ಕರ್ನಾಟಕ

karnataka

ETV Bharat / bharat

ಕೋವಿಡ್‌ ಸೋಂಕಿತರಲ್ಲಿ ಸ್ವಲ್ಪ ಇಳಿಕೆ, ಮರಣ ಪ್ರಮಾಣ ಹೆಚ್ಚಳ

ದೇಶದಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಸ್ವಲ್ಪ ಮಟ್ಟದಲ್ಲಿ ಇಳಿಕೆಯಾಗಿದ್ದು, ಮರಣ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ.

latest covid cases in India
India Covid: ಹೊಸ ಸೋಂಕಿತರಲ್ಲಿ ಸ್ವಲ್ಪ ಇಳಿಕೆ, ಮರಣ ಪ್ರಮಾಣ ಹೆಚ್ಚಳ

By

Published : May 8, 2022, 9:58 AM IST

ನವದೆಹಲಿ:ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿತ್ತು. ಶನಿವಾರಕ್ಕೆ ಹೋಲಿಸಿದರೆ ಇಂದು ಹೊಸ ಸೋಂಕಿತರ ಸಂಖ್ಯೆ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಕಳೆದೊಂದು ದಿನದಲ್ಲಿ 3,451 ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 4,31,02,194ಕ್ಕೆ ಏರಿಕೆಯಾಗಿದೆ.

ಒಂದು ದಿನದಲ್ಲಿ 40 ಜನರು ಬಲಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 5,24,064ಕ್ಕೆ ಏರಿಕೆಯಾಗಿದೆ. ಪ್ರಸ್ತುತ, ದೇಶಾದ್ಯಂತ ಒಟ್ಟು 20,635 ಸಕ್ರಿಯ ಸೋಂಕಿತರಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಚೇತರಿಕೆ ದರ ಶೇ.98.74ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 3,079 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 4,25,57,495 ಜನರು ಚೇತರಿಸಿಕೊಂಡಿದ್ದಾರೆ. ದೈನಂದಿನ ಪಾಸಿಟಿವಿಟಿ ದರ ಶೇಕಡಾ 0.05ರಷ್ಟಿದೆ.

ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನಡಿ ಈವರೆಗೆ 1,90,20,07,487 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಶನಿವಾರ 17,39,403 ಮಂದಿಗೆ ಲಸಿಕೆ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 3,60,613 ಮಂದಿಗೆ ಕೋವಿಡ್​ ಪರೀಕ್ಷೆ ನಡೆಸಲಾಗಿದೆ. ಈವರೆಗೆ 84,06,93,082 ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

ಇದನ್ನೂ ಓದಿ:ನೋಡಿ: ಬಾಗಿಲು ತೆರೆದು ದರ್ಶನ ನೀಡಿದ ಬದ್ರಿನಾಥ; ಭಕ್ತರ ಸಂಭ್ರಮ

ABOUT THE AUTHOR

...view details