ಕರ್ನಾಟಕ

karnataka

ETV Bharat / bharat

ನ್ಯಾಯಾಲಯದಲ್ಲೇ ವಕೀಲನನ್ನು ಗುಂಡಿಕ್ಕಿ ಕೊಲೆ ಮಾಡಿದ ದುಷ್ಕರ್ಮಿಗಳು - ಉತ್ತರ ಪ್ರದೇಶ ನ್ಯೂಸ್​

ಕೋರ್ಟ್​ ಆವರಣದಲ್ಲೇ ವಕೀಲನನ್ನು ನಾಡ ಪಿಸ್ತೂಲ್​ನಿಂದ ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಶಹಜಾನ್​ಪುರ್​​ದಲ್ಲಿ ನಡೆದಿದೆ.

Lawyer shot dead in court complex
Lawyer shot dead in court complex

By

Published : Oct 18, 2021, 4:45 PM IST

Updated : Oct 18, 2021, 7:58 PM IST

ಶಹಜಾನ್​ಪುರ್​(ಉತ್ತರ ಪ್ರದೇಶ): ಕೋರ್ಟ್ ಆವರಣದಲ್ಲೇ ವಕೀಲನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಶಹಜಾನ್​ಪುರ್​ದಲ್ಲಿ ನಡೆದಿದ್ದು, ಮೃತರನ್ನ ಭುಪೇಂದ್ರ ಪ್ರತಾಪ್​ ಸಿಂಗ್​ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಪೊಲೀಸರು

ಶಹಜಾನ್​ಪುರ್​​ ಸಿವಿಲ್​ ಕೋರ್ಟ್​​ನ ಮೂರನೇ ಮಹಡಿಯಲ್ಲಿ ಈ ದುರ್ಘಟನೆ ನಡೆದಿದ್ದು, ಕಂಟ್ರಿ(ನಾಡ) ಪಿಸ್ತೂಲ್​​ನಿಂದ ವಕೀಲರ ಮೇಲೆ ಹಲ್ಲೆ ನಡೆಸಲಾಗಿದೆ. ಘಟನೆ ನಡೆಯುತ್ತಿದ್ದಂತೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ದುಷ್ಕರ್ಮಿಗಳ ಬಂಧನಕ್ಕಾಗಿ ವಿಶೇಷ ತಂಡ ರಚನೆ ಮಾಡಿ ಕಾರ್ಯಾಚರಣೆ ಆರಂಭಿಸಿದ್ದಾರೆ.

ಯಾವ ಕಾರಣಕ್ಕಾಗಿ ಈ ಕೊಲೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲವಾದರೂ,ಹಳೇ ವೈಷಮ್ಯದಿಂದಾಗಿ ಕೃತ್ಯವೆಸಗಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಘಟನಾ ಸ್ಥಳದಿಂದ ನಾಡ ಪಿಸ್ಥೂಲ್ ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಶೋಧಕಾರ್ಯ ಆರಂಭ ಮಾಡಿದ್ದಾರೆ.

ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಮಾಯಾವತಿ, ನ್ಯಾಯಾಲಯದ ಆವರಣದಲ್ಲಿ ಹಗಲು ಹೊತ್ತಿನಲ್ಲೇ ವಕೀಲರೊಬ್ಬರ ಹತ್ಯೆ ಮಾಡಿರುವುದು ಅತ್ಯಂತ ದುಃಖಕರ ಹಾಗೂ ನಾಚಿಕೆಗೇಡಿನ ಸಂಗತಿ. ಇದು ಇಲ್ಲಿನ ಬಿಜೆಪಿ ಸರ್ಕಾರದಲ್ಲಿನ ಕಾನೂನು - ಸುವ್ಯವಸ್ಥೆ ಬಗ್ಗೆ ತಿಳಿಸುತ್ತದೆ. ಉತ್ತರ ಪ್ರದೇಶದಲ್ಲಿ ಯಾರು ಸುರಕ್ಷಿತವಾಗಿದ್ದಾರೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ ಎಂದಿರುವ ಮಾಯಾವತಿ, ಸರ್ಕಾರ ಇದರ ಬಗ್ಗೆ ಗಮನ ಹರಿಸಲಿ ಎಂದಿದ್ದಾರೆ.

ಇದನ್ನೂ ಓದಿರಿ:ಹೊಸ ಹೇರ್​ ಸ್ಟೈಲ್​ನಲ್ಲಿ ಶಿಲ್ಪಾ ಶೆಟ್ಟಿ.. ಈ ರೀತಿಯಾಗಿ ಕಾಲೆಳೆದ ನೆಟ್ಟಿಗರು!

ಕಳೆದ ಕೆಲ ದಿನಗಳ ಹಿಂದೆ ದೆಹಲಿಯ ರೋಹಿಣಿ ಕೋರ್ಟ್​ನಲ್ಲಿ ಲಾಯರ್​ಗಳ ಸಮವಸ್ತ್ರ ಹಾಕಿಕೊಂಡು ಕೋರ್ಟ್​ನೊಳಗೆ ನುಗ್ಗಿ, ಓರ್ವ ಗ್ಯಾಂಗ್​​ಸ್ಟರ್​ಗೆ ಗುಂಡಿಕ್ಕಿ ಕೊಲೆ ಮಾಡಿದ್ದರು.

Last Updated : Oct 18, 2021, 7:58 PM IST

ABOUT THE AUTHOR

...view details