ETV Bharat Karnataka

ಕರ್ನಾಟಕ

karnataka

ETV Bharat / bharat

ಬಿಪಿನ್​ ರಾವತ್​ ಸಹೋದರ ನಿವೃತ್ತ ಕರ್ನಲ್​​​ ವಿಜಯ್​ ರಾವತ್ ಬಿಜೆಪಿ ಸೇರ್ಪಡೆ - ಸಿಡಿಎಸ್​​ ಬಿಪಿನ್​ ರಾವತ್​ ತಮ್ಮ ಕರ್ನಲ್​​​ ವಿಜಯ್​ ರಾವತ್

ದಿವಂಗತ ಸಿಡಿಎಸ್​ ಬಿಪಿನ್ ರಾವತ್​ ಅವರ ಕಿರಿಯ ಸಹೋದರ ನಿವೃತ್ತ ಕರ್ನಲ್​ ವಿಜಯ್​ ರಾವತ್​ ಇಂದು ಭಾರತೀಯ ಜನತಾ ಪಾರ್ಟಿ ಸೇರ್ಪಡೆಯಾಗಿದ್ದು, ಉತ್ತರಾಖಂಡ ಚುನಾವಣೆಯಲ್ಲಿ ಅವರು ಅಖಾಡಕ್ಕಿಳಿಯುವ ಸಾಧ್ಯತೆಯಿದೆ.

Colonel Vijay Rawat joins BJP
Colonel Vijay Rawat joins BJP
author img

By

Published : Jan 19, 2022, 7:05 PM IST

ನವದೆಹಲಿ:ಕಳೆದ ಕೆಲ ದಿನಗಳ ಹಿಂದೆ ಸೇನಾ ಹೆಲಿಕಾಪ್ಟರ್​ನಲ್ಲಿ ಹುತಾತ್ಮರಾಗಿರುವ ಸಿಡಿಎಸ್​​​ ಬಿಪಿನ್​​ ರಾವತ್ ಅವರ ಕಿರಿಯ ಸಹೋದರ ಕರ್ನಲ್​ ವಿಜಯ್​ ರಾವತ್​ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ನಿನ್ನೆಯಷ್ಟೇ ಉತ್ತರಾಖಂಡ ಸಿಎಂ ಪುಷ್ಕರ್​​ ಸಿಂಗ್ ಧಾಮಿ ಅವರನ್ನ ಭೇಟಿ ಮಾಡಿದ್ದ ಅವರು, ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ದೆಹಲಿಯಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್​ ಧಾಮಿ ನೇತೃತ್ವದಲ್ಲಿ ಬಿಜೆಪಿ ಸೇರಿದ್ದು, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ.

ಈ ವೇಳೆ ಮಾತನಾಡಿರುವ ಅವರು, ಉತ್ತರಾಖಂಡ ಬಗ್ಗೆ ಮುಖ್ಯಮಂತ್ರಿ ಹೊಂದಿರುವ ದೂರದೃಷ್ಟಿಯಿಂದ ನಾನು ಪ್ರಭಾವಕ್ಕೊಳಗಾಗಿದ್ದು, ಬಿಜೆಪಿ ಮನಸ್ಥಿತಿ ಹಾಗೂ ನನ್ನ ಮನಸ್ಸಿನಲ್ಲಿರುವ ನಿರ್ಧಾರಗಳು ಹೊಂದಿಕೆ ಆಗುತ್ತವೆ. ಹೀಗಾಗಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದಿದ್ದಾರೆ.

ಉತ್ತರಾಖಂಡದ ಜನರ ಸೇವೆ ಮಾಡಲು ನಾನು ಸಿದ್ಧನಿದ್ದೇನೆ. ಬಿಜೆಪಿ ಸೇರಿಕೊಳ್ಳಲು ಅವಕಾಶ ನೀಡಿದ್ದಕ್ಕಾಗಿ ನಾನು ಪಕ್ಷಕ್ಕೆ ಆಭಾರಿಯಾಗಿದ್ದೇನೆ. ನನ್ನ ತಂದೆ ಕೂಡ ನಿವೃತ್ತಿ ಬಳಿಕ ಬಿಜೆಪಿಯಲ್ಲಿದ್ದರು. ಇದೀಗ ನನಗೆ ಅವಕಾಶ ಸಿಕ್ಕಿದೆ ಎಂದರು.

ಸಹೋದರ ಬಿಪಿನ್ ರಾವತ್ ಮತ್ತು ಅವರ ಕುಟುಂಬ ದೇಶಕ್ಕೆ ಮಾಡಿದ ಸೇವೆಯನ್ನು ನಾವು ಅಭಿನಂದಿಸುತ್ತೇವೆ. ಅವರ ಕನಸಿನಂತೆ ಉತ್ತರಾಖಂಡ ರಾಜ್ಯಕ್ಕೆ ಸೇವೆ ಸಲ್ಲಿಸಲು ನಾನು ಯಾವಾಗಲೂ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಇದನ್ನೂ ಓದಿರಿ:ಗಾಯಕಿ ಲತಾ ಮಂಗೇಶ್ಕರ್ ಆರೋಗ್ಯ ಸ್ಥಿರ, ಐಸಿಯುನಲ್ಲಿ ಮುಂದುವರೆದ ಚಿಕಿತ್ಸೆ

70 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಉತ್ತರಾಖಂಡದಲ್ಲಿ ಫೆಬ್ರವರಿ 14ರಂದು ವೋಟಿಂಗ್ ನಡೆಯಲಿದ್ದು, ಆಡಳಿತ ರೂಢ ಬಿಜೆಪಿ-ಕಾಂಗ್ರೆಸ್​​ ನಡುವೆ ತೀವ್ರ ಪೈಪೋಟಿ ಇದೆ.

ABOUT THE AUTHOR

...view details