ನವದೆಹಲಿ: 2022 ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ನೀಡಲಾಗುವ ಪದ್ಮ ಪ್ರಶಸ್ತಿಗಳಿಗೆ ನಾಮ ನಿರ್ದೇಶನ ಸಲ್ಲಿಸಲು ಬುಧವಾರ (ಇಂದು) ಕೊನೆಯ ದಿನ ಎಂದು ಗೃಹ ವ್ಯವಹಾರಗಳ ಸಚಿವಾಲಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಈ ಮೂರು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾಗಿದ್ದು, ಅವುಗಳ ಆನ್‌ಲೈನ್ ನಾಮನಿರ್ದೇಶನ ಇಂದು ಅಂತ್ಯವಾಗಲಿದೆ.
ಇದನ್ನೂ ಓದಿ:ಕೊಳ್ಳೇಗಾಲದ ಗೋಪಾಲಸ್ವಾಮಿ, ಬೇಗೂರಿನ ಷಡಕ್ಷರಿಸ್ವಾಮಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ
ಸಾಧಕರು ಮಾಡಿರುವ ವಿಭಿನ್ನ ಕಾರ್ಯಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ಕ್ಷೇತ್ರಗಳಲ್ಲಿ ಮತ್ತು ವಿಭಾಗಗಳಲ್ಲಿನ ವಿಶಿಷ್ಟ ಮತ್ತು ಅಸಾಧಾರಣ ಸಾಧನೆಗಳು ಮತ್ತು ಸೇವೆಗಳನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತದೆ.
ಇದನ್ನೂ ಓದಿ:ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಕರಾಟೆ ಆನ್‌ಲೈನ್ ಸ್ಪರ್ಧೆ: ಕಡಬದ ಸಾನ್ವಿಕಾಳಿಗೆ ಪ್ರಶಸ್ತಿ
ಪದ್ಮ ಪ್ರಶಸ್ತಿಗಳ ನಾಮ ನಿರ್ದೇಶನಗಳು/ ಶಿಫಾರಸುಗಳನ್ನು ಆನ್‌ಲೈನ್‌ನಲ್ಲಿ ಅಧಿಕೃತ ಪದ್ಮ ಪ್ರಶಸ್ತಿ ಪೋರ್ಟಲ್‌ನಲ್ಲಿ ಮಾತ್ರ ಸ್ವೀಕರಿಸಲಾಗುತ್ತದೆ. ಪದ್ಮ ಪ್ರಶಸ್ತಿಗಳನ್ನು "ಜನರ ಪದ್ಮ" ವನ್ನಾಗಿ ಪರಿವರ್ತಿಸಲು ಸರ್ಕಾರ ಬದ್ಧವಾಗಿದೆ ಎಂದು ಸಚಿವಾಲಯ ತಿಳಿಸಿದ್ದು, ಆದ್ದರಿಂದ ಎಲ್ಲ ನಾಗರಿಕರು ಸ್ವಯಂ ನಾಮನಿರ್ದೇಶನ ಸೇರಿದಂತೆ ನಾಮಪತ್ರ ಸಲ್ಲಿಸುವಂತೆ ಕೋರಲಾಗಿದೆ.
ಈ ಸಂಬಂಧ ಹೆಚ್ಚಿನ ವಿವರಗಳು ಗೃಹ ವ್ಯವಹಾರಗಳ ಸಚಿವಾಲಯದ ವೆಬ್‌ಸೈಟ್‌ನಲ್ಲಿ 'ಪ್ರಶಸ್ತಿಗಳು ಮತ್ತು ಪದಕಗಳು' ಶೀರ್ಷಿಕೆಯಡಿ ಲಭ್ಯವಿದೆ. ಜೊತೆಗೆ ಪ್ರಶಸ್ತಿಗಳಿಗೆ ಸಂಬಂಧಿಸಿದ ಕಾನೂನುಗಳು ಮತ್ತು ನಿಯಮಗಳನ್ನು ವೆಬ್‌ಸೈಟ್‌ನಲ್ಲಿ ಗಮನಿಸಬಹುದು.