ಕರ್ನಾಟಕ

karnataka

By

Published : Jul 26, 2022, 5:40 PM IST

ETV Bharat / bharat

ಗುಜರಾತ್​ ಕಳ್ಳಭಟ್ಟಿ ದುರಂತ: ಸಾವಿನ ಸಂಖ್ಯೆ 30ಕ್ಕೆ ಏರಿಕೆ, ಸಾಮೂಹಿಕ ಅಂತ್ಯಸಂಸ್ಕಾರ

ಗುಜರಾತ್​ ಕಳ್ಳಭಟ್ಟಿ ದುರಂತ- ಹೆಚ್ಚುತ್ತಲೇ ಇದೆ ಸಾವಿನ ಸಂಖ್ಯೆ- ಬೋಟಾಡ್‌ ಜಿಲ್ಲೆಯ ಗ್ರಾಮಗಳಲ್ಲಿ ಜನರಲ್ಲಿ ಆತಂಕ

last Journey before Funeral taken out by tractor of 5 people who died due to Illicit Liquor In botad
ಗುಜರಾತ್​ನಲ್ಲಿ ಕಳ್ಳಭಟ್ಟಿ ಸೇವಿಸಿ ಮೃತರ ಸಂಖ್ಯೆ 30ಕ್ಕೆ ಏರಿಕೆ: ಟ್ರ್ಯಾಕ್ಟರ್​ನಲ್ಲಿ ಅಂತಿಮಯಾತ್ರೆ

ಅಹಮದಾಬಾದ್ (ಗುಜರಾತ್​):ಗುಜರಾತ್​ನ ಬೋಟಾಡ್‌ ಜಿಲ್ಲೆಯಲ್ಲಿ ನಡೆದ ಕಳ್ಳಭಟ್ಟಿ ದುರಂತದಲ್ಲಿ ಮೃತರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಇತ್ತ, ಮೃತರನ್ನು ಸಾಮೂಹಿಕವಾಗಿ ಅಂತ್ಯಸಂಸ್ಕಾರ ಮಾಡಲಾಗಿದೆ.

ಬರ್ವಾಲಾ ತಾಲೂಕಿನ ರೋಜಿದ್ ಹಾಗೂ ಧಂಧೂಕಾಮ, ಭಾವನಗರ ಸೇರಿ ಸುತ್ತಮತ್ತಲಿನ ಗ್ರಾಮಗಳಲ್ಲಿ ಕಳ್ಳಭಟ್ಟಿ ಸೇವಿಸಿ ಒಟ್ಟಾರೆ 47 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. 47 ಜನರ ಪೈಕಿ 30 ಜನರು ಸಾವನ್ನಪ್ಪಿದ್ದಾರೆ. ಇಂದು ರೋಜಿದ್ ಗ್ರಾಮದಲ್ಲಿ ಐವರ ಪಾರ್ಥಿವ ಶರೀರಗಳನ್ನು ಟ್ಯ್ರಾಕ್ಟರ್​ಗಳಲ್ಲಿ ಒಟ್ಟಿಗೆ ಅಂತಿಮ ಯಾತ್ರೆ ನಡೆಸಲಾಗಿದೆ. ಈ ಸರಣಿ ಸಾವುಗಳಿಂದ ಗ್ರಾಮದಾದ್ಯಂತ ಶೋಕ ಮಡುಗಟ್ಟಿದೆ.

ಗುಜರಾತ್​ನಲ್ಲಿ ಕಳ್ಳಭಟ್ಟಿ ಸೇವಿಸಿ ಮೃತರ ಸಂಖ್ಯೆ 30ಕ್ಕೆ ಏರಿಕೆ: ಟ್ರ್ಯಾಕ್ಟರ್​ನಲ್ಲಿ ಅಂತಿಮಯಾತ್ರೆ

ಈ ಕಳ್ಳಭಟ್ಟಿ ದುರಂತದ ನಂತರ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಈ ಬಗ್ಗೆ ತನಿಖೆಗಾಗಿ ಐಜಿಪಿ ನೇತೃತ್ವದ ಸಮಿತಿಯನ್ನು ರಚನೆ ಮಾಡಲಾಗಿದೆ. ಅಲ್ಲದೇ, ಇಂದು ಗೃಹ ಸಚಿವ ಹರ್ಷ ಸಾಂಘ್ವಿ ಅಧ್ಯಕ್ಷತೆಯಲ್ಲಿ ಬೋಟಾಡ್‌ನಲ್ಲಿ ಉನ್ನತ ಸಮಿತಿಯ ಸಭೆ ನಡೆಸಲಾಗಿದೆ.

ಈ ಸಭೆಯ ನಂತರ ರಾಜ್ಯ ಪೊಲೀಸ್ ಮುಖ್ಯಸ್ಥ ಆಶಿಶ್ ಭಾಟಿಯಾ ಮಾತನಾಡಿ, ಇಡೀ ಘಟನೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಕ್ರಮಗಳನ್ನು ಮುಂದಿನ 24 ಗಂಟೆಯೊಳಗೆ ಪೂರ್ಣಗೊಳಿಸಲಾಗುವುದು. ಅಲ್ಲದೇ, ಈಗಾಗಲೇ 13 ಜನ ಆರೋಪಿಗಳ ವಿರುದ್ಧ ಕೇಸ್ ದಾಖಲಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ವಿರೋಧದ ನಡುವೆಯೂ ಮದುವೆಯಾದ ಜೋಡಿ: ಅಮಾನುಷವಾಗಿ ಕೊಲೆ ಮಾಡಿದ ತಂದೆ

ABOUT THE AUTHOR

...view details