ಜೈಪುರ್: ರಾಮಜನ್ಮಭೂಮಿ ಆಂದೋಲನದಲ್ಲಿ ಬಹುದೊಡ್ಡ ಪಾತ್ರ ವಹಿಸಿದ್ದ ಪ್ರಮುಖ ಹಿಂದೂ ಧಾರ್ಮಿಕ ಸಂತ ಆಚಾರ್ಯ ಸ್ವಾಮಿ ಧರ್ಮೇಂದ್ರ ಇಂದು (ಸೋಮವಾರ) ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯಪೀಡಿತರಾಗಿದ್ದ ಅವರನ್ನು ಚಿಕಿತ್ಸೆಗಾಗಿ ಇಲ್ಲಿನ ಸವಾಯ್ ಮಾನ್ ಸಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಹು ಅಂಗಾಂಗ ವೈಫಲ್ಯಕ್ಕೊಳಗಾಗಿದ್ದ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ ಒಂದು ತಿಂಗಳಿನಿಂದ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದರು.
ರಾಮಜನ್ಮಭೂಮಿ ಆಂದೋಲನದ ನೇತಾರ ಆಚಾರ್ಯ ಧರ್ಮೇಂದ್ರ ನಿಧನ
ರಾಮಜನ್ಮಭೂಮಿ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಚಾರ್ಯ ಸ್ವಾಮಿ ಧರ್ಮೇಂದ್ರ ಸೋಮವಾರ ನಿಧನರಾಗಿದ್ದಾರೆ.
Leader of Ramjanmabhoomi movement Acharya Dharmendra
ವಿಶ್ವ ಹಿಂದೂ ಪರಿಷತ್ತಿನ ಮಾರ್ಗದರ್ಶಕ ಮಂಡಲದಲ್ಲಿದ್ದ, ಇವರು ರಾಮಜನ್ಮಭೂಮಿ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಹೆಸರಿಸಲಾಗಿದ್ದ ಎಲ್ಲ 32 ಆರೋಪಿಗಳು ನಿರ್ದೋಷಿ ಎಂದು ವಿಶೇಷ ಸಿಬಿಐ ನ್ಯಾಯಾಲಯ ನೀಡಿದ ತೀರ್ಪಿಗೆ ಆಚಾರ್ಯ ಧರ್ಮೇಂದ್ರ ಸಂತಸ ವ್ಯಕ್ತಪಡಿಸಿದ್ದರು.
ಸತ್ಯದ ಗೆಲುವಾಗಿದೆ. ಇದಕ್ಕಾಗಿ ನಾನು ನಮಿಸುತ್ತೇನೆ. ನಾವೆಲ್ಲರೂ ಒಟ್ಟಾಗಿ ಹಳೆಯ ಎಲ್ಲ ತಪ್ಪುಗಳನ್ನು ಸರಿಪಡಿಸೋಣ. ಇದು ಆರಂಭವಷ್ಟೆ, ಕಾಶಿ-ಮಥುರಾ ಇನ್ನೂ ಬಾಕಿ ಇವೆ ಎಂದು ಹೇಳಿದ್ದರು.