ಪತ್ತನಂತಿಟ್ಟ(ಕೇರಳ): ಶಬರಿಮಲೆಗೆ ಬರಲು ಬಯಸುವವರಿಗೆ ಈಗಾಗಲೇ ಸ್ಪಾಟ್ ಬುಕಿಂಗ್ ಕಲ್ಪಿಸಲಾಗಿದ್ದು, ದಿನಕ್ಕೆ ಸುಮಾರು 5 ಸಾವಿರ ಮಂದಿ ಸ್ಪಾಟ್ ಬುಕಿಂಗ್ ಮಾಡಿಕೊಳ್ಳಬಹುದಾಗಿದೆ. ಆದರೆ ಈಗ ದಿನಕ್ಕೆ ಸರಾಸರಿ 700 ಮಂದಿ ಮಾತ್ರ ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ತಿರುವಂಕೂರು ದೇವಸ್ವಂ ಬೋರ್ಡ್ ಮಾಹಿತಿ ನೀಡಿದೆ.
ನೀಲಕ್ಕಲ್ ಸೇರಿದಂತೆ ಸುಮಾರು 10 ಸ್ಥಳಗಳಲ್ಲಿ ಸ್ಪಾಟ್ ಬುಕಿಂಗ್ಗೆ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ ಬುಕಿಂಗ್ ಮಾಡಿಕೊಳ್ಳುವ ಮೂಲಕ ಶಬರಿಮಲೆಗೆ ಯಾತ್ರಾರ್ಥಿಗಳು ಬರಬಹುದಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಹೇಳಿದೆ.