ಅಮೃತಸರ: ಅಜ್ನಾಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬಿಒಪಿ ಭಯ್ಯಾನ್‌ನಲ್ಲಿ ತಡರಾತ್ರಿ ಬಿಎಸ್‌ಎಫ್‌ನ 183 ಬೆಟಾಲಿಯನ್ ಯೋಧರು ಡ್ರೋನ್‌ನ ಚಲನ ವಲನಗಳನ್ನು ಕಂಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಬಿಎಸ್‌ಎಫ್ ಯೋಧರು ಡ್ರೋನ್‌ಗೆ ಗುಂಡು ಹಾರಿಸಿದ್ದಾರೆ.
ಭಾರತ-ಪಾಕಿಸ್ತಾನ ಗಡಿಯಲ್ಲಿ ಡ್ರೋನ್‌ಗಳ ಚಲನೆಗಳು ಹೆಚ್ಚಾಗಿ ಕಂಡುಬರುತ್ತಿವೆ. ತಡರಾತ್ರಿ ಸಹ ಡ್ರೋನ್‌ನ ಚಲನೆ ಕಂಡು ಬಂದಿದ್ದು, ಇದನ್ನು ಕರ್ತವ್ಯದಲ್ಲಿದ್ದ ಯೋಧರು ಗುರುತಿಸಿದ್ದಾರೆ. ಕೂಡಲೇ ಡ್ರೋನ್‌ಗೆ ಗುಂಡು ಹಾರಿಸಿದ್ದಾರೆ. ಆದರೆ ಆ ಡ್ರೋನ್ ತಕ್ಷಣವೇ ಪಾಕಿಸ್ತಾನದ ಕಡೆಗೆ ಹಿಂತಿರುಗಿತು. ಇದಾದ ನಂತರ ದಿನ ಬಿಎಸ್‌ಎಫ್ ಯೋಧರು ಮತ್ತು ಪಂಜಾಬ್ ಪೊಲೀಸರು ಆ ಪ್ರದೇಶವನ್ನು ಶೋಧಿಸುತ್ತಿದ್ದಾರೆ.