ಕರ್ನಾಟಕ

karnataka

ETV Bharat / bharat

ಈರುಳ್ಳಿ ಹರಾಜಿನಲ್ಲಿ ಮಹಿಳಾ ಸಂಸ್ಥೆ ಭಾಗಿ: ಲಸಲ್ಗಾಂವ್​ನ ವ್ಯಾಪಾರಿಗಳಿಂದ ಪ್ರಕ್ರಿಯೆ ಬಹಿಷ್ಕಾರ - ಮಹಾರಾಷ್ಟ್ರ ಈರುಳ್ಳಿ ಬೆಲೆ

ಮಹಿಳಾ ಸಂಸ್ಥೆಗಳು ಈರುಳ್ಳಿ ಬೆಳೆ ಹರಾಜಿನಲ್ಲಿ ಭಾಗವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಮಹಾರಾಷ್ಟ್ರದ ಲಸಲ್ಗಾಂವ್​ನ ವ್ಯಾಪಾರಿಗಳು, ಹರಾಜು ಪ್ರಕ್ರಿಯೆಯನ್ನು ಬಹಿಷ್ಕರಿಸಿದ್ದಾರೆ.

ಮಹಾರಾಷ್ಟ್ರ
ಮಹಾರಾಷ್ಟ್ರ

By

Published : Jun 4, 2021, 3:30 PM IST

ಮಹಾರಾಷ್ಟ್ರ:ಈರುಳ್ಳಿ ಬೆಳೆ ಹರಾಜಿನಲ್ಲಿ ಮಹಿಳಾ ಸಂಸ್ಥೆಗಳು ಭಾಗವಹಿಸಿದಕ್ಕೆ ಆಕ್ರೋಶಗೊಂಡ ಲಸಲ್ಗಾಂವ್​ನ ವ್ಯಾಪಾರಿಗಳು ಪ್ರಕ್ರಿಯೆಯನ್ನೇ ಬಹಿಷ್ಕರಿಸಿರುವ ಘಟನೆ ನಡೆದಿದೆ. ಇನ್ನು ಈ ಘಟನೆ ಸಂಬಂಧಿಸಿ, ಕೃಧಾ ಸಾಧನಾ ನಿರ್ದೇಶಕಿ ಸಾಧನಾ ಜಾಧವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲಸಲ್ಗಾಂವ್ ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿಯು ಏಷ್ಯಾದ ಅತಿದೊಡ್ಡ ಮಾರುಕಟ್ಟೆ ಎಂದು ಪ್ರಸಿದ್ಧವಾಗಿದೆ. ಕೃಧಾ ಮಹಿಳಾ ಸಹಕಾರಿ ಸಂಸ್ಥೆಯ ನಿರ್ದೇಶಕಿ ಸಾಧನಾ ಜಾಧವ್, ನವದೆಹಲಿಯ ಎಫ್‌ಸಿಒದ ಮೊದಲ ಮಹಿಳಾ ನಿರ್ದೇಶಕಿ ಮತ್ತು ವಿಂಚೂರ್ ವಿಕಾಸ್ ಸೊಸೈಟಿಯ ಅಧ್ಯಕ್ಷರಾಗಿದ್ದಾರೆ.

ಇನ್ನು ಈರುಳ್ಳಿ ಖರೀದಿ ಪರವಾನಗಿಯನ್ನುಮಾರುಕಟ್ಟೆ ಸಮಿತಿಯಿಂದ ನೀಡಲಾಗುತ್ತದೆ. ಆದರೆ, ಮಹಿಳಾ ವ್ಯಾಪಾರಿಗಳು ಸಂಘದಲ್ಲಿ ಸದಸ್ಯರಾಗಿಲ್ಲದಿರುವುದು, ಅಷ್ಟೇ ಅಲ್ಲದೇ ಪರವಾನಗಿ ಪಡೆಯದಿರುವುದು ಈ ಘಟನೆಗೆ ಕಾರಣ ಎನ್ನಲಾಗಿದೆ.

ಮಹಿಳಾ ವ್ಯಾಪಾರಿಗಳು ಸಂಘದ ಸದಸ್ಯರಲ್ಲ ಎಂಬ ಕಾರಣಕ್ಕೆ ಹರಾಜಿನಲ್ಲಿ ಭಾಗವಹಿಸಬಾರದು ಎಂಬ ನಿಯಮವಿಲ್ಲ. ಹರಾಜಿಲ್ಲಿ ಭಾಗವಹಿಸುವ ಸಮಯದಲ್ಲಿ ರೈತರಿಗೆ ಉತ್ತಮ ಬೆಲೆ ಸಿಗುತ್ತದೆ. ಈರುಳ್ಳಿ ಖರೀದಿಸುವಾಗ ವಿಂಚೂರಿನಲ್ಲಿ ನಡೆಯುವ ಹರಾಜಿನಲ್ಲಿ ಭಾಗವಹಿಸಲು ನಮಗೆ ಅನುಮತಿ ಇದೆ. ಆದರೆ ಲಸಲ್‌ಗಾಂವ್‌ನ ಸ್ಥಳೀಯ ವ್ಯಾಪಾರಿಗಳು ಇದನ್ನು ವಿರೋಧಿಸುತ್ತಿದ್ದಾರೆ. ಇದು ಬಹಳ ದುಃಖಕರ ಸಂಗತಿ ಎಂದು ಸಾಧನಾ ಜಾಧವ್ ಹೇಳಿದರು.

ABOUT THE AUTHOR

...view details