ಕರ್ನಾಟಕ

karnataka

ETV Bharat / bharat

ನೆಲದ ಕಾನೂನನ್ನು ಪ್ರತಿಯೊಬ್ಬರೂ ಪಾಲಿಸಬೇಕು: ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ Twitterಗೆ ಐಟಿ ಸಚಿವರ ಎಚ್ಚರಿಕೆ - ಅಶ್ವಿನಿ ವೈಷ್ಣವ್​

ಭಾರತದ ಕಾನೂನು ಸರ್ವೋಚ್ಛವಾಗಿದ್ದು, ಅದರ ಪಾಲನೆ ಕಡ್ಡಾಯ ಎಂದು ನೂತನ ಐಟಿ ಸಚಿವರು ಟ್ವಿಟರ್​ಗೆ ಎಚ್ಚರಿಕೆ ನೀಡಿದ್ದಾರೆ.

Ashwini vaishnaw
Ashwini vaishnaw

By

Published : Jul 8, 2021, 4:26 PM IST

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ನೂತನ ಸಂಪುಟದಲ್ಲಿ ಮಾಹಿತಿ ತಂತ್ರಜ್ಞಾನ ಇಲಾಖೆಯ ನೂತನ ಸಚಿವರಾಗಿ ಅಶ್ವಿನಿ ವೈಷ್ಣವ್​ ಅಧಿಕಾರ ವಹಿಸಿಕೊಂಡಿದ್ದು, ಟ್ವಿಟರ್​ಗೆ ಖಡಕ್​ ಸಂದೇಶ ರವಾನಿಸಿದರು.

ಕಳೆದ ಕೆಲವು ತಿಂಗಳಿಂದ ಟ್ವಿಟರ್​ ಹಾಗೂ ಕೇಂದ್ರ ಸರ್ಕಾರದ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಭಾರತದ ಕಾನೂನು ಪಾಲನೆ ಮಾಡುವ ವಿಚಾರದಲ್ಲಿ ಟ್ವಿಟರ್ ಮೀನಮೇಷ ಎಣಿಸುತ್ತಿದೆ. ಇದೇ ವಿಚಾರವಾಗಿ ಮಾತನಾಡಿರುವ ನೂತನ ಐಟಿ ಸಚಿವರು, ಇಲ್ಲಿನ ಕಾನೂನು ಸರ್ವೋಚ್ಛ. ಪಾಲನೆ ಮಾಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದ್ದಾರೆ.

ಈ ಹಿಂದೆ ಐಟಿ ಸಚಿವರಾಗಿದ್ದ ರವಿಶಂಕರ್​ ಪ್ರಸಾದ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ನೂತನ ಸಚಿವರಾಗಿ ಅಶ್ವಿನಿ ವೈಷ್ಣವ್​ ಅವರನ್ನು ನೇಮಕ ಮಾಡಲಾಗಿದೆ.

ಇದನ್ನೂ ಓದಿರಿ: "ಕನ್ನಡ್ ಅಲ್ಲ, ಕನ್ನಡ..." ಮಹಾರಾಷ್ಟ್ರ ಕ್ರಿಕೆಟಿಗನಿಗೆ ಕನ್ನಡ ಮೇಷ್ಟ್ರಾದ ಕೆ.ಗೌತಮ್‌- ವಿಡಿಯೋ ನೋಡಿ..

ABOUT THE AUTHOR

...view details