ಕೊಲ್ಹಾಪುರ (ಮಹಾರಾಷ್ಟ್ರ): ದೇಶದಲ್ಲೇ ಅತಿ ದೊಡ್ಡ ಚಿಟ್ಟೆ ಕೊಲ್ಹಾಪುರ ಜಿಲ್ಲೆಯ ರಾಧಾನಗರಿಯಲ್ಲಿ ಕಂಡುಬಂದಿದೆ. ಈ ಚಿಟ್ಟೆಯ ಹೆಸರು ಸದರ್ನ್ ಬರ್ಡ್ ವಿಂಗ್. ರಾಧಾನಗರಿ ಅಭಯಾರಣ್ಯದಲ್ಲಿರುವ ಚಿಟ್ಟೆ ಉದ್ಯಾನದಲ್ಲಿ ಆಕರ್ಷಕವಾಗಿರುವ ಚಿಟ್ಟೆ ಕಾಣಿಸಿತು.
ಚಿಟ್ಟೆಯನ್ನು 'ಸಹ್ಯಾದ್ರಿ ಬರ್ಡ್‌ವಿಂಗ್' ಎಂದೂ ಸಹ ಕರೆಯಲಾಗುತ್ತದೆ. ದೇಶದಲ್ಲೇ ಅತ್ಯಂತ ಚಿಕ್ಕ ಚಿಟ್ಟೆ ಕೂಡ ಇದೇ ಉದ್ಯಾನದಲ್ಲಿದೆ. ಸದರ್ನ್ ಬರ್ಡ್‌ವಿಂಗ್ ಅನ್ನು ದೇಶದ ಅತಿದೊಡ್ಡ ಚಿಟ್ಟೆ ಎಂದು ದಾಖಲಿಸಲಾಗಿದೆ. ಇದು ಇತರ ಚಿಟ್ಟೆಗಳಿಗಿಂತ ಗಾತ್ರದಲ್ಲಿ ಹಲವು ಪಟ್ಟು ದೊಡ್ಡದು. ಸುಮಾರು 150 ರಿಂದ 200 ಮಿ.ಮೀ ಗಾತ್ರ ಹೊಂದಿದೆ ಎಂದು ಸಂಶೋಧಕರು ಹೇಳುತ್ತಾರೆ.
ಈ ಚಿಟ್ಟೆಯನ್ನು ವಿವಿಧ ಬಣ್ಣಗಳಲ್ಲಿ ಕಾಣಬಹುದು. ಚಿನ್ನದ ಮೈಬಣ್ಣವಿದ್ದರೆ ರೆಕ್ಕೆಗಳು ನೀಲಿ ಬಣ್ಣವನ್ನು ಹೊಂದಿರುತ್ತವೆ. ಚಿಟ್ಟೆಯ ವಿಡಿಯೋವನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಇಲ್ಲಿಯವರೆಗೆ ಈ ಉದ್ಯಾನವನದಲ್ಲಿ 55 ವಿಶೇಷ ಚಿಟ್ಟೆಗಳು ಮತ್ತು ದಾಜಿಪುರ ಅಭಯಾರಣ್ಯದಲ್ಲಿ 140 ಕ್ಕೂ ಹೆಚ್ಚು ಚಿಟ್ಟೆಗಳು ಕಂಡುಬಂದಿವೆ.