ಧನಕರ್ ಮತ್ತಿತರರು ಭೇಟಿ ನೀಡಿದರು.

ರಾಷ್ಟ್ರಪತಿಗಳಿಂದ ನಮನ

ಅಕ್ಟೋಬರ್ 2, 1869 ರಂದು ಗುಜರಾತ್‌ನ ಪೋರ್​ಬಂದರ್ ಪಟ್ಟಣದಲ್ಲಿ ಜನಿಸಿದ ಮಹಾತ್ಮ ಗಾಂಧಿ ಅವರು ಅಹಿಂಸಾತ್ಮಕ ನೀತಿ ಮೂಲಕ ವಸಾಹತುಶಾಹಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.

1904 ರಲ್ಲಿ ಉತ್ತರ ಪ್ರದೇಶದಲ್ಲಿ ಜನಿಸಿದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಭಾರತದ ಎರಡನೇ ಪ್ರಧಾನಿಯಾಗಿದ್ದರು ಮತ್ತು 1964 ರಿಂದ 1966 ರವರೆಗೆ ಸೇವೆ ಸಲ್ಲಿಸಿದ್ದರು.

ಓದಿ:ಬದನವಾಳು ಗ್ರಾಮದಲ್ಲಿ ಗಾಂಧಿ ಜಯಂತಿ: ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಮಹಾತ್ಮನಿಗೆ ನಮನ ಸಲ್ಲಿಸಿದ ರಾಹುಲ್ ಗಾಂಧಿ

ABOUT THE AUTHOR

...view details