ನವದೆಹಲಿ: ಬಹು ಅಂಗಾಂಗ ವೈಫಲ್ಯದಿಂದ ಇಂದು ಮುಂಜಾನೆ ನಿಧನರಾದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆ ಇಂದು (ಭಾನುವಾರ) ಸಂಜೆ 6:30ಕ್ಕೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ.
ಇದನ್ನೂ ಓದಿ:ಭಾರತದ ಅಭಿವೃದ್ಧಿಯ ಬಗ್ಗೆ ಲತಾ ಮಂಗೇಶ್ಕರ್ ಉತ್ಸುಕರಾಗಿದ್ದರು: ಪ್ರಧಾನಿ ಮೋದಿ ಸಂತಾಪ
ಮಧ್ಯಾಹ್ನ 12.30ಕ್ಕೆ ಲತಾ ಮಂಗೇಶ್ಕರ್ ಪಾರ್ಥಿವಶರೀರವನ್ನು ಅವರ ಮನೆಯಾದ 'ಪ್ರಭು ಕುಂಜ್'ಗೆ ಕೊಂಡೊಯ್ಯಲಾಗುತ್ತದೆ. 3 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
2 ದಿನಗಳ ರಾಷ್ಟ್ರೀಯ ಶೋಕಾಚರಣೆ: ಲತಾ ಮಂಗೇಶ್ಕರ್ ಅವರ ಸ್ಮರಣಾರ್ಥ ಎರಡು ದಿನಗಳ ಶೋಕಾಚರಣೆಯನ್ನು (ಫೆಬ್ರವರಿ 6ರಿಂದ ಫೆಬ್ರವರಿ 7ವರೆಗೆ) ಆಚರಿಸಲು ಭಾರತ ಸರ್ಕಾರ ನಿರ್ಧರಿಸಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. ಶೋಕಾಚರಣೆಯ ಸಮಯದಲ್ಲಿ, ಭಾರತದಾದ್ಯಂತ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುತ್ತದೆ ಮತ್ತು ಯಾವುದೇ ಅಧಿಕೃತ ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ.
ಇದನ್ನೂ ಓದಿ:ಮೌನವಾಯ್ತು ಹಾಡುಹಕ್ಕಿ: ಗಾನಕೋಗಿಲೆ ಲತಾ ಮಂಗೇಶ್ಕರ್ ಇನ್ನಿಲ್ಲ..!