ಪಂಜಾಬ್: ರಾಜ್ಯದಲ್ಲಿ ಕೋವಿಡ್ಗೆ ಬಲಿಯಾಗಿರುವ ಸಂಖ್ಯೆ ಗಣನೀಯ ಏರಿಕೆ ಕಾಣುತ್ತಿದೆ. ಈ ಮಧ್ಯೆ ರೋಗಿಗಳ ಸಂಬಂಧಿಕರ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸಲು ಆಸ್ಪತ್ರೆಗಳು ಮತ್ತು ಶವಾಗಾರಗಳು ಅತಿಯಾದ ಶುಲ್ಕ ಬೇರೆ ವಿಧಿಸುತ್ತಿವೆ. ಜೊತೆಗೆ ಶವಾಗಾರಗಳಿಗೆ ಬರುವ ಮೃತದೇಹಗಳ ಸಂಖ್ಯೆ ಸಹ ಹೆಚ್ಚುತ್ತಿರುವುದರಿಂದ ಅವುಗಳನ್ನು ಸುಡಲು ಪಂಜಾಬ್ನ ಹಲವೆಡೆ ಮರದ ಸಮಸ್ಯೆ ಸಹ ಉಂಟಾಗಿದೆ.
ಮೃತರ ಕುಟುಂಬಕ್ಕೆ ಸೋಂಕಿತ ಶವಸಂಸ್ಕಾರಕ್ಕೆ 10,000 ರಿಂದ 12,000 ರೂ. ವಿಧಿಸಲಾಗುತ್ತಿದೆ. ಶವಾಗಾರಗಳಲ್ಲಿ ಮರಗಳನ್ನು ಬಳಸಿ ಹೆಣ ಸುಡಲು 6,500 ರೂ. ವಿಧಿಸಲಾಗಿದೆ. ಕಳೆದ ವರ್ಷ ಸರ್ಕಾರ ಶವದ ದಹನಕ್ಕಾಗಿ ಉಚಿತ ಗ್ಯಾಸ್ ಸಿಲಿಂಡರ್‌ಗಳನ್ನು ನೀಡುತ್ತಿತ್ತು. ಆದರೆ, ಈ ವರ್ಷ, ಜನರು ಸಿಲಿಂಡರ್ ಖರೀದಿಸಲು ಒತ್ತಾಯಿಸಲಾಗುತ್ತದೆ. ಸಂಪೂರ್ಣ ದಹನ ವಿಧಿವಿಧಾನವನ್ನು ಮಾಡಲು, ಒಬ್ಬರಿಗೆ ನಾಲ್ಕು ಗ್ಯಾಸ್ ಸಿಲಿಂಡರ್‌ಗಳು ಬೇಕಾಗುತ್ತವೆ, ಇದಕ್ಕೆ ಒಟ್ಟು 6,500 ರೂ.ಗಳು ಖರ್ಚಾಗುತ್ತಿವೆ. ಆದರೆ, ವಾಸ್ತವವಾಗಿ 5000 ರೂ ಇದರ ವೆಚ್ಚ. ಆದರೆ, ಶವಾಗಾರಗಳು ಸಹ ಮೃತರ ಸಂಬಂಧಿಕರಿಂದ ಹಣ ಹೆಚ್ಚಿಗೆ ವಸೂಲಿ ಮಾಡುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.
ಚಂಡೀಗಢ:
ಕೋವಿಡ್ ಎರಡನೇ ಅಲೆ ದೇಶವನ್ನ ಕಂಗೆಡಿಸಿದೆ. ಚಂಡೀಗಢದ ಸೆಕ್ಟರ್ 25 ಶವಾಗಾರದಲ್ಲಿ, ಪ್ರತಿದಿನ ಸುಮಾರು 40 ಶವಗಳ ಅಂತ್ಯಕ್ರಿಯೆ ಮಾಡಲಾಗುತ್ತಿದೆ, ಅದರಲ್ಲಿ ಐವತ್ತು ಪ್ರತಿಶತದಷ್ಟು ಕೋವಿಡ್ನಿಂದ ಮೃತಪಟ್ಟವರೇ ಆಗಿದ್ದಾರೆ. ಈ ಪ್ರಕ್ರಿಯೆಗೆ ಹೆಚ್ಚು ಸಮಯ ತಗುಲುವುದರಿಂದ ಸುಮಾರು ಆರು ಮೃತ ದೇಹಗಳನ್ನು ಮಾತ್ರ ವಿದ್ಯುತ್ ಶವಾಗಾರದಲ್ಲಿ ಶವಸಂಸ್ಕಾರ ಮಾಡಲಾಗುತ್ತಿದೆ. ಉಳಿದ ಶವಗಳನ್ನು ಮರ ಬಳಸಿ ದಹನ ಮಾಡಲಾಗುತ್ತದೆ.